ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಟೂರು ಮೂಲದ ಬಾಲಕಿ ಶ್ರವ್ಯ ಗೌರವಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 17: ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‌ಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಶುಕ್ರವಾರ ವೈಟ್‌ಹೌಸ್‌ ಕಚೇರಿಯಲ್ಲಿ ಗೌರವಿಸಿದ್ದಾರೆ.

ನರ್ಸ್‌ಗಳಿಗೆ, ಅಗ್ನಿಶಾಮಕದಳ ಸಿಬ್ಬಂದಿಗೆ ಕುಕ್ಕೀಸ್ ಕೊಡುಗೆ ನೀಡಿದ ಮೇರಿಲ್ಯಾಂಡ್‌ ಸ್ಕೌಟ್ಸ್ ತಂಡದ ಮೂವರು ಬಾಲಕಿಯರನ್ನು ಗುರುತಿಸಿ ಟ್ರಂಪ್ ಸತ್ಕರಿಸಿದ್ದಾರೆ. ಈ ಮೂವರಲ್ಲಿ ಭಾರತೀಯ ಮೂಲಕದ ಹುಡುಗಿ ಶ್ರವ್ಯ ಅಣ್ಣಪ್ಪ ರೆಡ್ಡಿ ಕೂಡ ಒಬ್ಬರು ಎನ್ನುವುದು ವಿಶೇಷ.

WHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕWHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕ

ಮೇರಿಲ್ಯಾಂಡ್‌ನ ಎಲ್ಕ್ರಿಡ್ಜ್ ಮೂಲದ ಸ್ಕೌಟ್ಸ್ ಟ್ರೂಪ್ 744ರ ಬಾಲಕಿಯರಾದ ಲೈಲಾ ಖಾನ್, ಲಾರೆನ್ ಮ್ಯಾಟ್ನಿ ಮತ್ತು ಶ್ರವ್ಯ ಅಣ್ಣಪ್ಪ ರೆಡ್ಡಿ ಯುಎಸ್‌ನಲ್ಲಿ ಕೊರೊನಾ ತಡೆಯುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ನರ್ಸ್‌ಗಳಿಗೆ, ಅಗ್ನಿಶಾಮಕ ಸಿಬ್ಬಂದಿಗಳಿಗೆ ಸಹಾಯ ಮಾಡಿದ್ದರು. ಇದನ್ನು ಗುರುತಿಸಿ ವೈಟ್‌ಹೌಸ್‌ ಕಚೇರಿ ಪ್ರಶಂಸೆ ಪತ್ರೆ ನೀಡಿ ಸತ್ಕರಿಸಿದೆ.

 Guntur Based Sravya Annappareddy Honored At White House

ಅಂದ್ಹಾಗೆ, 10 ವರ್ಷದ ಶ್ರವ್ಯ ಅಣ್ಣಪ್ಪ ರೆಡ್ಡಿ ಹ್ಯಾನೋವರ್ ಹಿಲ್ಸ್ ಎಲಿಮೆಂಟರಿ ಶಾಲೆಯಲ್ಲಿ 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಗರ್ಲ್ ಸ್ಕೌಟ್ಸ್ ಟ್ರೂಪ್ ಸದಸ್ಯೆಯಾಗಿದ್ದಾರೆ. ಶ್ರವ್ಯ ಅಣ್ಣಪ್ಪ ರೆಡ್ಡಿ ಅವರ ತಂದೆ-ತಾಯಿ ಆಂಧ್ರಪ್ರದೇಶದ ಗುಂಟೂರಿನವರು. ಈಗ ಯುಎಸ್‌ ಮೇರಿಲ್ಯಾಂಡ್‌ನಲ್ಲಿ ವಾಸವಾಗಿದ್ದಾರೆ.

ಇನ್ನು ಕೊರೊನಾ ವಾರಿಯರ್ಸ್ ಗೌರವಿಸಿದ ಟ್ರಂಪ್ ಮಾತನಾಡಿದ 'ಕೊರೊನಾ ವಿರುದ್ಧದ ಹೋರಾಟದಲ್ಲಿ ಲಕ್ಷಾಂತರ ಅಮೆರಿಕನ್ನರು ಒಟ್ಟುಗೂಡಿ ಒಂದಾಗಿದ್ದಾರೆ. ಕೊವಿಡ್ ಸಂಕಷ್ಟದಲ್ಲಿದ್ದವರನ್ನು ರಕ್ಷಿಸುವ ಮತ್ತು ಅವರಿಗೆ ಸಹಾಯ ಮಾಡುವ ಕೆಲಸ ಮಾಡಿದ ವೀರರನ್ನು ಗೌರವಿಸುವುದು ಒಳ್ಳೆಯ ಕೆಲಸ'' ಎಂದು ಶ್ಲಾಘಿಸಿದರು.

English summary
Guntur based Sravya Annappareddy honored at white house from President Trump and first lady Melania Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X