• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಎಫೆಕ್ಟ್: ಬಡ್ಡಿ ರಹಿತ EMI ಆಫರ್ ನೀಡಿದ ಕಾರು ಕಂಪನಿ

|

ವಾಷಿಂಗ್ಟನ್, ಮಾರ್ಚ್ 17: ಕೊರೊನಾ ವೈರಸ್ ಜಾಗತಿಕ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ತಿಂಗಳುಗಟ್ಟಲೆ ವಿಶ್ವದ ಪ್ರಮುಖ ಕಂಪನಿಗಳು ಕಾರ್ಯನಿರ್ವಹಿಸದೆ ಮುಚ್ಚಿದೆ. ಪ್ರಮುಖವಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಭಾರಿ ಹಿನ್ನಡೆಯಾಗಿದೆ.

   MS Dhoni leaves Chennai after IPL 2020 postponed till April 15 | IPL2020 | Dhoni Return to Home

   ಇದೀಗ, ಕೊರೊನಾ ವೈರಸ್‌ ದಾಳಿಯ ಬಳಿಕ ಹೊಸ ಕಾರುಗಳನ್ನು ಉತ್ಪಾದನೆ ಹೇಗೆ ಮಾಡಬೇಕು ಮತ್ತು ಅದನ್ನು ಹೇಗೆ ಮಾರಾಟ ಮಾಡಬೇಕು ಎಂಬ ಚಿಂತನೆಯಲ್ಲಿದೆ.

   ಮೂತ್ರ ವಿಸರ್ಜನೆಗೆಂದು ರಸ್ತೆಪಕ್ಕ ಬಿಎಂಡಬ್ಲ್ಯೂ ಕಾರು ನಿಲ್ಲಿಸಿದ್ದ: ಮುಂದೇನಾಯ್ತು?

   ಆದರೆ, ಯುಎಸ್ ಮೂಲದ ಜನರಲ್ ಮೋಟರ್ ಕಂಪನಿ ಮಾತ್ರ, ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಹೊರ ಕಾರು ಖರೀದಿಸುವ ಗ್ರಾಹಕರಿಗೆ ಕಾರಿನ ಇಎಂಐ ಮೇಲೆ ಸಹಜವಾಗಿ ಇರುತ್ತಿದ್ದ ಬಡ್ಡಿಯನ್ನು ತೆಗೆದು ಹಾಕಿದೆ. ಬಡ್ಡಿ ರಹಿತ ಇಎಂಐ ಪಾವತಿಸುವ ಆಫರ್ ನೀಡಲು ಮುಂದೆ ಬಂದಿದೆ.

   ಈ ಮೂಲಕ ಚೆವ್ರೊಲೆಟ್, ಬ್ಯೂಕ್ ಮತ್ತು ಕ್ಯಾಡಿಲಾಕ್‌ನಂತಹ ಬ್ರಾಂಡ್‌ಗಳ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಯೋಜನೆ ಹಾಕಿದೆ.

   ಇದೇ ರೀತಿ ಮತ್ತೊಂದು ಪ್ರಖ್ಯಾತ ಕಾರು ಕಂಪನಿ ಫೋರ್ಡ್ ಮೋಟಾರ್ ಹೊಸ ಕಾರಿನ ಮೊದಲ ಪಾವತಿಯನ್ನು 3 ತಿಂಗಳವರೆಗೆ ವಿಳಂಬಗೊಳಿಸುವ ಆಯ್ಕೆಯನ್ನು ನೀಡಲು ಮುಂದಾಗಿದೆ.

   ಭಾರತಕ್ಕೆ ಬಂತು ಫ್ಲೈಯಿಂಗ್ ಕಾರು, ವಾಹ್...ಎನ್ನುವಂತಿದೆ ವಿಶೇಷತೆಗಳು

   ಜನರಲ್ ಮೋಟಾರ್ಸ್, ಫೋರ್ಡ್ ಗ್ರೂಪ್ ಮತ್ತು ಫಿಯೆಟ್ ಕ್ರಿಸ್ಲರ್ ಕಂಪನಿಗಳ ಮೇಲೆ ಕೊರೊನಾ ವೈರಸ್ ಪರಿಣಾಮ ಬೀರಿದ್ದು, ಇದರಿಂದ ಸುರಕ್ಷಿತವಾಗಿರಲು ತಮ್ಮ ಕೆಲಸಗಾರರಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಸೂಚಿಸಿದೆಯಂತೆ.

   English summary
   US Based General Motors Car Company is Offering Zero Percent Interest On EMI for next 7 years.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X