ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಜಾರ್ಜಿಯಾದಲ್ಲಿ 'ಕನ್ನಡ ಭಾಷಾ ದಿನ ಮತ್ತು ರಾಜ್ಯೋತ್ಸವ ದಿನ'

|
Google Oneindia Kannada News

ಜಾರ್ಜಿಯಾ ಅಕ್ಟೋಬರ್ 31: ಅಮೆರಿಕದ ಜಾರ್ಜಿಯಾದಲ್ಲಿ ನವೆಂಬರ್ 1 ಅನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಿಯಾನ್ ಪಿ ಕೆಂಪ್ ಅವರು ಈ ಆದೇಶವನನ್ನು ಹೊರಡಿಸಿದ್ದಾರೆ. ಜಾರ್ಜಿಯಾ ಸರ್ಕಾರದ ಜಾಲತಾಣದಲ್ಲಿ ಅದೇಶದ ಪ್ರತಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಕನ್ನಡ ಭಾಷೆ ನಾಡು ನುಡಿಯ ಗುಣಗಾನ ಮಾಡಲಾಗಿದೆ.

ಕನ್ನಡಿಗ ಸಮುದಾಯದ ಮನವಿಯ ಬಳಿಕ ಈ ಆದೇಶವನ್ನು ಹೊರಡಿಸಲಾಗಿದೆ. ಈ ಘೋಷಣೆಯನ್ನು ಪಡೆಯಲು ಶ್ರಮಿಸಿದ ಅಟ್ಲಾಂಟಾ ಮೂಲದ ನೃಪತುಂಗ ಕನ್ನಡ ಕೂಟವು ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಜಾರ್ಜಿಯಾ ಕನ್ನಡಕ್ಕಾಗಿ ಇಂತಹ ಘೋಷಣೆಯನ್ನು ಹೊರಡಿಸಿದ ಯುಎಸ್‌ನಲ್ಲಿ ಮೊದಲ ರಾಜ್ಯವಾಗಿದೆ ಎಂದು ಹೇಳಿದೆ. ಜೊತೆಗೆ ಗೌರವಧನ ನೀಡಿದ ರಾಜ್ಯಪಾಲ ಕೆಂಪ್ ಅವರಿಗೆ ಕೂಟ ಧನ್ಯವಾದ ಅರ್ಪಿಸಿದೆ. "ಕನ್ನಡ ಸುದೀರ್ಘವಾಗಿ ಉಳಿದುಕೊಂಡಿರುವ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ, ಶ್ರೀಮಂತ ಸಾಹಿತ್ಯ ಮತ್ತು ವ್ಯುತ್ಪತ್ತಿ ರಚನೆಗಳೊಂದಿಗೆ ಕನ್ನಡ ಭಾಷೆ ವಿಶಿಷ್ಟವಾಗಿದೆ" ಎಂದು ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯಪಾಲರ ಘೋಷಣೆಯು ರಾಜ್ಯದ ಪರವಾಗಿ ನೀಡಲಾದ ವಿಧ್ಯುಕ್ತ ದಾಖಲೆಯಾಗಿದೆ. ಜಾರ್ಜಿಯಾ ಯುಎಸ್‌ನಲ್ಲಿ ಅತಿ ದೊಡ್ಡ ಭಾರತೀಯ ವಲಸೆಗಾರರನ್ನು ಹೊಂದಿದೆ ಎಂದು ವರದಿಯಾಗಿದೆ. ಜಾರ್ಜಿಯಾದ ಕನ್ನಡಿಗ ಸಮುದಾಯವು ದೊಡ್ಡ ಅಟ್ಲಾಂಟಾ ಪ್ರದೇಶದಲ್ಲಿ ಮೂರು ಸ್ಥಳೀಯ ಶಾಲೆಗಳ ಮೂಲಕ ಮತ್ತು ನೃಪತುಂಗ ಕನ್ನಡ ಕೂಟ ಆಯೋಜಿಸುವ ಕಾರ್ಯಕ್ರಮಗಳ ಮೂಲಕ ಭವಿಷ್ಯದ ಪೀಳಿಗೆಗೆ ತಮ್ಮ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದೆ. ಜೊತೆಗೆ ಜಾರ್ಜಿಯಾ ಶಿಕ್ಷಣ ಇಲಾಖೆಯಿಂದ ಪಾರಂಪರಿಕ ಭಾಷೆಗಳಲ್ಲಿ ಬಿಲಿಟರಸಿ ಸೀಲ್ ಔಟ್ರೀಚ್ ನೊಂದಿಗೆ ಕನ್ನಡ ಭಾಷೆ ಗುರುತಿಸಲ್ಪಟ್ಟಿದೆ.

Georgia Declares November 1 as ‘Kannada Language Day and Rajyotsava Day’

ವರದಿಗಳ ಪ್ರಕಾರ, ಜಾರ್ಜಿಯಾ ಸುಮಾರು 2,000 ಕನ್ನಡ ಮಾತನಾಡುವ ಕುಟುಂಬಗಳಿಗೆ ನೆಲೆಯಾಗಿದೆ. ಸುಮಾರು 500 ಸದಸ್ಯರನ್ನು ಹೊಂದಿರುವ ನೃಪತುಂಗ ಕನ್ನಡ ಕೂಟವು ಕಳೆದ ಐದು ದಶಕಗಳಿಂದ ಈ ಪ್ರದೇಶದಲ್ಲಿ ಅತ್ಯಂತ ಸಕ್ರಿಯ ಕನ್ನಡ ಭಾಷಾ ಮತ್ತು ಸಾಂಸ್ಕೃತಿಕ ಗುಂಪಾಗಿದೆ. ಕನ್ನಡಿಗ ಸಮುದಾಯವು ವೈದ್ಯಕೀಯ, ಇಂಜಿನಿಯರಿಂಗ್, ಸಂಶೋಧನೆ, ಕಾನೂನು, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ರಾಜ್ಯಕ್ಕೆ ಕೊಡುಗೆ ನೀಡುವುದರ ಜೊತೆಗೆ ಜಾರ್ಜಿಯಾದ ಆರ್ಥಿಕತೆಯನ್ನು ಶ್ರೀಮಂತಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಗತ್ತಿನ ಅತ್ಯಂತ ಹಳೆಯ ಹಾಗೂ ಇನ್ನೂ ಜೀವಂತವಾಗಿರುವ ಭಾಷೆಗಳಲ್ಲಿ ಕನ್ನಡವೂ ಒಂದು. ಕ್ರಿ.ಪೂ.450 ಇಸವಿಯಷ್ಟು ಪ್ರಾಚೀನ ಇತಿಹಾಸವನ್ನು ಕನ್ನಡ ಹೊಂದಿದೆ. ಜಾರ್ಜಿಯಾದ ಕನ್ನಡಿಗರ ಸಮುದಾಯ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕಾಣಿಕೆ ಸಲ್ಲಿಸುತ್ತಿದ್ದಾರೆ. ಔಷಧ, ಎಂಜಿನಿಯರಿಂಗ್, ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಹೆಸರು ಮಾಡಿದ್ದಾರೆ. ಇವೇ ಮುಂತಾದ ಸಂಗತಿಗಳನ್ನು ಆದೇಶ ಪ್ರತಿಯಲ್ಲಿ ಬರೆಯಲಾಗಿದೆ. ಇದು ಕನ್ನಡಿಗರು ಮತ್ತು ಕರ್ನಾಟಕ ರಾಜ್ಯಕ್ಕೆ ಸಂದ ಗೌರವವಾಗಿದೆ.

"ಕನ್ನಡ ಭಾಷೆಗೆ ಅಮೆರಿಕದಲ್ಲಿ ರಾಜ್ಯ ಮಟ್ಟದಲ್ಲಿ ಗೌರವ ಸಿಕ್ಕಿರುವುದು ಇದೇ ಮೊದಲು. ಇದು ಜಗತ್ತಿನ ಎಲ್ಲಾ ಕನ್ನಡಿಗರು ಹೆಮ್ಮೆ ಪಡುವ ವಿಷು. ಬಹುಕಾಲ ಉಳಿದಿರುವ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಇದೊಂದು ದೊಡ್ಡ ಗೆಲುವು" ಎಂದು ಕೂಟದ ಸದಸ್ಯ ಹಾಗು ಹಿರಿಯ ಡೇಟಾ ಅನಾಲಿಟಿಕ್ಸ್ ಮ್ಯಾನೇಜರ್ ಭರತ್ ತೇಜಸ್ವಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಉದ್ಯೋಗಿ ವೃತ್ತಿಪರರು ಭಾಷೆಯನ್ನು ಕಲಿಸಲು ಸಮಯವನ್ನು ವಿನಿಯೋಗಿಸುವ ಮೂರು ಸ್ಥಳೀಯ ಶಾಲೆಗಳ ಮೂಲಕ ತನ್ನ ಭವಿಷ್ಯದ ಪೀಳಿಗೆಗೆ ಕನ್ನಡದಲ್ಲಿ ಶಿಕ್ಷಣ ನೀಡಲಾಗುತ್ತದೆ. ಜೊತೆಗೆ ಜಾರ್ಜಿಯಾ ಸರ್ಕಾರ ಕನ್ನಡ ಸಮುದಾಯದ ಘೋಷಣೆಯು ಅಂಗೀಕರಿಸುತ್ತದೆ.

Georgia Declares November 1 as ‘Kannada Language Day and Rajyotsava Day’

ಅಮೆರಿಕದ ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಯಾನ್ ಪಿ. ಕೆಂಪ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಕನ್ನಡಿಗರು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಹಾಗೆಯೇ ಜಾರ್ಜಿಯಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಉತ್ಕೃಷ್ಟಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

English summary
The US state of Georgia has declared November 1 Kannada Language and Rajyotsava Day after multiple representations by resident Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X