ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಹೂದಿಗಳೆಲ್ಲ ಸಾಯಬೇಕು ಎಂದು ಕೂಗುತ್ತಾ ಶೂಟೌಟ್, ಆರೋಪಿ ಬಂಧನ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 28: ಅಮೆರಿಕದ ಪಿಟ್ಸ ಬರ್ಗ್ ನಲ್ಲಿ ಶನಿವಾರ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. 6 ಮಂದಿ ಗಾಯಗೊಂಡಿದ್ದು, ಆ ಪೈಕಿ 4 ಮಂದಿ ಪೊಲೀಸರಿದ್ದಾರೆ. ಪಿಟ್ಸ್ ಬರ್ಗ್ ನ ಯಹೂದಿಗಳ ಶ್ರದ್ಧಾಕೇಂದ್ರದಲ್ಲಿ ಈ ದಾಳಿ ನಡೆದಿದ್ದು, ದಾಳಿಕೋರನನ್ನು ಬಂಧಿಸಲಾಗಿದೆ.

ಸ್ವಾಟ್ ತಂಡದ ಜತೆಗೆ ಗುಂಡಿನ ಚಕಮಕಿ ನಡೆದ ನಂತರ 46 ವರ್ಷದ ರಾಬರ್ಟ್ ಬೌವರ್ಸ್ ನನ್ನು ವಶಕ್ಕೆ ಪಡೆಯಲಾಗಿದೆ. 'ಎಲ್ಲ ಯಹೂದಿಗಳು ಸಾಯಬೇಕು' ಎಂದು ಘೋಷಣೆ ಮಾಡುತ್ತಾ ಆತ ಗುಂಡಿನ ದಾಳಿ ನಡೆಸಿದ್ದಾನೆ. ಅಮೆರಿಕ ನಾಗರಿಕ ಕಾನೂನು ಉಲ್ಲಂಘನೆಯೂ ಸೇರಿದಂತೆ ಹಿಂಸಾಚಾರ, ಶಸ್ತ್ರಾಸ್ತ್ರ ಹೊಂದಿದ ಅಪರಾಧಗಳಿಗಾಗಿ ಆತನ ವಿರುದ್ಧ ಒಟ್ಟು 29 ಕ್ರಿಮಿನಲ್ ಪ್ರಕಣಗಳನ್ನು ದಾಖಲಿಸಲಾಗಿದೆ.

ಬಿಳಿಯರನ್ನು ಬಿಳಿಯರು ಕೊಲ್ಲೋಲ್ಲ ಎಂದು ಗುಂಡು ಹಾರಿಸಿದ ಗನ್ ಮ್ಯಾನ್! ಬಿಳಿಯರನ್ನು ಬಿಳಿಯರು ಕೊಲ್ಲೋಲ್ಲ ಎಂದು ಗುಂಡು ಹಾರಿಸಿದ ಗನ್ ಮ್ಯಾನ್!

ರಾಬರ್ಟ್ ಬೌವರ್ಸ್ ನಡೆಸಿರುವುದು ಮಾನವೀಯತೆ ಮೇಲೆ ನಡೆಸಿರುವ ಹೇಯ ದಾಳಿ. ನಮ್ಮ ಇಡೀ ತಂಡವನ್ನು ಈ ದ್ವೇಷ ಕೃತ್ಯದ ಬಗ್ಗೆ ತನಿಖೆ ಮತ್ತು ವಿಚಾರಣೆ ನಡೆಸಲು ನಿಯೋಜಿಸಲಾಗುವುದು ಎಂದು ಅಮೆರಿಕದ ಪಶ್ಚಿಮ ಪೆನ್ಸಿಲ್ವೇನಿಯಾದ ಅಟಾರ್ನಿ ಸ್ಕಾಟ್ ಬ್ರಾಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಮರಣದಂಡನೆ ವಿಧಿಸುವಂತೆ ಮನವಿ

ಮರಣದಂಡನೆ ವಿಧಿಸುವಂತೆ ಮನವಿ

ಇದಕ್ಕೂ ಮುನ್ನ ಅಮೆರಿಕದ ಅಟಾರ್ನಿ ಜನರಲ್ ಜೆಫ್ ಸೆಷನ್ಸ್ ಮಾತನಾಡಿ, ಆರೋಪಿಗೆ ಮರಣ ದಂಡನೆ ವಿಧಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಎಫ್ ಬಿಐನ ವಿಶೇಷ ಏಜೆಂಟ್ ಬಾಬ್ ಜೋನ್ಸ್, ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ನಿಂದ ಈ ಬಗ್ಗೆ ತನಿಖೆ ನಡೆಯುತ್ತಿದೆ. ಕಳೆದ ಇಪ್ಪತ್ತೆರಡು ವರ್ಷದಲ್ಲೇ ಎಫ್ ಬಿಐ ನೋಡಿದ ಭೀಕರ ಕೃತ್ಯ ಇದು. ಬೌವರ್ಸ್ ಒಬ್ಬನೇ ಈ ಕೃತ ಎಸಗಿದಂತಿದೆ ಎಂದಿದ್ದಾರೆ. ಟಿವಿ ವಾಹಿನಿಯೊಂದರ ಮಾಹಿತಿ ಪ್ರಕಾರ ಯಹೂದಿಗಳ ಶ್ರದ್ಧಾ ಕೇಂದ್ರದ ಕಟ್ಟಡ ಪ್ರವೇಶಿಸಿದ ಆರೋಪಿ, ಎಲ್ಲ ಯಹೂದಿಗಳು ಸಾಯಬೇಕು ಎಂದು ಕೂಗಿಕೊಂಡಿದ್ದಾನೆ. ಇದಕ್ಕೂ ಮುನ್ನ ಆನ್ ಲೈನ್ ನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಆತ, ಅಮೆರಿಕದಕದಲ್ಲಿ ಹೆಚ್ಚುತ್ತಿರುವ ಯಹೂದಿಗಳ ಸಂಖ್ಯೆಯನ್ನು ತಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ರೈಫಲ್ ಹಾಗೂ ಮೂರು ಹ್ಯಾಂಡ್ ಗನ್ ಗಳಿದ್ದವು

ರೈಫಲ್ ಹಾಗೂ ಮೂರು ಹ್ಯಾಂಡ್ ಗನ್ ಗಳಿದ್ದವು

ಬೌವರ್ಸ್ ಬಳಿ ರೈಫಲ್ ಹಾಗೂ ಮೂರು ಹ್ಯಾಂಡ್ ಗನ್ ಗಳಿದ್ದವು. ಯಹೂದಿಗಳ ಶ್ರದ್ಧಾ ಕೇಂದ್ರಕ್ಕೆ ಬರುವವರನ್ನು ಕೊಲ್ಲುವ ಉದ್ದೇಶದಿಂದಲೇ ಆತ ಬಂದಿದ್ದ. ಆದರೆ ಯಾವಾಗ ಸಮವಸ್ತ್ರ ಧರಿಸಿದ್ದ ಪೊಲೀಸರು ಎದುರಾದರೋ ಆಗ ಅಲ್ಲಿಂದ ಹೊರಟಿದ್ದಾನೆ. ಆಗ ಪೊಲೀಸರ ಜತೆ ಗುಂಡಿನ ಚಕಮಕಿ ನಡೆದಿದೆ. ಸ್ವಾಟ್ ತಂಡ ಬರುವ ಮುಂಚೆ ಬೌವರ್ಸ್ ಕಟ್ಟಡವನ್ನು ಮತ್ತೊಮ್ಮೆ ಪ್ರವೇಶಿಸಿದ್ದಾನೆ. ಶೂಟೌಟ್ ನಂತರ ಆತ ಶರಣಾಗಿದ್ದಾನೆ. ಆ ಕೂಡಲೇ ಬೌವರ್ಸ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತನಿಗೆ ಗುಂಡೇಟಿನಿಂದ ಗಾಯಗಳಾಗಿದ್ದವು. ಸಂತ್ರಸ್ತರನ್ನು ಕೂಡ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, 61 ವರ್ಷದ ಮಹಿಳೆ, 70 ಮಹಿಳೆಯ ಪುರುಷ ಹಾಗೂ 55 ವರ್ಷದ ಅಧಿಕಾರಿಯನ್ನು ಕೂಡ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯಲ್ಲಿ ಯಾವುದೇ ಮಕ್ಕಳು ಮೃತಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಪೊಲೀಸ್ ಅಧಿಕಾರಿಗಳಿಗೆ ಗುಂಡೇಟು ಬಿದ್ದಿದೆ. ಗಾಯಾಳುಗಳಾದ ಆರು ಮಂದಿ ಪೊಲೀಸರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಅಮೆರಿಕದ ಸಿನ್ಸಿನ್ನಾಟಿಯಲ್ಲಿ ಮತ್ತೆ ಶೂಟೌಟ್: ಮೂವರ ಸಾವು ಅಮೆರಿಕದ ಸಿನ್ಸಿನ್ನಾಟಿಯಲ್ಲಿ ಮತ್ತೆ ಶೂಟೌಟ್: ಮೂವರ ಸಾವು

ದಾಳಿ ನಡೆದ ವೇಳೆ ನೂರು ಮಂದಿ ಕಟ್ಟಡದಲ್ಲಿ ಇದ್ದರು

ದಾಳಿ ನಡೆದ ವೇಳೆ ನೂರು ಮಂದಿ ಕಟ್ಟಡದಲ್ಲಿ ಇದ್ದರು

ಈ ಘಟನೆ ನಡೆದ ಪ್ರದೇಶದ ಪಕ್ಕದಲ್ಲೇ ಇರುವ ಸ್ಕ್ವಿರೆಲ್ ಹಿಲ್ ನಲ್ಲಿ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶೂಟೌಟ್ ನಡೆದ ವೇಳೆ ಶಬ್ಬತ್ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಯಹೂದಿಗಳ ದೊಡ್ಡ ಮಟ್ಟದ ಹಬ್ಬಗಳ ದಿನದಂದು ಮಾತ್ರ ಪೊಲೀಸ್ ಕಾವಲು ಇರುತ್ತದೆ ಎಂದು ಮೈಕಲ್ ಐಸೆನ್ ಬರ್ಗ್ ತಿಳಿಸಿದ್ದಾರೆ. ಆ ದಿನ ಧಾರ್ಮಿಕ ವಿಶೇಷವಿತ್ತು. ಆದ್ದರಿಂದ ಶನಿವಾರದಂಥ ದಿನಗಳಲ್ಲಿ ಬಾಗಿಲು ತೆರೆದಿರುತ್ತದೆ. ಬಂದು-ಹೋಗಿ ಮಾಡಬಹುದು. ದಾಳಿ ನಡೆದ ವೇಳೆಯಲ್ಲಿ ನೂರು ಮಂದಿ ಆ ಕಟ್ಟಡದಲ್ಲಿ ಇದ್ದರು ಎಂದು ತಿಳಿದುಬಂದಿದೆ. ಪಿಟ್ಸ್ ಬರ್ಗ್ ನಗರದ ಕೇಂದ್ರ ಭಾಗದಲ್ಲಿ ಶನಿವಾರ ಶೋಕತಪ್ತ ಜನರು ಮೋಂಬತ್ತಿ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಅಗತ್ಯ ಇರುವ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ.

'ನಿಮ್ಮ ಹೆಂಡತಿ, ಮಗನಿಗೆ ಗುಂಡಿಕ್ಕಿದ್ದೇನೆ, ಹೋಗಿ ನೋಡಿ' ಎಂದ ಸೆಕ್ಯುರಿಟಿ ಗಾರ್ಡ್!'ನಿಮ್ಮ ಹೆಂಡತಿ, ಮಗನಿಗೆ ಗುಂಡಿಕ್ಕಿದ್ದೇನೆ, ಹೋಗಿ ನೋಡಿ' ಎಂದ ಸೆಕ್ಯುರಿಟಿ ಗಾರ್ಡ್!

ಸುರಕ್ಷತೆ ಇದ್ದರೆ ಹೀಗಾಗುತ್ತಿರಲಿಲ್ಲ

ಸುರಕ್ಷತೆ ಇದ್ದರೆ ಹೀಗಾಗುತ್ತಿರಲಿಲ್ಲ

ಆ ಕಟ್ಟಡದಲ್ಲಿ ಶಸ್ತ್ರಸಜ್ಜಿತ ಪಹರೆ ಹಾಕಿದ್ದರೆ ಈ ದುರ್ಘಟನೆಯನ್ನು ತಡೆಯಬಹುದಿತ್ತು. ಶ್ರದ್ಧಾಕೇಂದ್ರದ ಒಳ ಭಾಗದಲ್ಲಿ ಕೆಲವು ಮಟ್ಟಿಗಿನ ಸುರಕ್ಷತೆಯಾದರೂ ಹೊಂದಿದ್ದರೆ ಸನ್ನಿವೇಶ ಬೇರೆ ಥರ ಇರುತ್ತಿತ್ತು. ಆದರೆ ಸುರಕ್ಷತೆ ಇರಲಿಲ್ಲ ಎಂದು ಮಾಧ್ಯಮಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರಿಸಿದ್ದಾರೆ. ಅಮೆರಿಕದಲ್ಲಿ ಬಂದೂಕಿಗೆ ಸಂಬಂಧಿಸಿದಂತೆ ಇರುವ ಕಾನೂನುಗಳ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಶೂಟಿಂಗ್ ಮಾಡಿರುವುದು ಹೇಯ ಕೃತ್ಯ. ಈ ರೀತಿಯ ದ್ವೇಷದ ಆಲೋಚನೆಯನ್ನು ಬಿಡಬೇಕು. ಸದ್ಯದಲ್ಲೇ ಪಿಟ್ಸ್ ಬರ್ಗ್ ಗೆ ನೀಡುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಯಾವಾಗ ಭೇಟಿ ನೀಡುತ್ತಾರೆ ಎಂಬುದನ್ನು ತಿಳಿಸಿಲ್ಲ.

English summary
A gunman yelling, “All Jews must die,” stormed a Pittsburgh synagogue during Saturday services, killing 11 worshippers and wounding six other people including four police officers, before he was arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X