ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್

|
Google Oneindia Kannada News

ಅಲ್ಲಿ ಕೆಲವೇ ವಾರಗಳ ಹಿಂದೆ ಭೀಕರ ಹಿಂಸಾಚಾರ ನಡೆದಿತ್ತು. ಲಕ್ಷಾಂತರ ಟ್ರಂಪ್ ಬೆಂಬಲಿಗರು ಅಲ್ಲಿಗೆ ನುಗ್ಗಿ ಹಿಂಸೆ ನಡೆಸಿದ್ದರು. ಆದರೆ ಅದೆಲ್ಲವನ್ನ ಮರೆತು ಬೈಡನ್ ಪದಗ್ರಹಣ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ ಅಮೆರಿಕ ಸಂಸತ್. ಅಂದಹಾಗೆ ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡನ್ ಅಧಿಕಾರ ಸ್ವೀಕರಿಸುವುದು ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ಬೈಡನ್ ಪದಗ್ರಹಣ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಸಾಗಿವೆ.

ಕ್ಯಾಪಿಟಲ್ ಹಿಲ್ ಆವರಣ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದು, ಜನವರಿ 20ರಂದು ಬೈಡನ್ ಇಲ್ಲಿ ನಿಂತು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮತ್ತೊಂದ್ಕಡೆ ಕಾರ್ಯಕ್ರಮವನ್ನ ಭರ್ಜರಿಯಾಗಿ ನಡೆಸುವ ಉದ್ದೇಶದಿಂದ ಸ್ಟಾರ್‌ಗಳನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಮೆರಿಕದ ದಂತಕಥೆ ಲೇಡಿ ಗಾಗಾ ಹಾಗೂ ನಟಿ ಜೆನ್ನಿಫರ್ ಲೋಪೆಜ್ ಸೇರಿದಂತೆ ಕವಯತ್ರಿ ಅಮಂಡಾ ಗೋರ್ಮನ್ ಸ್ಟೇಜ್ ಹತ್ತಿ ರಂಜಿಸಲಿದ್ದಾರಂತೆ. ಬೈಡನ್ ಪದಗ್ರಹಣ ಕಾರ್ಯಕ್ರಮದ ಉಸ್ತುವಾರಿ ಹೊತ್ತಿರುವ ಸಮಿತಿ ಈ ವಿಚಾರವನ್ನ ಸ್ಪಷ್ಟಪಡಿಸಿದೆ.

1.9 ಟ್ರಿಲಿಯನ್ ಡಾಲರ್ ಪರಿಹಾರ, ಅಮೆರಿಕನ್ನರಿಗೆ ಬೈಡನ್ ಅಭಯ1.9 ಟ್ರಿಲಿಯನ್ ಡಾಲರ್ ಪರಿಹಾರ, ಅಮೆರಿಕನ್ನರಿಗೆ ಬೈಡನ್ ಅಭಯ

ತುರ್ತು ಪರಿಸ್ಥಿತಿ ಘೋಷಣೆ

ತುರ್ತು ಪರಿಸ್ಥಿತಿ ಘೋಷಣೆ

ಈಗಾಗ್ಲೇ ಕ್ಯಾಪಿಟಲ್ ಹಿಲ್ ಮೇಲೆ ಭೀಕರವಾದ ದಾಳಿ ನಡೆದಿದೆ. ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್‌ ಒಳಗೆ ನುಗ್ಗಿ ಹಿಂಸೆ ನಡೆಸಿದ್ದಾರೆ. ಜನವರಿ 6ರಂದು ಹಿಂಸಾಚಾರ ನಡೆದಿದ್ದು, ಜನವರಿ 20ರಂದು ಹಿಂಸಾಚಾರ ನಡೆದಿದ್ದ ಜಾಗದಲ್ಲೇ ಬೈಡನ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಭಾರಿ ಮುಂಜಾಗ್ರತೆ ಕೈಗೊಂಡಿರುವ ಅಮೆರಿಕ ಭದ್ರತಾ ಸಂಸ್ಥೆಗಳು, ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಿವೆ. ಅನಾಮಿಕರು ಕ್ಯಾಪಿಟಲ್ ಹಿಲ್ ಕಟ್ಟಡದ ಬಳಿ ಸುಳಿಯದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕ್ಯಾಪಿಟಲ್ ಹಿಲ್ ಕಟ್ಟಡ ಏಳು ಸುತ್ತಿನ ಕೋಟಿಯಾಗಿ ಬದಲಾಗಿದೆ.

ಅದು ಸಂಸತ್, ಇದು ಹೌಸ್..!

ಅದು ಸಂಸತ್, ಇದು ಹೌಸ್..!

ಟ್ರಂಪ್ ಬೆಂಬಲಿಗರು ದಾಳಿ ನಡೆಸಿರುವುದು ಅಮೆರಿಕ ಸಂಸತ್ ಮೇಲೆ. ಅಂದರೆ ಕ್ಯಾಪಿಟಲ್ ಹಿಲ್ ಮೇಲೆ. ಆದರೆ ವೈಟ್‌ಹೌಸ್ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ವೈಟ್‌ಹೌಸ್ ಕಾಮಗಾರಿಯನ್ನ 1792ರಲ್ಲಿ ಶುರು ಮಾಡಲಾಯಿತು. ಇದಾದ ಒಂದು ವರ್ಷಗಳ ನಂತರ, ಅಂದರೆ 1793ರಲ್ಲಿ ಕ್ಯಾಪಿಟಲ್ ಹಿಲ್ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಹೀಗೆ ಕ್ಯಾಪಿಟಲ್ ಹಿಲ್ ಹಾಗೂ ವೈಟ್‌ಹೌಸ್ ಎರಡೂ ಅಮೆರಿಕದ ಘನತೆಯ ಸಂಕೇತ. ಈ ಎರಡೂ ಕಟ್ಟಡಗಳ ಮಧ್ಯೆ ಕೇವಲ 3 ಕಿಲೋ ಮೀಟರ್ ಅಂತರವಿದೆ.

2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?2ನೇ ಬಾರಿಗೆ ವಾಗ್ದಂಡನೆ, ಡೊನಾಲ್ಡ್ ಟ್ರಂಪ್ ಭವಿಷ್ಯವೇನು?

‘ಕ್ಯಾಪಿಟಲ್ ಹಿಲ್’ ಒಳಗೆ ಏನೇನಿದೆ..?

‘ಕ್ಯಾಪಿಟಲ್ ಹಿಲ್’ ಒಳಗೆ ಏನೇನಿದೆ..?

ವಾಷಿಂಗ್ಟನ್ ಡಿಸಿ ಅಮೆರಿಕದ ರಾಜಧಾನಿ. ಡಿಸಿಯಲ್ಲಿ ನಿರ್ಮಾಣವಾಗಿರುವ 'ಕ್ಯಾಪಿಟಲ್ ಹಿಲ್' ಸಂಸತ್‌ಗೆ ಮಾತ್ರ ಜಾಗ ನೀಡಿಲ್ಲ. ಸುಪ್ರೀಂಕೋರ್ಟ್ ಕಟ್ಟಡ, ಲೈಬ್ರರಿ ಆಫ್ ಕಾಂಗ್ರೆಸ್, ಮೆರೈನ್ ಬ್ಯಾರಕ್ಸ್ ಸೇರಿದಂತೆ ವಾಷಿಂಗ್ಟನ್ ನೇವಿ ಯಾರ್ಡ್ ಕೂಡ ಇದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೆ ಸೇರಿರುವ ಹಲವು ಕಟ್ಟಡಗಳು 'ಕ್ಯಾಪಿಟಲ್ ಹಿಲ್'ನಲ್ಲಿ ಇವೆ. ಇನ್ನು 'ಕ್ಯಾಪಿಟಲ್ ಹಿಲ್'ನಲ್ಲಿರುವ ವಸತಿ ಪ್ರದೇಶ ವಾಷಿಂಗ್ಟನ್‌ನ ಅತ್ಯಂತ ಹಳೆಯ ವಸತಿ ಪ್ರದೇಶಗಳಲ್ಲಿ ಒಂದಾಗಿದೆ. ಅಮೆರಿಕದ ಗಣ್ಯರು ಮೃತಪಟ್ಟರೆ ಇಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಅಮೆರಿಕದ ಇತಿಹಾಸ ಏನು ಹೇಳುತ್ತೆ..?

ಅಮೆರಿಕದ ಇತಿಹಾಸ ಏನು ಹೇಳುತ್ತೆ..?

ಅಮೆರಿಕ 1776ರ ಜುಲೈ 4ರಂದು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆಯಿತು. ಬಳಿಕ 1789ರಲ್ಲಿ ಅಮೆರಿಕದಲ್ಲಿ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬಂತು. ಹೀಗೆ ಸ್ವತಂತ್ರ ಅಮೆರಿಕದ ಮೊಟ್ಟಮೊದಲ ದೊರೆಯೇ ಜಾರ್ಜ್ ವಾಷಿಂಗ್ಟನ್. ಅಂದಿನ ಸಂದರ್ಭದಲ್ಲಿ ಜಾರ್ಜ್ ವಾಷಿಂಗ್ಟನ್ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆಯಲು ಹೋರಾಡಿದ್ದ ಅಮೆರಿಕನ್ನರು ಅವರನ್ನೇ ಮೊದಲ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. 1789 ಅಧ್ಯಕ್ಷ ಪಟ್ಟಕ್ಕೆ ಆಯ್ಕೆಯಾದ ವಾಷಿಂಗ್ಟನ್ ಅವರಿಗೂ ಉನ್ನತವಾದ ಸಂಸತ್ ಭವನ ನಿರ್ಮಾಣದ ಕನಸು ಇತ್ತು. ಈ ಕನಸು 1793ರಲ್ಲಿ ಈಡೇರಿತ್ತು. ಒಂದು ಕಡೆ ಅಮೆರಿಕ ಅಧ್ಯಕ್ಷರಿಗೆ ಭವ್ಯವಾದ ಮನೆ ಹಾಗೂ ಸಂಸತ್‌ ಭವ್ಯ ಕಟ್ಟಡ ನಿರ್ಮಾಣವಾಗಿತ್ತು. ಹೀಗೆ ಸುಮಾರು 200ಕ್ಕೂ ಹೆಚ್ಚು ವರ್ಷಗಳಿಂದ ಈ ಕಟ್ಟಡಗಳು ಅಸ್ತಿತ್ವದಲ್ಲಿ ಇವೆ.

English summary
Lady Gaga, Jennifer Lopez and Amanda Gorman will perform at swearing-in ceremony of Joe Biden on January 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X