ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಗ್ದಂಡನೆಯಿಂದ ಖುಲಾಸೆ ನಂತರ ಡೊನಾಲ್ಡ್ ಟ್ರಂಪ್ ವಾಗ್ದಾಳಿ

|
Google Oneindia Kannada News

ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರ ವಿರುದ್ಧ ಇದೇ ಮೊದಲ ಬಾರಿಗೆ ವಾಗ್ದಂಡನೆ ಪ್ರಕ್ರಿಯೆಯಲ್ಲಿ ಖುಲಾಸೆಗೊಂಡಿದ್ದಾರೆ. ಅಧ್ಯಕ್ಷರಾಗಿದ್ದಲ್ಲೇ ಎರಡು ಬಾರಿ ವಾಗ್ದಂಡನೆ ಎದುರಿಸಿದ್ದ ಟ್ರಂಪ್ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕವೂ ವಿಚಾರಣೆ ಎದುರಿಸಬೇಕಾದ ಪ್ರಸಂಗ ಎದುರಾಗಿತ್ತು.

ಅಮೆರಿಕದ ಸಂಸತ್ ಸಭೆ ನಡೆಯುವ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಮತ್ತು ಬೆಂಬಲಿಗರು ದಾಳಿ ನಡೆಸಿದ ನಂತರ ಡೆಮಾಕ್ರಟಿಕ್ ಪಕ್ಷದ ಸಂಸದರು ಟ್ರಂಪ್ ವಿರುದ್ಧ ವಾಗ್ದಂಡನೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಇದರಲ್ಲಿ ಸಫಲರಾಗಲು ರಿಪಬ್ಲಿಕನ್ಸ್ ಬೆಂಬಲವೂ ಅಗತ್ಯವಿತ್ತು.

ಅಮೆರಿಕದಲ್ಲಿ ವಾಗ್ದಂಡನೆ, ಮಹಾಭಿಯೋಗ ಪ್ರಕ್ರಿಯೆ ಹೊಸದೇನಲ್ಲ, 1868ರಲ್ಲಿ ಆಂಡ್ರೂ ಜಾನ್ಸನ್ ಮತ್ತು 1998ರಲ್ಲಿ ಬಿಲ್ ಕ್ಲಿಂಟನ್ ವಾಗ್ದಂಡನೆಯ ಮೂಲಕ ಅಮೆರಿಕದ ಅಧ್ಯಕ್ಷಗಿರಿ ಕಳೆದುಕೊಂಡಿದ್ದರು. ಆದರೆ, ಟ್ರಂಪ್ ಈ ಅವಮಾನದಿಂದ ಬಚಾವಾಗಿದ್ದರು. ಆದರೆ, ಅಧಿಕಾರ ಅವಧಿ ಮುಗಿದ ಬಳಿಕ ನಾಲ್ಕು ದಿನಗಳ ಕಾಲ ಟ್ರಂಪ್ ಪರ-ವಿರೋಧ ಚರ್ಚೆ, ವಾಗ್ದಂಡನೆ ಪ್ರಕ್ರಿಯೆ ನಡೆಸಲಾಯಿತು.

Greatest witch hunt in history of US, Trump says after acquittal in impeachment trial

ಅಧಿಕಾರದಿಂದ ಕೆಳಗಿಳಿಯಲು ಒಂದು ವಾರವಿದ್ದಾಗ ಟ್ರಂಪ್ ವಿರುದ್ಧ ಜನವರಿಯಲ್ಲಿ ನಡೆದ ವಾಗ್ದಂಡನೆಯಲ್ಲಿ 433 ಸದಸ್ಯರು ಹಾಜರಿದ್ದ ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ ಟ್ರಂಪ್ ವಿರುದ್ಧ 232 ಮತಗಳು (ಡೆಮಾಕ್ರೆಟ್ಸ್) ಬಂದಿತ್ತು. ಈ ಪೈಕಿ 10 ರಿಪಬ್ಲಿಕನ್ಸ್ ಮತಗಳು ಸೇರಿತ್ತು. ಟ್ರಂಪ್ ಪರ 197 ಮತ ಬಿದ್ದಿತ್ತು. ಈ ಮೂಲಕ ಎರಡು ಬಾರಿ ವಾಗ್ದಂಡನೆ ಎದುರಿಸಿದ ಮೊದಲ ಯುಎಸ್ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಒಳಗಾಗಿದ್ದರು

ಸೆನೆಟ್ ಸದಸ್ಯ ಬಲದ 100 ಮಂದಿಯಲ್ಲಿ ಟ್ರಂಪ್ ರನ್ನು ತಪ್ಪಿತಸ್ಥ ಎಂದು ಸಾಬೀತುಪಡಿಸಲು 67 ಸಂಖ್ಯೆ ದಾಟಬೇಕಿತ್ತು. ತಪ್ಪಿತಸ್ಥ ಎಂದು 50 ಡೆಮಾಕ್ರಾಟ್ಸ್ ಮತ ಹಾಕಿದರೆ,ರಿಪಬ್ಲಿಕನ್ ಪೈಕಿ 7 ಮಂದಿ ಮಾತ್ರ ಟ್ರಂಪ್ ವಿರುದ್ಧ ನಿಂತರು. ಹೀಗಾಗಿ, ವಾಗ್ದಂಡನೆ ಮಾಡಲು ಬೇಕಾದ ಮೂರನೇ ಎರಡರಷ್ಟು ಅಥವಾ 67 ಸಂಖ್ಯೆಗೆ 10 ಮತಗಳ ಅಭಾವ ಕಂಡು ಬಂದಿದ್ದರಿಂದ ಟ್ರಂಪ್ ರನ್ನು ಖುಲಾಸೆಗೊಳಿಸಲಾಯಿತು. ಖುಲಾಸೆಗೊಂಡ ಬಳಿಕ ಮಾತನಾಡಿದ ಟ್ರಂಪ್, ಆಂದೋಲನ ಇದೀಗ ಆರಂಭವಾಗಿದೆ. ಇತಿಹಾಸದಲ್ಲಿ ಯಾವ ಅಧ್ಯಕ್ಷರು ಎದುರಿಸದ ಸವಾಲು, ವೃಥಾರೋಪವನ್ನು ನಾನು ಎದುರಿಸಬೇಕಾಯಿತು ಎಂದಿದ್ದಾರೆ.

Greatest witch hunt in history of US, Trump says after acquittal in impeachment trial

2019ರಲ್ಲಿ ನಡೆದಿದ್ದ ಮಹಾಭಿಯೋಗ 2019ರಲ್ಲಿ ನಡೆದಿದ್ದ ಮಹಾಭಿಯೋಗ: ಅಧಿಕಾರ ದುರುಪಯೋಗ ಮತ್ತು ಕಾಂಗ್ರೆಸ್‌ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದರ ಎರಡು ಅಂಶಗಳ ವಿರುದ್ಧ ಡೊನಾಲ್ಡ್ ಟ್ರಂಪ್ ವಿರುದ್ಧ ಡಮಾಕ್ರಟಿಕ್ ಪಕ್ಷದ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಜನಪ್ರತಿನಿಧಿಗಳ ಸಭೆಯ ನ್ಯಾಯಾಂಗ ಸಮಿತಿಯು ಇದಕ್ಕೆ 23-17ರ ಮತಗಳಲ್ಲಿ ಅನುಮೋದನೆ ನೀಡಿತ್ತು. ಬಳಿಕ ಇದು ಜನಪ್ರತಿನಿಧಿಗಳ ಸಭೆಗೆ (ಕೆಳಮನೆ) ಬಂದಿತ್ತು. ಹತ್ತು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಮತ ಪ್ರಕ್ರಿಯೆ ನಡೆದಿದೆ. ಮೊದಲು ಅಧಿಕಾರ ದುರುಪಯೋಗದ ವಿರುದ್ಧದ ಮತ ಚಲಾವಣೆಯಾಯಿತು. ಟ್ರಂಪ್ ವಿರುದ್ಧ 230 ಮತಗಳು ಬಿದ್ದರೆ, ಅವರ ಪರ 197 ಮತಗಳು ಚಲಾವಣೆಗೊಂಡವು. ಎರಡನೆಯ ಆರೋಪವಾದ ಕಾಂಗ್ರೆಸ್ ಕಾರ್ಯಕ್ಕೆ ಅಡ್ಡಿಪಡಿಸಿದ್ದರ ಕುರಿತು ನಡೆದ ಮತ ಚಲಾಚಣೆಯಲ್ಲಿ 229-198 ಮತಗಳಿಂದ ಟ್ರಂಪ್‌ಗೆ ಸೋಲಾಯಿತು. ವಿವರ ಇಲ್ಲಿದೆ

English summary
Following his acquittal in the second impeachment trial, former US President, Donald Trump said that this was the greatest witch hunt in the history of the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X