ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಡೆರೆಕ್‌ಗೆ 22.5 ವರ್ಷ ಜೈಲು ಶಿಕ್ಷೆ

|
Google Oneindia Kannada News

ವಾಷಿಂಗ್ಟನ್‌, ಜೂ.26: ಮೇ 2020 ರಲ್ಲಿ ಆಫ್ರಿಕನ್-ಅಮೆರಿಕನ್‌ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟ ಅಮೆರಿಕದ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್‌ಗೆ ಶುಕ್ರವಾರ 270 ತಿಂಗಳು ಅಥವಾ 22.5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಈಗಾಗಲೇ ಜೈಲಿನಲ್ಲಿ ಇದ್ದ ಅವಧಿಯನ್ನು ಹೊರತುಪಡಿಸಿ ಈ ಶಿಕ್ಷೆ ನೀಡಲಾಗಿದೆ ಎಂದು ವರಿಯಾಗಿದೆ.

ಮಿನೆಸೋಟಾ ರಾಜ್ಯದ ಕೋರ್ಟ್ ನೀಡಿದ ಆದೇಶದ ಪ್ರಕಾರ, ಮಾಜಿ ಪೊಲೀಸ್ ಅಧಿಕಾರಿ ಮೇಲ್ವಿಚಾರಣೆಯ ಬಿಡುಗಡೆಗೆ ಅರ್ಹತೆ ಪಡೆಯುವ ಮೊದಲು ಶಿಕ್ಷೆಯ ಅವಧಿಯ ಮೂರನೇ ಎರಡರಷ್ಟು ಅಥವಾ 15 ವರ್ಷಗಳನ್ನು ಪೂರೈಸಬೇಕಾಗುತ್ತದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ, ಪೊಲೀಸ್ ಅಧಿಕಾರಿ ಅಪರಾಧಿ ಎಂದ ಕೋರ್ಟ್ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ, ಪೊಲೀಸ್ ಅಧಿಕಾರಿ ಅಪರಾಧಿ ಎಂದ ಕೋರ್ಟ್

ಚಾವಿನ್‌ ವಿರುದ್ದ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಹೀಗಾಗಿ ಗರಿಷ್ಠ 12.5 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇತ್ತು. ಆದರೆ ''ಈ ಪ್ರಕರಣ ಅತ್ಯಂತ ಕ್ರೂರ'' ಎಂದು ಹೇಳಿರುವ ಕೋರ್ಟ್ ಹತ್ತು ವರ್ಷ ಹೆಚ್ಚುವರಿ ಶಿಕ್ಷೆ ಘೋಷಣೆ ಮಾಡಿದೆ. ಆದರೆ ಸಂತ್ರಸ್ಥರ ಕುಟುಂಬ ''ಅಪರಾಧಿಗೆ ಮೂವತ್ತು ವರ್ಷ ಜೈಲು ಶಿಕ್ಷೆ ವಿಧಿಸಬೇಕು,'' ಎಂದು ಮನವಿ ಮಾಡಿತ್ತು.

Former US police officer Derek sentenced to 22.5 years for George Floyd’s murder case

''ಚೌವಿನ್ ಎರಡನೇ ಹಂತದ ಕೊಲೆ, ಮೂರನೇ ಹಂತದ ಕೊಲೆ ಮತ್ತು ನರಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಚೌವಿನ್‌ಗೆ ಎರಡನೇ ಹಂತದ ಉದ್ದೇಶಪೂರ್ವಕ ಕೊಲೆಗೆ ಶಿಕ್ಷೆ ವಿಧಿಸಲಾಗಿದೆ. ನಂಬಿಕೆ ಹಾಗೂ ಅಧಿಕಾರವನ್ನು ದುರುಪಯೋಗ ಮಾಡಿದ ಹಿನ್ನೆಲೆ ಈ ಜೈಲು ಶಿಕ್ಷೆ ವಿಧಿಸಲಾಗಿದೆ,'' ಎಂದು ನ್ಯಾಯಾಧೀಶ ಪೀಟರ್‌ ಕಾಹಿಲ್‌ ಹೇಳಿದ್ದಾರೆ.

ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?

ಪ್ರಕರಣವೇನು?

ಮೇ 25, 2020 ರಂದು, ಮಿನೆಸೋಟಾದ ಅಂಗಡಿಯೊಂದರಲ್ಲಿ ನಕಲಿ ಬಿಲ್ ಬಳಸಿದ ಆರೋಪದ ಮೇಲೆ ನಾಲ್ಕು ಪೊಲೀಸ್ ಅಧಿಕಾರಿಗಳು ಫ್ಲಾಯ್ಡ್ ಅನ್ನು ವಶಕ್ಕೆ ಪಡೆದಿದ್ದಾರೆ. ನಿರಾಯುಧನಾಗಿದ್ದ ಫ್ಲಾಯ್ಡ್ ಕುತ್ತಿಗೆಗೆ ತನ್ನ ಮಂಡಿಯಲ್ಲಿ ಡೆರೆಕ್ ಚೌವಿನ್‌ ಅದುಮಿಟ್ಟಿದ್ದನು. ಈ ಸಂದರ್ಭದಲ್ಲಿ ಬೇರೆ ಯಾವ ಅಧಿಕಾರಿಗಳು ಡೆರೆಕ್ ಚೌವಿನ್‌ರನ್ನು ತಡೆದಿಲ್ಲ. ''ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ'' ಎಂದು ಹೇಳುತ್ತಿದ್ದ ಜಾರ್ಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆ ಮತ್ತು ಬೆನ್ನಿಗೆ ಬಲ ಬಿದ್ದ ಕಾರಣ ಉಸಿರುಗಟ್ಟಿ ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಈ ಕುಕೃತ್ಯದ ದೃಶ್ಯದ ಸುಮಾರು ಒಂಬತ್ತು ನಿಮಿಷಗಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದಂತೆ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು. ಕಪ್ಪು ವರ್ಣೀಯರ ವಿರುದ್ದದ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

(ಒನ್‌ಇಂಡಿಯಾ ಸುದ್ದಿ)

Recommended Video

ಪಿನಾಕ ರಾಕೆಟ್ ನ್ನ ಯಶಸ್ವಿಯಾಗಿ ಹಾರಿಸಲಾಗಿದೆ! | Oneindia Kannada

English summary
Former US police officer Derek Chauvin, found guilty of the murder of African-American man George Floyd in May 2020, was on Friday sentenced to prison for 270 months, or 22.5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X