ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್-1ಬಿ ವೀಸಾ ಹೊರಗುತ್ತಿಗೆ ಉದ್ಯೋಗಿಗಳಿಗಲ್ಲ: ಟ್ರಂಪ್ ಹೊಸ ನೀತಿ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 9: ವಲಸಿಗರ ಮೇಲೆ ಕಡಿವಾಣ ಹಾಕಲು ತನ್ನ ವೀಸಾ ನೀತಿಗಳಲ್ಲಿ ಭಾರಿ ಬದಲಾವಣೆಗಳನ್ನು ತರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಸ್ತಿತ್ವದಲ್ಲಿರುವ ಎಚ್‌-1ಬಿ ವೀಸಾ ನಿಯಾವಳಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲು ಬಯಸಿದ್ದಾರೆ.

ಎಚ್‌-1ಬಿ ವೀಸಾ ಇನ್ನು ಮುಂದೆ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡಲು ಬರುವವರನ್ನು ನಿಯಂತ್ರಿಸಿ, ಅತ್ಯಧಿಕ ಕೌಶಲವುಳ್ಳ ವಿದೇಶಿಗರಿಗೆ ಮಾತ್ರ ಈ ಅನುಕೂಲತೆ ಕಲ್ಪಿಸುವ ಉದ್ದೇಶ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಗಡಿಪಾರು ನೀತಿ: ಭಾರತೀಯ ವಲಸಿಗರಿಗೆ ತಾತ್ಕಾಲಿಕ ನಿರಾಳತೆಅಮೆರಿಕ ಗಡಿಪಾರು ನೀತಿ: ಭಾರತೀಯ ವಲಸಿಗರಿಗೆ ತಾತ್ಕಾಲಿಕ ನಿರಾಳತೆ

ತಂತ್ರಜ್ಞಾನದಂತಹ ಅತ್ಯುನ್ನತ ಕೌಶಲಗಳ ಪದವಿ ಪಡೆದವರು ಮಾತ್ರ ದೇಶದಲ್ಲಿ ಉಳಿದುಕೊಳ್ಳುವಂತೆ ಆಗಬೇಕು. ಇದಕ್ಕೆ ಸರಿಯಾದ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಅನೇಕ ಬಾರಿ ಅವರು ಹೇಳಿದ್ದರು. ಅವರು ಒಟ್ಟಾರೆ ವಲಸೆ ನೀತಿಯ ತುಂಬಾ ಸಕಾರಾತ್ಮಕವಾದ ಭಾಗವನ್ನೇ ಆಯ್ದುಕೊಂಡಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

H-1b Visa is not for outsourcing jobs is for highly skilled trump

ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!

ಡೊನಾಲ್ಡ್ ಟ್ರಂಪ್ ಅವರು ಮೆರಿಟ್ ವಲಸೆಯ ಬಗ್ಗೆ ಮಾತನಾಡುತ್ತಿದ್ದರು. ಎಚ್‌-1ಬಿ ಈ ಅರ್ಹತೆ ಆಧಾರದ ವಲಸೆ ಅವಕಾಶಕ್ಕೆ ಹೊಂದಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಎಚ್1 ಬಿ ಪ್ರೀಮಿಯಂ ವೀಸಾ ವಿತರಣೆ ತಾತ್ಕಾಲಿಕ ತಡೆ ಎಚ್1 ಬಿ ಪ್ರೀಮಿಯಂ ವೀಸಾ ವಿತರಣೆ ತಾತ್ಕಾಲಿಕ ತಡೆ

ಟ್ರಂಪ್ ಅವರ ಬಯಕೆಯಂತೆ ಈ ನಿಯಮಾವಳಿಗಳನ್ನು ಅಳವಡಿಸಿದರೆ ತಂತ್ರಜ್ಞಾನ ಕ್ಷೇತ್ರವಲ್ಲದೆ ಬೇರೆ ಬೇರೆ ವಲಯಗಳಲ್ಲಿ ಅಮೆರಿಕದಲ್ಲಿ ದುಡಿಯುತ್ತಿರುವ ಹೆಚ್ಚಿನ ಭಾರತೀಯರಿಗೆ ಸಮಸ್ಯೆ ಉಂಟಾಗಲಿದೆ.

English summary
The Donald Trump administration wants to make changes in the existing H-1B provisions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X