ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ವರೆಗೆ ಹೆಚ್‌-1B ವೀಸಾ ನಿಷೇಧ: ನಿರಾಸೆಗೊಂಡ ಗೂಗಲ್ ಸಿಇಒ ಸುಂದರ್ ಪಿಚೈ

|
Google Oneindia Kannada News

ವಾಷಿಂಗ್ಟನ, ಜೂನ್ 23: 2020 ರ ಅಂತ್ಯದವರೆಗೆ ಹೆಚ್‌-1B ವೀಸಾ ಅಮಾನತುಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ನಿರಾಸೆಗೊಂಡಿದ್ದಾರೆ.

Recommended Video

ಮೋದಿಯನ್ನು ಹೊಗಳಿದ ಚೀನಾ | China Praising Narendra Modi | Oneindia Kannada

ಈ ವರ್ಷ ಡಿಸೆಂಬರ್‌ವರೆಗೆ ಎಚ್ -1 ಬಿ, ಹೆಚ್ -2 ಬಿ, ಎಲ್ ಮತ್ತು ಜೆ ವಿಭಾಗಗಳಲ್ಲಿ ಕೆಲಸದ ವೀಸಾಗಳನ್ನು ಅಮಾನತುಗೊಳಿಸುವುದಾಗಿಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನಲ್ಲೇ ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ.

ಹೆಚ್-1ಬಿ ವೀಸಾ ರದ್ದು: ಭಾರತೀಯರಿಗೆ ಹೊಡೆತ ಕೊಡುತ್ತಾ ಟ್ರಂಪ್ ನೀತಿ?ಹೆಚ್-1ಬಿ ವೀಸಾ ರದ್ದು: ಭಾರತೀಯರಿಗೆ ಹೊಡೆತ ಕೊಡುತ್ತಾ ಟ್ರಂಪ್ ನೀತಿ?

ಎಚ್ -1 ಬಿ ವೀಸಾ ಅಮೆರಿಕಾದಲ್ಲಿ ಭಾರತೀಯ ಟೆಕ್ಕಿಗಳು ಹೆಚ್ಚು ಬಳಸುವ ಕೆಲಸದ ವೀಸಾಗಳಲ್ಲಿ ಒಂದಾಗಿದೆ. ಈ ವೀಸಾ ಅಲ್ಲಿನ ಕಂಪನಿಗಳಿಗೆ ವಿದೇಶದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಯುಎಸ್ ಸರ್ಕಾರವು ತನ್ನ ವೀಸಾ ನಿಯಮಗಳನ್ನು ಬಿಗಿಗೊಳಿಸುವ ಹಾದಿಯಲ್ಲಿದೆ.

Google Ceo Sundar Pichai Disappointed After Trumps H-1B Visa Ban

ಈ ವೀಸಾಗಳಲ್ಲಿಯೇ ಗೂಗಲ್, ಮೈಕ್ರೋಸಾಫ್ಟ್, ಇಂಡಿಯನ್ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್ ಮತ್ತು ವಿಪ್ರೊ ಕಂಪೆನಿಗಳು ಭಾರತದಿಂದ ಯುಎಸ್‌ಗೆ ಎಂಜಿನಿಯರ್‌ಗಳನ್ನು ಕರೆತರುತ್ತವೆ. ಎಚ್ 1 ಬಿ ವೀಸಾ ಹೊಂದಿರುವ ಅಮೆರಿಕಾದಲ್ಲಿ ವಾಸಿಸುವ 75 ಪರ್ಸೆಂಟ್ ಜನರು ಭಾರತೀಯ ಪ್ರಜೆಗಳು ಅನ್ನೋದು ಗಮನಾರ್ಹ. ವಲಸೆಯನ್ನು ನಿಗ್ರಹಿಸಲು ಮತ್ತು ದೇಶದಲ್ಲಿ ಸ್ಥಳೀಯ ಉದ್ಯೋಗಕ್ಕೆ ಸಹಾಯ ಮಾಡುವ ಪ್ರಯತ್ನಗಳ ಭಾಗವಾಗಿ ಎಚ್ -1 ಬಿ, ಎಲ್ -1 ಮತ್ತು ಇತರ ತಾತ್ಕಾಲಿಕ ಕೆಲಸದ ಪರವಾನಗಿಗಳನ್ನು ವಿಧಿಸಲಾಗುತ್ತಿದೆ. ಆದರೆ ಟ್ರಂಪ್ ಸರ್ಕಾರವು ಇದನ್ನು ಅಮಾನತುಗೊಳಿಸಿ ಸುಗ್ರೀವಾಜ್ಞೆಗೆ ಸಹಿ ಹಾಕಿದರು.

ಟ್ರಂಪ್ ಈ ಆದೇಶಕ್ಕೆ ಸಹಿ ಹಾಕುವ ಮೂಲಕ, ಈ ವರ್ಷದ ಅಂತ್ಯದ ವೇಳೆಗೆ ಸುಮಾರು 3.25 ಲಕ್ಷ ವಲಸಿಗರು ಮತ್ತು ಅವರ ಕುಟುಂಬಗಳಿಗೆ ನಿಷೇಧ ಅನ್ವಯವಾಗುತ್ತದೆ. ಆದರೆ ಇದು 5.25 ಲಕ್ಷದಷ್ಟಾಗುತ್ತದೆ ಎಂದು ಟ್ರಂಪ್ ಆಡಳಿತದ ಉನ್ನತ ಮೂಲಗಳು ತಿಳಿಸಿವೆ. ಕೋವಿಡ್- 19 ರ ಹರಡುವಿಕೆಯಿಂದ ಸ್ಥಳೀಯ ಜನರು ಗಮನಾರ್ಹ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ.

ಆದ್ದರಿಂದ, H-1B, H-2B, J ಮತ್ತು L ವಲಸೆರಹಿತ ವೀಸಾಗಳನ್ನು ಬಳಸುವ ಕಾರ್ಮಿಕರ ಸಂಖ್ಯೆಯು ಪ್ರಸ್ತುತ ಅಮೆರಿಕಾದ ಸ್ಥಳೀಯ ಜನರ ಉದ್ಯೋಗಕ್ಕೆ ಅಪಾಯವನ್ನುಂಟುಮಾಡುತ್ತದೆ. ಅಮೆರಿಕಾದ ಉದ್ಯೋಗಕ್ಕೆ ಧಕ್ಕೆ ತರುವ ವಲಸೆ ಕಾರ್ಮಿಕರ ಮೇಲಿನ ನಿಷೇಧವನ್ನು 2020 ರ ಅಂತ್ಯದವರೆಗೆ ಈ ಸುಗ್ರೀವಾಜ್ಞೆ ವಿಸ್ತರಿಸಿದೆ.

English summary
Google CEO Sundar Pichai said he was disappointed by US President Donald Trump's proclamation that suspended work visas till the end of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X