ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಜ್ ಫ್ಲಾಯ್ಡ್ ಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ?

|
Google Oneindia Kannada News

ವಾಷಿಂಗ್ಟನ್, ಜೂನ್ 8: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಹಲವೆಡೆ ಪ್ರತಿಭಟನೆಯ ಕಾವೇರಿತ್ತು. ಪ್ರತಿಭಟನೆ ಹಿಂಸಾಚಾರದ ರೂಪ ಪಡೆದುಕೊಂಡು, ಹಲವು ಕಟ್ಟಡಗಳು ಬೆಂಕಿಗೆ ಆಹುತ್ತಿಯಾಗಿತ್ತು.

Recommended Video

ಚಿರು ಸಂಪಾದಿಸಿದ ಆಸ್ತಿ ಈ ಅಭಿಮಾನಿಗಳು | Chiranjeevi Sarja | FILMIBEAT KANNADA

ಇದೀಗ ಬ್ಲಾಕ್ ಮ್ಯಾನ್ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ ಮಿನ್ನಿಯಾಪೊಲಿಸ್ ನಲ್ಲಿರುವ ಪೊಲೀಸ್ ಇಲಾಖೆಯನ್ನು ಪುನರ್ನಿಮಿಸಲಾಗುವುದು ಎಂದು ಸಿಟಿ ಕೌನ್ಸಿಲರ್ ಗಳು ಭಾನುವಾರ ತಿಳಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?

ಮಿನ್ನಿಯಾಪೊಲಿಸ್ ಸಿಟಿ ಕೌನ್ಸಿಲ್ ನ ಬಹುಪಾಲು ಸದಸ್ಯರು.. ನಗರದ ಪೊಲೀಸ್ ಇಲಾಖೆಯನ್ನು ಕೆಡವಲು ವಾಗ್ದಾನ ಮಾಡಿದ್ದಾರೆ. ವರ್ಣಭೇದ ನೀತಿಯ ಆರೋಪ ಹೊತ್ತಿರುವ ಮಿನ್ನಿಯಾಪೊಲಿಸ್ ನಗರದಲ್ಲಿ ''ಸಾರ್ವಜನಿಕ ಸುರಕ್ಷತೆಯ ಹೊಸ ಮಾದರಿ ರೂಪಿಸಲಾಗುವುದು'' ಎಂದು 13 ಕೌನ್ಸಿಲರ್ ಗಳಲ್ಲಿ 9 ಮಂದಿ ಹೇಳಿದ್ದಾರೆ.

ಆದರೆ, ಮೇಯರ್ ಜೇಕಬ್ ಫ್ರೇ ಮಾತ್ರ ಈ ಕ್ರಮವನ್ನು ವಿರೋಧಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ

ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ

ಹಾಗ್ನೋಡಿದ್ರೆ, ಹಲವಾರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಬೇಕು ಎಂಬುದು ಕಾರ್ಯಕರ್ತರ ಒತ್ತಾಯ ಆಗಿತ್ತು. ಇದೀಗ ಮಿನ್ನಿಯಾಪೊಲಿಸ್ ನಗರದ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತರುವ ಕೌನ್ಸಿಲರ್ ಗಳ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ.


ಆದ್ರೆ, ಮಿನ್ನಿಯಾಪೊಲೀಸ್ ನಗರದ ಪೊಲೀಸ್ ಇಲಾಖೆಯಲ್ಲಿ ಯಾವ ರೀತಿಯ ರಚನಾತ್ಮಕ ಸುಧಾರಣೆಯಾಗಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಸಮುದಾಯಗಳನ್ನು ಸುರಕ್ಷಿತವಾಗಿರಿಸುತ್ತಿಲ್ಲ.!

ಸಮುದಾಯಗಳನ್ನು ಸುರಕ್ಷಿತವಾಗಿರಿಸುತ್ತಿಲ್ಲ.!

ಮಿನ್ನಿಯಾಪೊಲಿಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ನಗರಗಳಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಪೊಲೀಸ್ ಮತ್ತು ಸಾರ್ವಜನಿಕ ಸುರಕ್ಷತೆಯ ವ್ಯವಸ್ಥೆಯು ನಮ್ಮ ಸಮುದಾಯಗಳನ್ನು ಸುರಕ್ಷಿತವಾಗಿರಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ'' ಎಂದು ಸಿಟಿ ಕೌನ್ಸಿಲ್ ಅಧ್ಯಕ್ಷೆ ಲಿಸಾ ಬೆಂಡರ್ ಹೇಳಿದ್ದಾರೆ.

ಮಿನ್ನಿಯಾಪೊಲೀಸ್ ನಗರದಲ್ಲಿನ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಯೋಜನೆ ಯು.ಎಸ್ ನಾದ್ಯಂತ ಹೊಸ 'ಪೊಲೀಸಿಂಗ್' ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

ಹೊಸ ಪೊಲೀಸ್ ವ್ಯವಸ್ಥೆ ಸ್ಥಾಪಿಸುವ ಪ್ರಕ್ರಿಯೆ ತಡವಾಗಲಿದೆ. ಇದಕ್ಕೆ ಮೇಯರ್ ವಿರೋಧ ವ್ಯಕ್ತಪಡಿಸಿರುವುದರಿಂದ, ಹೊಸ ವ್ಯವಸ್ಥೆ ಜಾರಿಗೆ ತರುವ ಆರಂಭದಲ್ಲೇ ವಿಘ್ನ ಎದುರಾಗಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ: ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲುಜಾರ್ಜ್ ಫ್ಲಾಯ್ಡ್ ಹತ್ಯೆ: ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ನ್ಯೂಯಾರ್ಕ್ ಸಿಟಿ ಮೇಯರ್ ಹೇಳಿದ್ದೇನು.?

ನ್ಯೂಯಾರ್ಕ್ ಸಿಟಿ ಮೇಯರ್ ಹೇಳಿದ್ದೇನು.?

ಪೊಲೀಸ್ ಇಲಾಖೆಗೆ ಹಣ ನೀಡುವ ಬದಲು, ಅದನ್ನು ಸಾಮಾಜಿಕ ಸೇವೆಗಳಿಗೆ ನೀಡುವುದಾಗಿ ನ್ಯೂಯಾರ್ಕ್ ಸಿಟಿ ಮೇಯರ್ ಬಿಲ್ ಡೇ ಬ್ಲಾಸಿಯೋ ಈ ಹಿಂದೆಯೇ ಹೇಳಿದ್ದರು.

ವರ್ಣಭೇದ ನೀತಿಗೆ ಶುಭಂ ಹಾಡಲು, ಅನಗತ್ಯ ಮಾತಿನ ಮಾತಿನ ಚಕಮಕಿಯನ್ನು ತಪ್ಪಿಸಲು ಪೊಲೀಸ್ ಇಲಾಖೆಗಳ ಬಜೆಟ್ ಅನ್ನು ಕಡಿತಗೊಳಿಸಬೇಕು ಮತ್ತು ಆ ಹಣವನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ನೀಡಬೇಕು ಎಂಬುದು ಹಲವರ ವಾದವಾಗಿದೆ,

ಶಾಂತಯುತವಾಗಿ ನಡೆಯುತ್ತಿದೆ ಪ್ರತಿಭಟನೆ

ಶಾಂತಯುತವಾಗಿ ನಡೆಯುತ್ತಿದೆ ಪ್ರತಿಭಟನೆ

ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ಅಮೇರಿಕಾದ ಹಲವು ನಗರಗಳಲ್ಲಿ ಈಗಲೂ ಪ್ರತಿಭಟನೆ ನಡೆಯುತ್ತಿದೆ. ವಾಷಿಂಗ್ಟನ್, ನ್ಯೂಯಾರ್ಕ್ ಸಿಟಿ ಮತ್ತು ಲಾಸ್ ಏಂಜಲೀಸ್ ನಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಭಾನುವಾರ ಪ್ರತಿಭಟನೆ ನಡೆಸಿದ್ದರು. ಸದ್ಯಕ್ಕೆ ಶಾಂತಯುತವಾಗಿ ಪ್ರತಿಭಟನೆ ಸಾಗುತ್ತಿದೆ.

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸಾವು ಸಂಭವಿಸಿದ್ದು ಹೇಗೆ.?

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

ಜಾರ್ಜ್ ಫ್ಲಾಯ್ಡ್ ವಿರುದ್ಧ ಕ್ರೌರ್ಯ ಮೆರೆದಿದ್ದ 'ಬಿಳಿ' ಪೊಲೀಸ್ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಹಾಕಿ ಬಂಧಿಸಲಾಗಿದೆ. ಹಾಗೇ, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇತರೆ ಮೂರು ಪೊಲೀಸರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಕೆಲಸದಿಂದ ವಜಾಗೊಳಿಸಲಾಗಿದೆ.

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

English summary
George Floyd Death: Minneapolis Police Department to be dismantled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X