ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್‌ರನ್ನು ಮತ್ತೆ ಕೆಣಕಿದ ಗ್ರೆಟಾ ಥನ್‌ಬರ್ಗ್

|
Google Oneindia Kannada News

ವಾಷಿಂಗ್ಟನ್, ಜನವರಿ 21: ಅಮೆರಿಕ ಅಧ್ಯಕ್ಷ ಸ್ಥಾನದಿಂದ ಬುಧವಾರ ಕೆಳಗಿಳಿದ ಡೊನಾಲ್ಡ್ ಟ್ರಂಪ್, ಶ್ವೇತಭವನದ ಅಧಿಕಾರಕ್ಕೆ ವಿದಾಯ ಹೇಳಿದ್ದಾರೆ. ಕೊನೆಯ ಬಾರಿ ಸೇನಾ ವಿಮಾನವೇರಿ ನಿರ್ಗಮಿಸುವ ಮುನ್ನ ಅವರು ಕಮಾಂಡರ್-ಇನ್-ಚೀಫ್ ಆಗಿ ಕೊನೆಯ ಬಾರಿ ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರತ್ತ ಕೈಬೀಸುವ ಮೂಲಕ ಗುಡ್ ಬೈ ಹೇಳಿದರು.

ಈ ಸಂದರ್ಭವನ್ನು ಡೊನಾಲ್ಡ್ ಟ್ರಂಪ್ ಕಡು ವಿರೋಧಿ, ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಟೀಕಾಪ್ರಹಾರ ನಡೆಸಲು ಬಳಸಿಕೊಂಡಿದ್ದಾರೆ. ಟ್ರಂಪ್ ಕೈ ಬೀಸುವ ಫೋಟೊ ಹಂಚಿಕೊಂಡಿರುವ ಗ್ರೆಟಾ, ಇದನ್ನು ನೋಡಲು ಖುಷಿಯಾಗುತ್ತಿದೆ ಎಂದಿದ್ದಾರೆ.

11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಬಾಲಕಿ ಗ್ರೆಟಾ11 ತಿಂಗಳ ಬಳಿಕ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಬಾಲಕಿ ಗ್ರೆಟಾ

'ಅವರು ಉಜ್ವಲ ಮತ್ತು ಅದ್ಭುತ ಭವಿಷ್ಯದ ಕಡೆಗೆ ನೋಡುತ್ತಿರುವ ಬಹಳ ಸಂತುಷ್ಟ ವೃದ್ಧ ವ್ಯಕ್ತಿಯಂತೆ ಕಾಣಿಸುತ್ತಾರೆ. ನೋಡಿದ್ದು ಸಂತೋಷವಾಯಿತು' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಸಂಪ್ರದಾಯ ಮುರಿದ ಡೊನಾಲ್ಡ್ ಟ್ರಂಪ್, ಬೈಡನ್ ಪದಗ್ರಹಣದ ವೇಳೆ ರೆಸಾರ್ಟ್ ವಾಸ!ಸಂಪ್ರದಾಯ ಮುರಿದ ಡೊನಾಲ್ಡ್ ಟ್ರಂಪ್, ಬೈಡನ್ ಪದಗ್ರಹಣದ ವೇಳೆ ರೆಸಾರ್ಟ್ ವಾಸ!

ಪ್ಯಾರಿಸ್ ಒಪ್ಪಂದದಿಂದ ಡೊನಾಲ್ಡ್ ಟ್ರಂಪ್ ಹಿಂದೆ ಸರಿದ ಬಳಿಕ ಗ್ರೆಟಾ ಮತ್ತು ಟ್ರಂಪ್ ನಡುವೆ ತೀವ್ರ ಮಾತಿನ ಚಕಮಕಿಗಳು ನಡೆದಿದ್ದವು. 2019ರ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಸಮಾವೇಶದಲ್ಲಿ ಗ್ರೆಟಾ ಮಾಡಿದ ಭಾಷಣ ಅವರಿಗೆ ಜಾಗತಿಕ ಅಸ್ಮಿತೆ ನೀಡಿತ್ತು. ಮುಂದೆ ಓದಿ.

ವ್ಯಂಗ್ಯವಾಡಿದ್ದ ಟ್ರಂಪ್

ವ್ಯಂಗ್ಯವಾಡಿದ್ದ ಟ್ರಂಪ್

ಆಗ ಟ್ವೀಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, 'ಆಕೆ ಉಜ್ವಲ ಮತ್ತು ಅದ್ಭುತ ಭವಿಷ್ಯದ ಕಡೆಗೆ ನೋಡುತ್ತಿರುವ ಬಹಳ ಸಂತುಷ್ಟ ಚಿಕ್ಕ ಹುಡುಗಿಯಂತೆ ಕಾಣಿಸುತ್ತಾಳೆ. ನೋಡಿದ್ದು ಸಂತೋಷವಾಯಿತು' ಎಂದು ಹೇಳಿದ್ದರು. ಗ್ರೆಟಾ ಭಾಷಣದ ಬಳಿಕ ಟ್ರಂಪ್ ಟ್ವೀಟ್ ಮಾಡಿದ್ದರು. ಅದೇ ಟ್ವೀಟ್‌ನಲ್ಲಿ ಒಂದು ಪದವನ್ನು ಬದಲಿಸಿ ಗ್ರೆಟಾ ಈಗ ತಿರುಗೇಟು ನೀಡಿದ್ದಾರೆ.

ಆದರೆ ಈಗ ಅದಕ್ಕೆ ಟ್ವಿಟ್ಟರ್‌ನಲ್ಲಿಯೇ ಉತ್ತರ ನೀಡಲು ಡೊನಾಲ್ಡ್ ಟ್ರಂಪ್ ಅವರಿಗೆ ಸಾಧ್ಯವಿಲ್ಲ. ಏಕೆಂದರೆ ಟ್ರಂಪ್ ವೈಯಕ್ತಿಕ ಖಾತೆಯನ್ನು ಟ್ವಿಟ್ಟರ್ ಶಾಶ್ವತವಾಗಿ ಸ್ಥಗಿತಗೊಳಿಸಿದೆ.

ಚಿಲ್, ಡೊನಾಲ್ಡ್ ಚಿಲ್!

ಚಿಲ್, ಡೊನಾಲ್ಡ್ ಚಿಲ್!

ಅಂದಹಾಗೆ, ಗ್ರೆಟಾ ಮಾತಿನ ಮೂಲಕ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ನವೆಂಬರ್‌ ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಟ್ರಂಪ್ ಆರೋಪಿಸಿದ್ದರು. ಆಗ 'ಎಷ್ಟು ಹಾಸ್ಯಾಸ್ಪದ. ಡೊನಾಲ್ಡ್ ಟ್ರಂಪ್ ಮೊದಲು ತಮ್ಮ ಕೋಪ ನಿಯಂತ್ರಣ ಸಮಸ್ಯೆಯತ್ತ ಗಮನ ಹರಿಸಬೇಕು. ಬಳಿಕ ತಮ್ಮ ಸ್ನೇಹಿತರೊಬ್ಬರ ಜತೆಗೆ ಒಳ್ಳೆಯ ಹಳೆಯ ಶೈಲಿಯ ಸಿನಿಮಾ ನೀಡಲು ಹೋಗಬೇಕು. ಚಿಲ್, ಡೊನಾಲ್ಡ್ ಚಿಲ್!' ಎಂದು ಗ್ರೆಟಾ ಥನ್‌ಬರ್ಗ್ ಟ್ವೀಟ್ ಮಾಡಿದ್ದರು. ಇದೇ ಸಾಲುಗಳನ್ನು ಬಳಸಿ ಟ್ರಂಪ್ 2019ರಲ್ಲಿ ಗ್ರೆಟಾರನ್ನು ಲೇವಡಿ ಮಾಡಿದ್ದರು.

ಅಧಿಕಾರದಿಂದ ಇಳಿಯುತ್ತಿದ್ದಂತೆಯೇ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಚೀನಾಅಧಿಕಾರದಿಂದ ಇಳಿಯುತ್ತಿದ್ದಂತೆಯೇ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಂಡ ಚೀನಾ

ಅಮೆರಿಕಕ್ಕೆ ನಷ್ಟ ಎಂದಿದ್ದ ಟ್ರಂಪ್

ಅಮೆರಿಕಕ್ಕೆ ನಷ್ಟ ಎಂದಿದ್ದ ಟ್ರಂಪ್

ಐತಿಹಾಸಿಕ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರಳಿ ಸೇರುವ ಆದೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಬುಧವಾರ ಸಹಿ ಹಾಕಿದರು. ಒಪ್ಪಂದ ನಡೆದ ಕೆಲವೇ ಸಮಯಕ್ಕೆ ಅದರ ವಿರುದ್ಧ ತಕರಾರು ಸಲ್ಲಿಸಿದ್ದ ಟ್ರಂಪ್, ಇದು ಅಮೆರಿಕಕ್ಕೆ ಆರ್ಥಿಕವಾಗಿ ನಷ್ಟ ಉಂಟುಮಾಡುತ್ತದೆ. ಆದರೆ ಭಾರತ, ಚೀನಾ, ರಷ್ಯಾದಂತಹ ದೇಶಗಳಿಗೆ ಲಾಭದಾಯವಾಗಿದೆ ಎಂದು ಆರೋಪಿಸಿದ್ದರು.

ಜೋ ಬೈಡನ್ ಸಹಿ

ಜೋ ಬೈಡನ್ ಸಹಿ

ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ 17 ಪ್ರಮುಖ ಆದೇಶಗಳಿಗೆ ಬೈಡನ್ ಸಹಿ ಹಾಕಿದ್ದಾರೆ. ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆಯಂತೆ ತಾವು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರು ಸೇರ್ಪಡೆ ಮಾಡಲು ಸಹಿ ಹಾಕುವುದಾಗಿ ತಿಳಿಸಿದ್ದರು.

English summary
Climate activist Greta Thunberg wished Donald Trump for a bright and wonderful future in a sarcastic way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X