• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಚ್-1ಬಿ ವೀಸಾ ರದ್ದು: ಭಾರತೀಯರಿಗೆ ಹೊಡೆತ ಕೊಡುತ್ತಾ ಟ್ರಂಪ್ ನೀತಿ?

|

ವಾಶಿಂಗ್ಟನ್, ಜೂನ್.23: ನೊವೆಲ್ ಕೊರೊನಾವೈರಸ್ ಹಾವಳಿಗೆ ಅಮೆರಿಕಾ ತತ್ತರಿಸಿ ಹೋಗಿದೆ. ಪ್ರತಿನಿತ್ಯ ಸಾವಿರಾರು ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

   ಪೌರಕಾರ್ಮಿಕರು ನೀರು ಕೇಳಿದ್ದಕ್ಕೆ ಅಮಾನವೀಯವಾಗಿ ನಡೆದುಕೊಂಡ‌ ಮಹಿಳೆ | Oneindia Kannada

   ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 23,88,153 ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ. ಮಹಾಮಾರಿಗೆ ದೇಶದಲ್ಲಿ ಇದುವರೆಗೂ 1,22,610ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು 10,02,929 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

   ಎಚ್1ಬಿ ವೀಸಾ : ಭಾರತದ ಐಟಿ ಇಂಡಸ್ಟ್ರಿಗೆ ಕೆಟ್ಟ ಸುದ್ದಿ

   ಕೊರೊನಾವೈರಸ್ ಅಟ್ಟಹಾಸಕ್ಕೆ ಲಕ್ಷಾಂತರ ಜೀವಗಳು ಬಲಿಯಾಗಿರುವ ಅಮೆರಿಕಾದಲ್ಲಿ ನಿರುದ್ಯೋಗದ ಸಮಸ್ಯೆ ಎದುರಾಗಿದೆ. ಈ ನಿರುದ್ಯೋಗ ಸಮಸ್ಯೆ ನೀಗಿಸುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು ಹೊಸ ವಿದೇಶಾಂಗ ನೀತಿಯನ್ನು ಜಾರಿಗೊಳಿಸಿದೆ.

   ತಾತ್ಕಾಲಿಕ ಉದ್ಯೋಗ ವೀಸಾ ರದ್ದುಗೊಳಿಸಿದ ಅಮೆರಿಕಾ

   ತಾತ್ಕಾಲಿಕ ಉದ್ಯೋಗ ವೀಸಾ ರದ್ದುಗೊಳಿಸಿದ ಅಮೆರಿಕಾ

   ಕೊರೊನಾವೈರಸ್ ಭೀತಿ ನಡುವೆ ಅಮೆರಿಕಾಯದಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವು ತಾತ್ಕಾಲಿಕ ಉದ್ಯೋಗ ವೀಸಾ ವಿತರಣೆಯನ್ನು ರದ್ದುಗೊಳಿಸುವುದಾಗಿ ಆದೇಶಿಸಿದೆ. 2020ರ ವರ್ಷಾಂತ್ಯದವರೆಗೂ ವಿದೇಶಿಗರಿಗೆ ಉದ್ಯೋಗ ವೀಸಾ ನೀಡದಿರಲು ತೀರ್ಮಾನಿಸಲಾಗಿದೆ. ಡಿಸೆಂಬರ್ ವರೆಗೂ ವಿದೇಶಿ ಪ್ರಜೆಗಳಿಗೆ ಯಾವುದೇ ರೀತಿ ವೀಸಾವನ್ನು ನೀಡದಿರಲು ನಿರ್ಧರಿಸಿದೆ.

   ಹಸಿರು ಕಾರ್ಡ್ ವಿತರಣೆ ನಿರ್ಬಂಧಿಸಿದ ಟ್ರಂಪ್

   ಹಸಿರು ಕಾರ್ಡ್ ವಿತರಣೆ ನಿರ್ಬಂಧಿಸಿದ ಟ್ರಂಪ್

   ಅಮೆರಿಕಾದಲ್ಲಿ ಕೊರೊನಾವೈರಸ್ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಕಳೆದ ಏಪ್ರಿಲ್ ತಿಂಗಳಿನಲ್ಲೇ ಹೆಚ್-1ಬಿ ವೀಸಾ ಹಾಗೂ ಹೆಚ್-4 ವೀಸಾ ವಿತರಣೆಗೆ ನಿರ್ಬಂಧ ವಿಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದರು. ಈಗಾಗಲೇ ವೀಸಾ ಪಡೆದು ಅಮೆರಿಕಾದಲ್ಲೇ ವಾಸವಿರುವ ಪ್ರಜೆಗಳಿಗೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಅಮೆರಿಕಾದಲ್ಲಿಯೇ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮುಂದೆ ಇಲ್ಲಿಯೇ ಉದ್ಯೋಗ ಮಾಡಲು ಬಯಸುವವರಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

   ಅಮೆರಿಕಾದಲ್ಲಿ ಎಲ್-1, ಜೆ-1 ವೀಸಾ ವಿನಾಯಿತಿ

   ಅಮೆರಿಕಾದಲ್ಲಿ ಎಲ್-1, ಜೆ-1 ವೀಸಾ ವಿನಾಯಿತಿ

   ಅಂತಾರಾಷ್ಟ್ರೀಯ ಕಂಪನಿಗಳ ಆಂತರಿಕ ವರ್ಗಾವಣೆಗಾಗಿ ನೀಡುವ ಎಲ್-1 ವೀಸಾ ಹಾಗೂ ವೈದ್ಯರು ಹಾಗೂ ಸಂಶೋಧಕರಿಗೆ ನೀಡುವ ಜೆ-1 ವೀಸಾಗಳ ವಿತರಣೆಯನ್ನೂ ಅಮೆರಿಕಾದಲ್ಲಿ ರದ್ದುಗೊಳಿಸಲಾಗಿದೆ. ಕೊರೊನಾವೈರಸ್ ಸೋಂಕಿತ ಸಂಶೋಧನಾ ಕಂಪನಿಗಳು ಮತ್ತು ಸಂಶೋಧಕರು, ವೈದ್ಯರಿಗೆ ಮಾತ್ರ ಸ್ವಲ್ಪಮಟ್ಟಿನ ವಿನಾಯಿತಿಯನ್ನು ನೀಡಲಾಗಿದೆ.

   5.25 ಲಕ್ಷ ಉದ್ಯೋಗ ಸೃಷ್ಟಿಗೆ ಅಮೆರಿಕಾ ಒತ್ತು

   5.25 ಲಕ್ಷ ಉದ್ಯೋಗ ಸೃಷ್ಟಿಗೆ ಅಮೆರಿಕಾ ಒತ್ತು

   ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್-1ಬಿ ವೀಸಾ ನೀಡದಿರುವ ತೀರ್ಮಾನದಿಂದ ಸ್ವದೇಶಿ ಪ್ರಜೆಗಳಿಗೆ 5,25,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಆದರೆ ಹೆಚ್-ಐಬಿ ವೀಸಾ ಆಡಳಿತದ ವಿಶಾಲ ಸುಧಾರಣೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನ ನೀಡಿದ್ದಾರೆ. ಅದು ಪ್ರಸ್ತುತ ಲಾಟರಿ ವ್ಯವಸ್ಥೆಯನ್ನು ಮೆರಿಟ್ ಆಧಾರಿತ ವ್ಯವಸ್ಥೆಯಿಂದ ಬದಲಾಯಿಸಲಿದ್ದು, ಇದರಿಂದ ಹೆಚ್ಚಿನ ವೇತನ ನೀಡುವವರಿಗೆ ಅನುಕೂಲವಾಗಿರುತ್ತದೆ.

   ಉದ್ಯೋಗದಲ್ಲಿ ಅಮೆರಿಕನ್ನರಿಗಿಲ್ಲ ಪೈಪೋಟಿ

   ಉದ್ಯೋಗದಲ್ಲಿ ಅಮೆರಿಕನ್ನರಿಗಿಲ್ಲ ಪೈಪೋಟಿ

   ಸ್ವದೇಶಿ ಪ್ರಜೆಗಳಿಗೆ ಉದ್ಯೋಗವನ್ನು ಸೃಷ್ಟಿಸುವ ಉದ್ದೇಶದಿಂದ ವಿದೇಶಿಗರಿಗೆ ನೀಡುತ್ತಿದ್ದ ಹೆಚ್-1 ಬಿ ವೀಸಾ ವಿತರಣೆಯನ್ನು ಡಿಸೆಂಬರ್ ವರೆಗೂ ರದ್ದುಗೊಳಿಸಿದೆ. ಇದರಿಂದ ಉದ್ಯೋಗವನ್ನು ಪ್ರವೇಶಿಸುವಲ್ಲಿ ಅಮೆರಿಕಾ ಪ್ರಜೆಗಳಿಗೆ ಬೇರೆ ರಾಷ್ಟ್ರದ ಪ್ರಜೆಗಳಿಂದ ಪೈಪೋಟಿ ಸೃಷ್ಟಿಯಾಗುವುದಿಲ್ಲ. ವೇತನ ಹಾಗೂ ಕೌಶಲ್ಯದ ವಿಚಾರದಲ್ಲಿ ಯಾವುದೇ ಪೈಪೋಟಿ ಇರುವುದಿಲ್ಲ.

   85,000 ಭಾರತೀಯ ಉದ್ಯೋಗಿಗಳ ಮೇಲೆ ಪ್ರಭಾವ

   85,000 ಭಾರತೀಯ ಉದ್ಯೋಗಿಗಳ ಮೇಲೆ ಪ್ರಭಾವ

   ಅಮೆರಿಕಾ ಹೆಚ್-1ಬಿ ವೀಸಾ ರದ್ದುಗೊಳಿಸಿರುವುದು ಭಾರತೀಯರ ಮೇಲೆ ಹೆಚ್ಚು ಪ್ರಭಾನ ಬೀರಿದೆ. ತಂತ್ರಜ್ಞಾನ ವಿಭಾಗ ಅತಿಹೆಚ್ಚು ಭಾರತೀಯರು ಅಮೆರಿಕಾದಲ್ಲೇ ಉದ್ಯೋಗ ಮಾಡುತ್ತಿದ್ದಾರೆ. ಈ ವರ್ಷವೂ ಕೂಡಾ 2,25,000 ಭಾರತೀಯರು ಹೆಚ್-1ಬಿ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 85,000 ಅರ್ಜಿದಾರರಿಗೆ ವೀಸಾ ನೀಡಿಯೂ ಆಗಿತ್ತು. ಆದರೆ ಇದೀಗ ಸರ್ಕಾರದ ಆದೇಶದಿಂದ 85,000 ಭಾರತೀಯ ಉದ್ಯೋಗಿಗಳಿಗೆ ಆಘಾತವನ್ನು ಉಂಟು ಮಾಡಿದೆ.

   ಅಮೆರಿಕಾದ ಹೊಸ ನೀತಿಯಿಂದ ಭಾರತೀಯರಿಗೇ ಹೆಚ್ಚು ನಷ್ಟ?

   ಅಮೆರಿಕಾದ ಹೊಸ ನೀತಿಯಿಂದ ಭಾರತೀಯರಿಗೇ ಹೆಚ್ಚು ನಷ್ಟ?

   ವಿಶ್ವದ ದೊಡ್ಡಣ್ಣ ಅಮೆರಿಕಾ ತೆಗೆದುಕೊಂಡ ನಿರ್ಧಾರದಿಂದ ಅತಿಹೆಚ್ಚು ನಷ್ಟು ಎದುರಿಸುತ್ತಿರುವುದೇ ಭಾರತೀಯರು. ಏಕೆಂದರೆ ಅಮೆರಿಕಾ ನೀಡಿರುವ ಒಟ್ಟು ವೀಸಾ ಪ್ರಮಾಣದಲ್ಲಿ ಶೇಕಡಾ 4/3ರಷ್ಟು ಭಾಗ ಭಾರತೀಯರೇ ಆಗಿದ್ದಾರೆ. ಅಂದರೆ ಒಟ್ಟು ನಾಲ್ಕು ವೀಸಾಗಳನ್ನು ನೀಡಿದ್ದಲ್ಲಿ ಅದರಲ್ಲಿ ಮೂವರು ಭಾರತೀಯರೇ ಇದ್ದಾರೆ. ಹೀಗಾಗಿ ಭಾರತೀಯರ ಮೇಲೆ ಅಮೆರಿಕಾದ ಈ ನಿರ್ಧಾರ ಖಡಾಖಂಡಿತವಾಗಿ ಪ್ರಭಾವ ಬೀರಲಿದೆ. ಅಂತಾರಾಷ್ಟ್ರೀಯ ಕಂಪನಿಗಳಾದ ವಿಪ್ರೋ, ಟಿಸಿಎಸ್, ಇನ್ಫೋಸಿಸ್, ಕಾಗ್ನಿಜೆಂಟ್ ನಲ್ಲಿ ತಂತ್ರಜ್ಞರ ವಿಭಾಗದಲ್ಲಿ ಭಾರತೀಯರೇ ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೇ.60ರಷ್ಟು ಸಿಬ್ಬಂದಿ ಅಂದರೆ ಸರಿಸುಮಾರು 3 ರಿಂದ ನಾಲ್ಕು ಲಕ್ಷ ಭಾರತೀಯ ಇಂಜೀನಿಯರ್ಸ್ ಹೆಚ್-1ಬಿ ವೀಸಾ ಹೊಂದಿದ್ದಾರೆ.

   ಅಂತಾರಾಷ್ಟ್ರೀಯ ಕಂಪನಿಗಳಿಗೆ ಅನಿವಾರ್ಯತೆ ಸೃಷ್ಟಿ

   ಅಂತಾರಾಷ್ಟ್ರೀಯ ಕಂಪನಿಗಳಿಗೆ ಅನಿವಾರ್ಯತೆ ಸೃಷ್ಟಿ

   ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣವಾಗಿರುವ ವಲಸೆ ನೀತಿಯನ್ನು ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆ ವಲಸೆಗಾರ, ವಲಸೆರಹಿತ ವೀಸಾ ನಿಯಮಗಳನ್ನು ಬೆಂಬಲಿಸುತ್ತಿರುವುದರಿಂದ, ಭಾರತೀಯ ಐಟಿ ಸಂಸ್ಥೆಗಳು ಕಳೆದ ಎರಡು ವರ್ಷಗಳಿಂದ ಅಮೆರಿಕಾದಲ್ಲಿ ಹೆಚ್ಚಿನ ಸ್ಥಳೀಯರನ್ನು ನೇಮಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ಜೊತೆಗೆ ಎಚ್ 1-ಬಿ ವೀಸಾಗಳ ಅರ್ಜಿಗಳನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಇದರಿಂದ ಅತಿಹೆಚ್ಚು ಭಾರತೀಯರನ್ನೇ ಹೊಂದಿರುವ ಟಿಸಿಎಸ್ ಕಂಪನಿಯಲ್ಲಿ 20,000 ಅಮೆರಿಕಾದ ಉದ್ಯೋಗಿಗಳಿಗೆ ಸ್ಥಾನ ನೀಡಲಾಗಿದೆ.

   English summary
   USA President Donald Trump Suspends H-1B, H-4 Visas Till Year End. How It Will Affect Indian IT industry.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X