ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಮೊಕದ್ದಮೆ ವಜಾಗೊಳಿಸಿದ ಜಾರ್ಜಿಯಾ ನ್ಯಾಯಾಧೀಶರು

|
Google Oneindia Kannada News

ವಾಶಿಂಗ್ಟನ್, ನವೆಂಬರ್.05: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲೇ ಭಾರಿ ದೋಷವಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡುತ್ತಿದ್ದಾರೆ.

ಛಥಮ್ ರಾಜ್ಯದಲ್ಲಿ ಈಗಾಗಲೇ ಮೃತಪಟ್ಟವರ ಮತಗಳನ್ನು ಕೂಡಾ ಚಲಾಯಿಸಿದ್ದು, ಅವುಗಳನ್ನು ಮತಎಣಿಕೆಯಲ್ಲಿ ಸೇರಿಸಲಾಗಿತ್ತಿದೆ. ಇದರ ವಿರುದ್ಧ ಅಭಿಯಾನ ನಡೆಸುವುದಕ್ಕೆ ರಿಪಬ್ಲಿಕನ್ ಪಕ್ಷದಿಂದ ಜಾರ್ಜಿಯಾ ಕೋರ್ಟ್ ಗೆ ಲಾಸೂಟ್ ಸಲ್ಲಿಸಲಾಗಿತ್ತು. ಡೊನಾಲ್ಡ್ ಟ್ರಂಪ್ ಸಲ್ಲಿಸಿದ ಅರ್ಜಿಯನ್ನು ಗುರುವಾರ ಜಾರ್ಜಿಯಾ ನ್ಯಾಯಾಧೀಶರು ವಜಾಗೊಳಿಸಿದ್ದಾರೆ.

ಯುಎಸ್ ಚುನಾವಣೆ ಹೊಸ ಟ್ರೆಂಟ್: Donald Trump You Are Fired ಸದ್ದು! ಯುಎಸ್ ಚುನಾವಣೆ ಹೊಸ ಟ್ರೆಂಟ್: Donald Trump You Are Fired ಸದ್ದು!

ಬುಧವಾರವಷ್ಟೇ ಮೃತಪಟ್ಟವರ ಮತಗಳನ್ನು ಕೂಡಾ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದ ಡೊನಾಲ್ಡ್ ಟ್ರಂಪ್ ಪರ ವಕೀಲರು ಈ ಇಬ್ಬರು ಸಾಕ್ಷಿಗಳು, ಇಬ್ಬರು ಚುನಾವಣಾ ಮೇಲ್ವಿಚಾರಕರನ್ನು ಸಾಕ್ಷಿಗಾಗಿ ಒದಗಿಸಿದ್ದರು. ಮತದಾನಕ್ಕೆ ಹಾಜರಾಗದೇ ಇರುವ 53 ಜನರ ಮತಗಳನ್ನು ಕೂಡಾ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು.

Georgia Judge Dismisses Lawsuit By Donald Trump Campaign Over Absentee Ballots

ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟನೆ:

ಛಥಮ್ ನಲ್ಲಿ ನಡೆದ ಚುನಾವಣಾ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಎಲ್ಲ ರೀತಿಯ ಶಿಷ್ಟಾಚಾರಗಳನ್ನು ಪಾಲನೆ ಮಾಡಲಾಗಿದೆ. ಸಂಜೆ 7 ಗಂಟೆಯೊಳಗೆ ಅಗತ್ಯವಿರುವ ಎಲ್ಲ ನಿಯಮಗಳ ಅಡಿಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಇಲ್ಲಿ ಯಾವುದೇ ರೀತಿಯ ಚುನಾವಣಾ ಲೋಪದೋಷವು ನಡೆದಿಲ್ಲ ಎಂದು ಚುನಾವಣಾ ಮಂಡಳಿ ಅಧ್ಯಕ್ಷರು ಮತ್ತು ಸೂಪರ್ ವೈಸರ್ ಸ್ಪಷ್ಟನೆ ನೀಡಿದ್ದಾರೆ.
ಡೊನೊಲ್ಡ್ ಟ್ರಂಪ್ ಹೂಡಿದ ಮೊಕದ್ದಮೆಯಲ್ಲಿ ಚುನಾವಣಾ ಕಾನೂನು ಜಾರಿಗೊಳಿಸುವುದು ಮತ್ತು ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಚಲಾವಣೆ ಆಗಿರುವ ಮತಗಳ ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಮುನ್ನಡೆ ಜೋ ಬಿಡೆನ್ 253 ಮತಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 213 ಮತಗಳೊಂದಿಗೆ ಹಿನ್ನಡೆ ಅನುಭವಿಸಿದ್ದಾರೆ.

English summary
Georgia Judge Dismisses Lawsuit By Donald Trump Campaign Over Absentee Ballots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X