ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಕೊರೊನಾ ವೈರಸ್ ಹೆಚ್ಚಾಗಲು 'ಇದೊಂದೇ' ಕಾರಣವೇ?

|
Google Oneindia Kannada News

ವಾಶಿಂಗ್ಟನ್, ಜೂನ್.05: ಚೀನಾದ ವುಹಾನ್ ನಲ್ಲಿ ಮೊದಲು ಕಾಣಿಸಿಕೊಂಡ ನೊವೆಲ್ ಕೊರೊನಾ ವೈರಸ್ ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದೆ. ಪ್ರತಿನಿತ್ಯ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಮಹಾಮಾರಿ ದೈತ್ಯ ರಾಷ್ಟ್ರಗಳನ್ನೇ ನಲುಗುವಂತೆ ಮಾಡಿದೆ.

Recommended Video

ಫೊರ್ಬ್ಸ್ ವಿಶ್ವದ ಅತ್ಯಂತ ಶ್ರೀಮಂತ ತಾರೆಯರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಏಕೈಕ ಭಾರತೀಯ | Oneindia Kannada

ಗುರುವಾರದ ಅಂಕಿ-ಅಂಶಗಳ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(USA)ದಲ್ಲಿ ಕಳೆದ 24 ಗಂಟೆಗಳಲ್ಲೇ 14,676 ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದೆ. ಒಂದೇ ದಿನ 827 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಅಮೆರಿಕಾದಲ್ಲಿ ಕೊವಿಡ್-19ನಿಂದ ಪ್ರಾಣ ಬಿಟ್ಟವರ ಸಂಖ್ಯೆ 1,07,029ಕ್ಕೆ ಏರಿಕೆಯಾಗಿದೆ.

ಅಮೆರಿಕಾದಲ್ಲಿ 'ಖಾಕಿ'ಗಳೇ ಪ್ರತಿಭಟನಾಕಾರರ ಎದುರು ಮಂಡಿಯೂರಿದ್ದೇಕೆ?ಅಮೆರಿಕಾದಲ್ಲಿ 'ಖಾಕಿ'ಗಳೇ ಪ್ರತಿಭಟನಾಕಾರರ ಎದುರು ಮಂಡಿಯೂರಿದ್ದೇಕೆ?

ಅಮೆರಿಕಾದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥಾ ಕೇಂದ್ರವು ನೀಡಿರುವ ಅಂಕಿ-ಅಂಶಗಳ ಪ್ರಕಾರ ಅಮೆರಿಕಾದಲ್ಲಿ ಇದುವರೆಗೂ 18,61,966 ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದ್ದು, ಮಹಾಮಾರಿಗೆ 1,07,685 ಮಂದಿ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದ 3.87 ಲಕ್ಷ ಜನ ಸಾವು

ಕೊರೊನಾ ವೈರಸ್ ಸೋಂಕಿನಿಂದ 3.87 ಲಕ್ಷ ಜನ ಸಾವು

ವಿಶ್ವದಾದ್ಯಂತ ಕೊರೊನಾ ವೈರಸ್ ರೌದ್ರನರ್ತನ ಮಾಡುತ್ತಿದೆ. ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ ಜಗತ್ತಿನಲ್ಲಿ ಕೊವಿಡ್-19 ಮಹಾಮಾರಿಯು 67,04,152ಕ್ಕೂ ಅಧಿಕ ಮಂದಿಗೆ ಅಂಟಿಕೊಂಡಿದೆ. ಕೊರೊನಾ ವೈರಸ್ ನಿಂದಾಗಿ 3,93,239ಕ್ಕೂ ಅಧಿಕ ಜನರು ಜೀವ ಚೆಲ್ಲಿದ್ದಾರೆ. ಖುಷಿಯ ವಿಚಾರ ಎಂದರೆ ಇದುವರೆಗೂ 32,52,562ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ನಿಂದ ಗುಣಮುಖರಾಗಿದ್ದಾರೆ.

ಕೊರೊನಾ ವೈರಸ್ ಆತಂಕದ ನಡುವೆ ಉಗ್ರ ಹೋರಾಟ

ಕೊರೊನಾ ವೈರಸ್ ಆತಂಕದ ನಡುವೆ ಉಗ್ರ ಹೋರಾಟ

ಅಮೆರಿಕಾದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲೋಯ್ಡಾ ಸಾವನ್ನು ಖಂಡಿಸಿ ಶ್ವೇತ ವರ್ಣೀಯ ಪೊಲೀಸ್ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಒಂದು ಕಡೆಯಲ್ಲಿ ಬೀದಿಗಿಳಿದು ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಹರಡುವ ಆತಂಕ ಎದುರಾಗಿದೆ. ಶಾಂತಿಯುತ ಪ್ರತಿಭಟನೆಯೇ ಆಗಲಿ, ಉಗ್ರ ಸ್ವರೂಪದ ಪ್ರತಿಭಟನೆಯೇ ಆಗಿರಲಿ. ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಇರುವ ಜನರು ಬೀದಿಗೆ ಇಳಿಯುವುದರಿಂದ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗುವ ಆತಂಕವಿದ್ದು, ಇದನ್ನು ನಿಯಂತ್ರಿಸಲು ವೈಯಕ್ತಿಕವಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಿಡಿಸಿ ನಿರ್ದೇಶಕ ರಾಬರ್ಟ್ ರೆಡ್ ಫೀಲ್ಡ್ ತಿಳಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆಗೆ ಇಂಗ್ಲೆಂಡ್ ಮುಂದು

ಲಾಕ್ ಡೌನ್ ಸಡಿಲಿಕೆಗೆ ಇಂಗ್ಲೆಂಡ್ ಮುಂದು

ಕೊರೊನಾ ವೈರಸ್ ಭೀತಿ ನಡುವೆಯೂ ಇಂಗ್ಲೆಂಡ್ ನಲ್ಲಿ ಜೂನ್.15ರಿಂದ ಲಾಕ್ ಡೌನ್ ಸಡಿಲಿಕೆಗೆ ತೀರ್ಮಾನಿಸಲಾಗಿದೆ. ಸಾರ್ವಜನಿಕ ಸಾರಿಗೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದ್ದು, ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ದೇಶದಲ್ಲಿ 2,27,387ಕ್ಕೂ ಅಧಿಕ ಮಂದಿಗೆ ಸೋಂಕು

ದೇಶದಲ್ಲಿ 2,27,387ಕ್ಕೂ ಅಧಿಕ ಮಂದಿಗೆ ಸೋಂಕು

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಅಟ್ಟಹಾಸ ಮುಂದುವರಿದಿದೆ. ದೇಶದಲ್ಲಿ ಇದುವರೆಗೂ 2,27,387ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿರುವುದು ದೃಢರಪಟ್ಟಿದ್ದು, ಮಹಾಮಾರಿಗೆ 6,367ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ. ಇನ್ನು, 1,08,644 ಸೋಂಕಿತರು ಗುಣಮುಖರಾಗಿದ್ದರೆ, 1,12,364ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

English summary
Coronavirus infection Rised anxiety from the fight against the death of George Floyd in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X