ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಫೆಡ್‌ಎಕ್ಸ್ ಘಟಕದಲ್ಲಿ ಗುಂಡಿನ ದಾಳಿ: ನಾಲ್ವರು ಸಿಖ್ಖರು ಸೇರಿ ಎಂಟು ಮಂದಿ ಹತ್ಯೆ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 17: ಅಮೆರಿಕದ ಇಂಡಿಯಾನಪೊಲಿಸ್‌ನ ಫೆಡ್‌ಎಕ್ಸ್ ಘಟಕದಲ್ಲಿ ಗುರುವಾರ ರಾತ್ರಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ನಾಲ್ವರು ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನೂ ಐವರು ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಇಂಡಿಯಾನದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಫೆಡ್‌ಎಕ್ಸ್ ಘಟಕದಲ್ಲಿ ಗುರುವಾರ ತಡರಾತ್ರಿ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ. ಬಳಿಕ ಶುಕ್ರವಾರ ಬೆಳಿಗ್ಗೆ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ದಾಳಿಕೋರನನ್ನು ಇಂಡಿಯಾನದ 19 ವರ್ಷದ ಬ್ರೆಂಡನ್ ಸ್ಕಾಟ್ ಹೋಲ್ ಎಂದು ಗುರುತಿಸಲಾಗಿದೆ.

ಗುಂಡಿನ ದಾಳಿ ನಡೆಸಿ ಸಾವಿಗೆ ಶರಣಾದ ಬಂದೂಕುಧಾರಿಗುಂಡಿನ ದಾಳಿ ನಡೆಸಿ ಸಾವಿಗೆ ಶರಣಾದ ಬಂದೂಕುಧಾರಿ

ಫೆಡ್‌ಎಕ್ಸ್ ಡೆಲಿವರಿ ಸೇವಾ ಘಟಕದಲ್ಲಿ ಕೆಲಸ ಮಾಡುವವರಲ್ಲಿ ಶೇ 90ರಷ್ಟು ಮಂದಿ ಭಾರತೀಯ-ಅಮೆರಿಕನ್ ಜನರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಸ್ಥಳೀಯ ಸಿಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Four Sikhs Among 8 Killed In FedEx Facility Mass Shooting In US State Of Indiana

'ಇದು ಹೃದಯ ಛಿದ್ರಮಾಡುವಂತಹ ಘಟನೆ. ಈ ದುರಂತ ಘಟನೆಯಿಂದ ಸಿಖ್ ಸಮುದಾಯ ಕಂಗಾಲಾಗಿದೆ' ಎಂದು ಸಮುದಾಯದ ಮುಖಂಡ ಗುರಿಂದರ್ ಸಿಂಕ್ ಖಾಸ್ಲಾ ಹೇಳಿದ್ದಾರೆ. ಈ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಘಾತ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟವರ ಗೌರವಾರ್ಥ ಶ್ವೇತ ಭವನ ಮತ್ತು ಎಲ್ಲ ಫೆಡರಲ್ ಕಟ್ಟಡಗಳ ಮೇಲೆಯೂ ಅರ್ಧಭಾಗದಲ್ಲಿ ಹಾರಿಸುವಂತೆ ಬೈಡನ್ ಸೂಚಿಸಿದ್ದಾರೆ. ಈ ದಾಳಿಯು ಸಿಖ್ ಸಮುದಾಯವನ್ನೇ ಗುರಿಯನ್ನಾಗಿರಿಸಿ ಮಾಡಿದ ಪೂರ್ವ ನಿಯೋಜಿತ ಸಂಚೇ ಅಥವಾ ಬೇರೆ ಉದ್ದೇಶವಿತ್ತೇ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

English summary
Four Sikhs among 8 killed in FedEx facility mass shooting in US State of Indiana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X