• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಾದಲ್ಲಿ ಬಹಿಷ್ಕಾರದ 'ಕಪ್ಪು'ಛಾಯೆ ಹಿಂದಿನ ರಹಸ್ಯ!

|

ವಾಶಿಂಗ್ಟನ್, ಜೂನ್.03: ಟಿವಿ ಸ್ಕ್ರೀನ್, ರೇಡಿಯೋ ಚಾನೆಲ್, ಮ್ಯೂಸಿಕ್ ಇಂಡಸ್ಟ್ರಿ ಎಲ್ಲೆಲ್ಲೂ ಕಪ್ಪುಛಾಯೆ. ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕಪ್ಪುಛಾಯೆ ಆವರಿಸಿತ್ತು. ಜಾರ್ಜ್ ಫ್ಲೋಯ್ಡ್ ಎಂಬ ಕಪ್ಪು ವರ್ಣೀಯನ ಸಾವನ್ನು ವಿರೋಧಿಸಿ ನಡೆಸಿದ ಬಹಿಷ್ಕಾರದ ವೈಖರಿ ಹಾಗಿತ್ತು.

ಕಳೆದ ವಾರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮಿನ್ನಿಯಾಪೊಲೀಸ್ ಎಂಬ ಪ್ರದೇಶದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲೋಯ್ಡ್ ಜೊತೆಗೆ ಶ್ವೇತವರ್ಣೀಯ ಪೊಲೀಸ್ ಅಮಾನುಷವಾಗಿ ನಡೆದುಕೊಂಡಿದ್ದನು. ಕ್ರೌರ್ಯ ತೋರಿದ ಪೊಲೀಸ್ ಅಧಿಕಾರಿ ದೆರಕ್ ಚೌವಿನ್ ಕಾಲಡಿಗೆ ಸಿಲುಕಿದ ವ್ಯಕ್ತಿ ನರಳಿ ನರಳಿ ಪ್ರಾಣ ಬಿಟ್ಟಿದ್ದರು.

ಅಮೆರಿಕಾದಲ್ಲಿ 'ಖಾಕಿ'ಗಳೇ ಪ್ರತಿಭಟನಾಕಾರರ ಎದುರು ಮಂಡಿಯೂರಿದ್ದೇಕೆ?

ಕಪ್ಪು ವರ್ಣೀಯ ಜಾರ್ಜ್ ಫ್ಲೋಯ್ಡ್ ಸಾವಿನಿಂದ ಅಮೆರಿಕಾದಲ್ಲಿ ಚಿತ್ರಣವೇ ಬದಲಾಗಿದೆ. ವಿಶ್ವದ ದೊಡ್ಡಣ್ಣನ ನೆಲದಲ್ಲಿ ಕ್ರಾಂತಿಯ ಕಿಡಿ ಹೊತ್ತಿಕೊಂಡಿದೆ. ಕಪ್ಪು ವರ್ಣೀಯ ಕೋಪದ ಕಿಚ್ಚಿಗೆ 18ಕ್ಕೂ ಹೆಚ್ಚು ರಾಜ್ಯಗಳು ಧಗಧಗಿಸುತ್ತಿವೆ. ಶ್ವೇತವರ್ಣೀಯ ಪೊಲೀಸ್ ಮಾಡಿದ ತಪ್ಪಿಗೆ ಶ್ವೇತವರ್ಣೀಯ ಪೊಲೀಸರು ಕಪ್ಪು ವರ್ಣೀಯರ ಎದುರು ಮಂಡಿಯೂರಿ ಕ್ಷಮೆಯಾಚಿಸುತ್ತಿದ್ದಾರೆ. ಇದರ ಮಧ್ಯೆ ಟಿವಿ ಸ್ಕ್ರೀನ್ ಸೇರಿದಂತೆ ಮಾಧ್ಯಮಗಳಲ್ಲಿ ಮಂಗಳವಾರ ಬಹಿಷ್ಕಾರದ 'ಕಪ್ಪು'ಛಾಯೆ ಆವರಿಸಿತ್ತು.

ಜಾರ್ಜ್ ಫ್ಲೋಯ್ಡ್ ಕುರಿತು ಬಿಬಿಸಿ ರೇಡಿಯೋ 1Xtra ನಲ್ಲಿ ಚರ್ಚೆ

ಜಾರ್ಜ್ ಫ್ಲೋಯ್ಡ್ ಕುರಿತು ಬಿಬಿಸಿ ರೇಡಿಯೋ 1Xtra ನಲ್ಲಿ ಚರ್ಚೆ

ಕಪ್ಪು ವರ್ಣೀಯ ಜಾರ್ಜ್ ಫ್ಲೋಯ್ಡ್ ಸಾವಿನ ಘಟನೆ ಮತ್ತು ಕಪ್ಪು ವರ್ಣೀಯರ ಮೇಲಿನ ದೌರ್ಜನ್ಯದ ಕುರಿತು ಬಿಬಿಸಿ ರೇಡಿಯೋ 1Xtra ನಲ್ಲಿ ಸಾಲು ಸಾಲು ಚರ್ಚೆಗಳನ್ನು ನಡೆಸಲಾಯಿತು. ಕಪ್ಪು ವರ್ಣೀಯರಿಗೆ ಬೆಂಬಲಿತ ಕಾರ್ಯಕ್ರಮಗಳನ್ನು ನಿರೂಪಿಸಲಾಯಿತು. ಕಪ್ಪು ವರ್ಣೀಯರಿಂದ ಕೇಡು ಇಲ್ಲ ಎಂದು ಬಿಂಬಿಸುವ ಹಾಡುಗಳನ್ನು ಪ್ರಸಾರ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ಒಂದು ಗಂಟೆ ಟಿವಿ ಚಾನೆಲ್ ಗಳ ಪ್ರಸಾರ ಸ್ಥಗಿತ

ಒಂದು ಗಂಟೆ ಟಿವಿ ಚಾನೆಲ್ ಗಳ ಪ್ರಸಾರ ಸ್ಥಗಿತ

ಜಾರ್ಜ್ ಫ್ಲೋಯ್ಡ್ ಕುತ್ತಿಗೆ ಮೇಲೆ ಪೊಲೀಸ್ ಎಂಟು ನಿಮಿಷಗಳ ಕಾಲ ಮಂಡಿಯೂರಿ ನಿಂತು ಕೊಂದಿರುವ ಸೂಚಕವಾಗಿ ಮಂಗಳವಾರ MTV ಪ್ರಸಾರ ವಿಭಿನ್ನವಾಗಿತ್ತು. ಟಿವಿ ಚಾನೆಲ್ ನಲ್ಲಿ ಕಾರ್ಯಕ್ರಮಗಳು 8 ನಿಮಿಷಗಳವರೆಗೂ ಶಬ್ಧವಿಲ್ಲದೇ ಪ್ರಸಾರಗೊಂಡವು. ಇದರ ಜೊತೆಗೆ VH1 ಮತ್ತು Comedy Central ಹಾಗೂ 4 Music ಚಾನೆಲ್ ಗಳು ಒಂದು ಗಂಟೆಗಳ ಕಾಲ ಪ್ರಸಾರವನ್ನೇ ಸ್ಥಗಿತಗೊಳಿಸಿದ್ದವು.

ಟ್ರಂಪ್‌ ವಿವಾದಾತ್ಮಕ ಪೋಸ್ಟ್‌: ಫೇಸ್‌ಬುಕ್‌ನೊಂದಿಗಿನ ಪಾಲುದಾರಿಕೆ ಕೊನೆಗೊಳಿಸಿದ ಟಾಕ್ಸ್‌ಪೇಸ್‌

ಬಿಬಿಸಿ ರೇಡಿಯೋ 1, ರೇಡಿಯೋ 2 ನಲ್ಲಿ ಪ್ರತಿಫಲನ

ಬಿಬಿಸಿ ರೇಡಿಯೋ 1, ರೇಡಿಯೋ 2 ನಲ್ಲಿ ಪ್ರತಿಫಲನ

ಜಾರ್ಜ್ ಫ್ಲೋಯ್ಡ್ ಸಾವಿನಿಂದ ಸೃಷ್ಟಿಯಾದ ಬಹಿಷ್ಕಾರದ ಕಪ್ಪುಛಾಯೆ ಬಿಬಿಸಿ ರೇಡಿಯೋ 1, ರೇಡಿಯೋ 2ನಲ್ಲೂ ಪ್ರತಿಫಲನಗೊಂಡಿತು. ಖಾಸಗಿ ರೇಡಿಯೋ ಸ್ಟೇಷನ್ ಗಳಾದ ಕಿಸ್, ಮ್ಯಾಜಿಕ್ ಮತ್ತು ಆ್ಯಬ್ಸುಲೂಟ್ ರೇಡಿಯೋ ಸಹ ಸಾಮಾಜಿಕ ವಲಯದಲ್ಲಿ ನಡೆಯುತ್ತಿರುವ ಬಹಿಷ್ಕಾರದ ಹೋರಾಟಕ್ಕೆ ಕೈಜೋಡಿಸಿದವು.

ಅಮೆರಿಕಾದಲ್ಲಿ ಕಪ್ಪು ವರ್ಣೀಯರ ಬದುಕಿನ ವಿಚಾರ

ITV ಡೇ ಟೈಮ್ ಕಾರ್ಯಕ್ರಮದ ವೇಳೆ ಟಿವಿ ಸ್ಕ್ರೀನ್ ಮೇಲೆ ಕಪ್ಪುಛಾಯೆ ಆವರಿಸಿತ್ತು. ಕಪ್ಪು ಪರದೆ ಮೇಲೆ ಶ್ವೇತವರ್ಣದಲ್ಲಿ 'ಕಪ್ಪು ವರ್ಣೀಯರ ಬದುಕಿನ ವಿಚಾರ' ಎಂಬ ಅಕ್ಷರಗಳು ಮೂಡಿದ್ದವು. ಅನಂತರದಲ್ಲಿ ಪ್ರಾಯೋಜಕಿ ಅಲಿಸನ್ ಹಮ್ಮೊಂದ್ ಮಾತನಾಡಿದ್ದು, ಜಾರ್ಜ್ ಫ್ಲೋಯ್ಡ್ ಸಾವಿನಿಂದ ನನ್ನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಆಗಿದೆ. ನಾನು ಕೂಡಾ 15 ವರ್ಷದ ಕಪ್ಪು ವರ್ಣೀಯ ಮಗುವಿನ ತಾಯಿ. ಜಾರ್ಜ್ ಫ್ಲೋಯ್ಡ್ ಸಾವಿನ ಕ್ಷಣವನ್ನು ಗಮನಿಸಿದಾಗ ನನಗೆ ನನ್ನ ಸಹೋದರರು ನೆನಪಾದರು, ನನ್ನ ತಂದೆ ನೆನಪಾದರು ಹಾಗೂ ನನ್ನ ಮಗನನ್ನೇ ಆ ಸ್ಥಿತಿಯಲ್ಲಿ ಕಂಡಂತೆ ಭಾಸವಾಯಿತು ಎಂದು ಅಲಿಸನ್ ಹಮ್ಮೊಂದ್ ಸಂತಾಪ ಸೂಚಿಸಿದರು.

ರೇಡಿಯೋ ಕಾರ್ಯಕ್ರಮ ಮೊಟಕುಗೊಳಿಸಿದ ಬಗ್ಗೆ ಟ್ವೀಟ್

ಕಪ್ಪು ವರ್ಣೀಯರ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಆ್ಯಪಲ್ ಮೂಸಿಕ್ಸ್ ನ ಜಾನೆ ಲೊವೆ ತಮ್ಮ ರೇಡಿಯೋ ಕಾರ್ಯಕ್ರಮವನ್ನು ಮೊಟಕುಗೊಳಿಸಿರುವ ಬಗ್ಗೆ ಟ್ವೀಟ್ ಮಾಡಿದ್ದರು. ಮಂಗಳವಾರ ನಾನು ರೇಡಿಯೋ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ವರ್ಣಬೇಧ ನೀತಿ ಹಾಗೂ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಹೊರಟಿದ್ದೇನೆ ಎಂದು ಬರೆದುಕೊಂಡಿದ್ದರು.

ಅಮೆರಿಕಾದಲ್ಲಿ ಸಂಗೀತ ಸಂಸ್ಥೆ, ಗಾಯಕರ ಬೆಂಬಲ

ಅಮೆರಿಕಾದಲ್ಲಿ ಸಂಗೀತ ಸಂಸ್ಥೆ, ಗಾಯಕರ ಬೆಂಬಲ

ಜಾರ್ಜ್ ಫ್ಲೋಯ್ಡ್ ಸಾವನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಅಮೆರಿಕಾದಲ್ಲಿರುವ ಸಂಗೀತ ಸಂಸ್ಥೆಗಳು ಮತ್ತು ಗಾಯಕರು ಬೆಂಬಲ ವ್ಯಕ್ತಪಡಿಸಿದರು. ಸಂಗೀತ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಹಾಗೂ ಗಾಯಕರು ಹಾಡುವುದನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಿದ್ದರು. ಆ ಮೂಲಕ ವರ್ಣಬೇಧ ನೀತಿ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದರು.

ಅಮೆರಿಕಾದಲ್ಲಿ ಪ್ರಚೋದನಾತ್ಮಕ ಬದಲಾವಣೆ

ಅಮೆರಿಕಾದಲ್ಲಿ ಪ್ರಚೋದನಾತ್ಮಕ ಬದಲಾವಣೆ

ಕಳೆದ ಮೇ.29ರ ಶುಕ್ರವಾರದಿಂದ ಅಮೆರಿಕಾದಲ್ಲಿ ಪ್ರಚೋದನಾತ್ಮಕ ಬದಲಾವಣೆಯ ಕೂಗು ಕೇಳಿ ಬಂತು. #TheShowMustBePaused, ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಯಿತು. ಒಂದು ದಿನದ ಮಟ್ಟಿಗೆ ನಮ್ಮೆಲ್ಲ ಕೆಲಸಗಳನ್ನು ಬಿಟ್ಟು ನಮ್ಮ ಸಮುದಾಯದ ಜೊತೆಗೆ ಹೋರಾಟಕ್ಕೆ ಕೈಜೋಡಿಸೋಣ. ಬದಲಾವಣೆಯ ಕೂಗಿಗೆ ಧ್ವನಿಗೂಡಿಸುವ ಹೊಣೆಗಾರಿಕೆಯನ್ನು ತೋರಿಸೋಣ ಎಂಬ ಸಂದೇಶಗಳು ಹರಿದಾಡಿದವು.

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟವರೇ ಅಟ್ಲಾಂಟಿಕ್ ರೆಕಾರ್ಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬ್ರಿಯಾನಾ ಅಜಿಮಾಂಗ್ ಮತ್ತು ಜಮೀಲಾ ಥಾಮಸ್. ಅನಂತರದಲ್ಲಿ ಈ ಅಭಿಯಾನವು ಬಿಲ್ಲಿ ಎಲಿಶ್, ಬ್ರಿಟ್ನಿ ಸ್ಪೇರ್ಸ್, ರೋಲಿಂಗ್ ಸ್ಟೋನ್, ರೇಡಿಯೋಹೆಡ್ ನಿರ್ಮಾಪಕ ಕ್ಯೂಂನ್ಸಿ ಜೋನ್ಸ್ ಮತ್ತು ಎಮಿನಮ್ ಮೂಲಕ ನೂರಾರು ಜನರಿಗೆ ತಲುಪಿತು.

ಜಾರ್ಜ್ ಫ್ಲೋಯ್ಡ್ ಮೆಮೋರಿಯಲ್ ಗೆ ನಿಧಿ ಸಂಗ್ರಹ

ಜಾರ್ಜ್ ಫ್ಲೋಯ್ಡ್ ಮೆಮೋರಿಯಲ್ ಗೆ ನಿಧಿ ಸಂಗ್ರಹ

ಕಪ್ಪು ವರ್ಣೀಯ ಜಾರ್ಜ್ ಫ್ಲೋಯ್ಡ್ ಮೆಮೋರಿಯಲ್ ಗೆ ನಿಧಿ ಸಂಗ್ರಹಿಸಲಾಗುತ್ತಿದ್ದು, ಸಂಗೀತ ವಲಯದಿಂದ ಹಣದ ಹೊಳೆ ಹರಿದು ಬರುತ್ತಿದೆ. ಇಂಟರ್ ಸ್ಕೋಪ್ ರೆಕಾರ್ಡ್ಸ್ ಸಂಸ್ಥೆಯು ಮುಂದಿನ ಒಂದು ವಾರಗಳವರೆಗೂ ಯಾವುದೇ ಹೊಸ ಹಾಡುಗಳನ್ನು ಬಿಡುಗಡೆ ಮಾಡುವುದಿಲ್ಲವೆಂದು ತಿಳಿಸಿದೆ. ಅದರಂತೆ ಯೂನಿವರ್ಸಲ್, ಸೋನಿ ಹಾಗೂ ವಾರ್ನರ್ ಮ್ಯೂಸಿಕ್ ಕಂಪನಿಗಳು ಭಾರಿ ಮೊತ್ತವನ್ನು ನೀಡುವುದಕ್ಕೆ ಅಂಕಿತ ಹಾಕಿವೆ.

ಮುಂದಿನ ಹೋರಾಟಕ್ಕೆ ಇದು ಆರಂಭವಷ್ಟೇ!

ಮುಂದಿನ ಹೋರಾಟಕ್ಕೆ ಇದು ಆರಂಭವಷ್ಟೇ!

ಅಮೆರಿಕಾದಲ್ಲಿ ವರ್ಣಬೇಧ ನೀತಿ ವಿರುದ್ಧ ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ಟಿವಿ, ರೇಡಿಯೋಗಳಲ್ಲಿನ ಕಾರ್ಯಕ್ರಮ ಬಹಿಷ್ಕಾರವೊಂದು ಆರಂಭವಷ್ಟೇ ಎಂದು ಅಟ್ಲಾಂಟಿಕ್ ರೆಕಾರ್ಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬ್ರಿಯಾನಾ ಅಜಿಮಾಂಗ್ ಮತ್ತು ಜಮೀಲಾ ಥಾಮಸ್ ಹೇಳಿದ್ದಾರೆ. ಅಲ್ಲದೇ ಈ ಹೋರಾಟ ಕೇವಲ 24 ಗಂಟೆಗಳಿಗೆ ಸೀಮಿತವಾಗಿದ್ದಲ್ಲ. ದೀರ್ಘ ಅವಧಿವರೆಗೆ ಈ ಹೋರಾಟಕ್ಕೆ ನಾವು ಕೈಜೋಡಿಸಬೇಕಿದೆ. ಹೋರಾಟದ ರೂಪರೇಷೆಗಳ ಬಗ್ಗೆ ಯೋಜನೆಯನ್ನು ಪ್ರಕಟಿಸಲಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

English summary
George Floyd Death: What is Blackout Tuesday?. Why Tv Screens are Converted as Black, Programmes Are Changed, Why Radio Channels Are Paused, Read Here For Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more