ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಗೂಗಲ್‌ ಖಾತೆ ಇನ್ನಷ್ಟು ಭದ್ರ: ಬೆರಳಚ್ಚೇ ಪಾಸ್‌ವರ್ಡ್

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 14: ಗೂಗಲ್‌ ಖಾತೆಗಳ ಭದ್ರತಾ ಅಂಶಗಳನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪಾಸ್‌ವರ್ಡ್ ಸ್ವರೂಪವನ್ನು ಬದಲಿಸಲು ಗೂಗಲ್ ಸಂಸ್ಥೆ ನಿರ್ಧರಿಸಿದೆ.

ಶೀಘ್ರದಲ್ಲೇ ಬೆರಳಚ್ಚಿನ ಪಾಸ್‌ವರ್ಡ್‌ ಸೌಲಭ್ಯವನ್ನು ಗೂಗಲ್ ಘೋಷಿಸಲಿದೆ. ಇದರಿಂದ ಬಳಕೆದಾರರು ಅಂಕಿ ಸಂಖ್ಯಿಗಳ ಪಾಸ್‌ವರ್ಡ್ ಬದಲಿಗೆ, ತಮ್ಮ ಬೆರಳಚ್ಚಿನ ಮೂಲಕವೇ ಖಾತೆ ಪುಟಕ್ಕೆ ಪ್ರವೇಶಿಸಬಹುದಾಗಿದೆ. ಆಂಡ್ರ್ಯಾಯ್ಡ್ 7 ನಂತರದ ಎಲ್ಲಾ ಮೊಬೈ್‌ಗಳಲ್ಲಿ ಈ ಸವಲತ್ತು ದೊರೆಯಲಿದೆ.

ಇದರಿಂದ ಗ್ರಾಹಕರ ಗೂಗಲ್ ಖಾತೆಗಳು ಇನ್ನಷ್ಟು ಸುರಕ್ಷಿತವಾಗಲಿದೆ, ಹ್ಯಾಕಿಂಗ್ ಸೇರಿದಂತೆ ಇತರೆ ಅಕ್ರಮಕ್ಕೆ ಕಡಿವಾಣ ಹಾಕಬಹುದು ಎನ್ನುವುದು ಗೂಗಲ್ ಆಲೋಚನೆಯಾಗಿದೆ.

Google Account Will Have Finger Print Anabled Password Shortly

ಗೂಗಲ್ ಕಂಪನಿಯ ಸಾಮಾಜಿಕ ಜಾಲತಾಣ, ಇ-ಮೇಲ್ , ಸರ್ಚ್ ಎಂಜಿನಿಂದ ಹೊರತಾಗಿ ಹಣಕಾಸು ವ್ಯವಹಾರಕ್ಕೂ ತಲುಪಿದ ಹಿನ್ನೆಲೆಯಲ್ಲಿ ಇಂತಹ ಅತಿ ಭದ್ರತೆಯ ಅಂಶಗಳ ಪಾಸ್‌ವರ್ಡ್ ಬಳಸಲು ನಿರ್ಧರಿಸಲಾಗಿದೆ.

ಅಂದಹಾಗೆ ಈ ಹೊಸ ಪಾಸ್‌ವರ್ಡ್ ಸ್ವರೂಪವು ಕಡ್ಡಾಯವಾಗಿರುವುದಿಲ್ಲ, ಆದರೆ ಬಳಕೆದಾರರ ಆಯ್ಕೆಗೆ ಬಿಟ್ಟಿರಲಾಗುತ್ತದೆ. ಈ ಮೂಲಕ ಬಳಕೆದಾರರ ಖಾಸಗಿತನವನ್ನು ತುಂಬುವುದು ಬಿಡುವುದು ಗೂಗಲ್ ಕಂಪನಿಗೆ ಬಿಟ್ಟ ವಿಚಾರವಾಗಿದೆ.

ಈ ಹಿಂದೆ ಆಂಡ್ರ್ಯಾಯ್ಡ್ ಫೋನ್‌ಗಳ ಪಾಸ್‌ವರ್ಡ್‌ಗೆ ಈ ರೀತಿಯ ಅವಕಾಶಗಳನ್ನು ನೀಡಲಾಗಿತ್ತು. ಗೂಗಲ್ ಅಪ್ಲಿಕೇಷನ್ಸ್‌ಗಳಿಗೆ ಇಂತಹ ಸೌಲಭ್ಯವಿರಲಿಲ್ಲ.

English summary
Google users will have the facility of the finger print password for their account.It will ensure the more security for the Google accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X