ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಜ್ ಫ್ಲಾಯ್ಡ್ ಹತ್ಯೆ: ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

|
Google Oneindia Kannada News

ವಾಷಿಂಗ್ಟನ್, ಜೂನ್ 4; ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ 'ಬಿಳಿ' ಪೊಲೀಸ್ ಆಫೀಸರ್ ಡೆರೆಕ್ ಚೌವಿನ್ ವಿರುದ್ಧ ಸೆಕೆಂಡ್ ಡಿಗ್ರಿ ಮರ್ಡರ್ ಪ್ರಕರಣ ದಾಖಲಾಗಿದೆ. ಡೆರೆಕ್ ಚೌವಿನ್ ಜೊತೆಗಿದ್ದ ಮೂರು ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕೇಸ್ ಫೈಲ್ ಆಗಿದ್ದು, ಅರೆಸ್ಟ್ ವಾರೆಂಟ್ ಜಾರಿಯಾಗಿದೆ.

ಬ್ಲಾಕ್ ಮ್ಯಾನ್ ಜಾರ್ಜ್ ಫ್ಲಾಯ್ಡ್ ಉಸಿರುಗಟ್ಟಲು, ಪ್ರಜ್ಞಾಹೀನ ಸ್ಥಿತಿಗೆ ತಲುಪಲು ಕಾರಣರಾದ ಡೆರೆಕ್ ಚೌವಿನ್ ವಿರುದ್ಧ ಸೆಕೆಂಡ್ ಡಿಗ್ರಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಇದರ ಅನ್ವಯ ಡೆರೆಕ್ ಚೌವಿನ್ 40 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಹಿಂಸಾತ್ಮಕ ಪ್ರತಿಭಟನೆ: ಅಮೇರಿಕಾ ಪೊಲೀಸರ ಮೇಲೆ ಗುಂಡಿನ ದಾಳಿ.!ಹಿಂಸಾತ್ಮಕ ಪ್ರತಿಭಟನೆ: ಅಮೇರಿಕಾ ಪೊಲೀಸರ ಮೇಲೆ ಗುಂಡಿನ ದಾಳಿ.!

''ನಮಗೆ ಲಭ್ಯವಿರುವ ಪುರಾವೆಗಳು ಈಗ ಸೆಕೆಂಡ್ ಡಿಗ್ರಿ ಮರ್ಡರ್ ಆರೋಪವನ್ನು ಬೆಂಬಲಿಸುತ್ತದೆ'' ಎಂದು ಮಿನೆಸೋಟಾದ ಅಟಾರ್ನಿ ಜನರಲ್ ಕೀತ್ ಎಲ್ಲಿಸನ್ ತಿಳಿಸಿದ್ದಾರೆ.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

ಡೆರಿಕ್ ಚೌವಿನ್ ಎಸಗಿದ ಹತ್ಯೆಗೆ ಸಹಾಯ ಮಾಡಿದ ಉಳಿದ ಮೂವರು ಪೊಲೀಸ್ ಅಧಿಕಾರಿಗಳು ಸದ್ಯ ಬಂಧನ ಭೀತಿಯಲ್ಲಿದ್ದಾರೆ.

ಕೆಲಸದಿಂದ ನಾಲ್ವರು ಪೊಲೀಸರು ವಜಾ

ಕೆಲಸದಿಂದ ನಾಲ್ವರು ಪೊಲೀಸರು ವಜಾ

ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಕಾರಣವಾದ ಡೆರೆಕ್ ಚೌವಿನ್ ವಿರುದ್ಧ ಮೊದಲು ಥರ್ಡ್ ಡಿಗ್ರಿ ಮರ್ಡರ್ ಪ್ರಕರಣ ದಾಖಲಾಗಿತ್ತು. ಇದೀಗ ಅದನ್ನ ಸೆಕೆಂಡ್ ಡಿಗ್ರಿ ಮರ್ಡರ್ ಪ್ರಕರಣಕ್ಕೆ ಅಪ್ ಗ್ರೇಡ್ ಮಾಡಲಾಗಿದೆ.

ಡೆರೆಕ್ ಚೌವಿನ್ ಜೊತೆಗಿದ್ದ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಮೊದಲು ಪ್ರಕರಣ ದಾಖಲಾಗಿರಲಿಲ್ಲ. ಆದ್ರೀಗ, ಆ ಮೂವರ ವಿರುದ್ಧವೂ ಕೇಸ್ ಫೈಲ್ ಮಾಡಲಾಗಿದೆ.

ಡೆರೆಕ್ ಚೌವಿನ್ ಮತ್ತು ಇತರೆ ಮೂವರು ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

{ಚಿತ್ರಕೃಪೆ: ಎಪಿ}

ಡೆರೆಕ್ ಚೌವಿನ್ ಹಿನ್ನಲೆ

ಡೆರೆಕ್ ಚೌವಿನ್ ಹಿನ್ನಲೆ

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾದ 'ಬಿಳಿ' ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ 1990 ರಲ್ಲಿ ಯು.ಎಸ್. ಸೈನ್ಯದಲ್ಲಿ ಮಿಲಿಟರಿ ಪೊಲೀಸ್ ಆಗಿ ಸೇವೆ ಸಲ್ಲಿಸಿದ್ದರು.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.?ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.?

2001 ರಲ್ಲಿ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡ ಡೆರೆಕ್ ಚೌವಿನ್ ಎರಡು ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು.

ಪ್ರತಿಭಟನೆಯ ಕಾವು ಕಮ್ಮಿಯಾಗಿಲ್ಲ.!

ಪ್ರತಿಭಟನೆಯ ಕಾವು ಕಮ್ಮಿಯಾಗಿಲ್ಲ.!

ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣರಾದ ಪೊಲೀಸರಿಗೆ ಕಠಿಣ ಶಿಕ್ಷೆಯಾಗಬೇಕು. ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ ಅಮೇರಿಕಾದಲ್ಲಿ ಪ್ರತಿಭಟನೆ ಪ್ರಾರಂಭವಾಯ್ತು.

ಮೊದಲು ಶಾಂತವಾಗಿ ಆರಂಭವಾದ ಪ್ರತಿಭಟನೆ ಬಳಿಕ ಹಿಂಸಾತ್ಮಕ ರೂಪ ಪಡೆದುಕೊಳ್ತು. ವಾಣಿಜ್ಯ ಮಳಿಗೆಗಳು, ಕಟ್ಟಡಗಳು, ಹೋಟೆಲ್ ಗಳು, ಚರ್ಚ್, ವಾಹನಗಳು ಬೆಂಕಿಗೆ ಆಹುತಿಯಾದವು.

ಅಮೇರಿಕಾದ ಹಲವು ನಗರಗಳಲ್ಲಿ ಇನ್ನೂ ಪ್ರತಿಭಟನೆಯ ಕಾವು ಕಮ್ಮಿ ಆಗಿಲ್ಲ. ಆದರೆ, ಹಿಂಸಾತ್ಮಕ ಪ್ರತಿಭಟನೆ ಕಡಿಮೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

English summary
George Floyd Death: 4 Police Officers to face criminal charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X