ಹದಿನೈದು ವರ್ಷದ ವಿದ್ಯಾರ್ಥಿಗೆ ನಗ್ನ ಚಿತ್ರ ಕಳಿಸಿದ 'ಮಾಜಿ ಸುಂದರಿ' ಬಂಧನ
ಅಮೆರಿಕದ ಮಾಜಿ ಮಿಸ್ ಕೆಂಟುಕಿ- ವೆಸ್ಟ್ ವರ್ಜಿನಿಯಾದಲ್ಲಿ ಶಿಕ್ಷಕಿ ಆಗಿರುವ ಇಪ್ಪತ್ತೆಂಟು ವರ್ಷದ ರಾಮ್ಸೆ ಬರ್ಸೆಯನ್ನು ಬಂಧಿಸಲಾಗಿದೆ. ಹದಿನೈದು ವರ್ಷದ ತನ್ನ ಮಾಜಿ ವಿದ್ಯಾರ್ಥಿಗೆ ನಗ್ನ ಚಿತ್ರಗಳನ್ನು ಕಳುಹಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಅಪ್ರಾಪ್ತ ವಯಸ್ಕನಿಗೆ ಆಕ್ಷೇಪಾರ್ಹ ಚಿತ್ರಗಳನ್ನು ಕಳುಹಿಸಿದ ಆರೋಪ ಆಕೆ ಮೇಲಿದೆ.
ಇದೀಗ ಬರ್ಸೆ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ. ವಿದ್ಯಾರ್ಥಿಯ ಪೋಷಕರು ದೂರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ಮಗನ ಮೊಬೈಲ್ ಫೋನ್ ಗೆ ಬರ್ಸೆ ನಗ್ನ ಚಿತ್ರಗಳನ್ನು ಕಳುಹಿಸಿರುವುದು ತಿಳಿದುಬಂದಿದೆ ಎಂದು ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಬೆತ್ತಲೆ ಚಿತ್ರ ಅಪ್ ಲೋಡ್; ಹೋಟೆಲ್ ವಿರುದ್ಧ 700 ಕೋಟಿ ರುಪಾಯಿಗೆ ದಾವೆ
ಸ್ನಾಪ್ ಚಾಟ್ ನಲ್ಲಿ ನಗ್ನ ಚಿತ್ರಗಳನ್ನು ಕಳುಹಿಸಿದ್ದಾಗಿ ಬರ್ಸೆ ತಪ್ಪೊಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆಕೆ ಪರವಾಗಿ ವಕೀಲರನ್ನು ನೇಮಿಸಿಕೊಳ್ಳಲಾಗಿದೆಯೋ ಇಲ್ಲವೋ ತಿಳಿದುಬಂದಿಲ್ಲ. ಆಕೆ ಈ ಹಿಂದೆ ಶಾಲೆಯಲ್ಲಿ ಶಿಕ್ಷಕಿ ಆಗಿದ್ದದ್ದನ್ನು ಖಾತ್ರಿ ಪಡಿಸಿಕೊಳ್ಳಲಾಗಿದೆ. 2014ರಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಆಕೆ ಕಾರ್ಪೆಂಟರ್ ಹೆಸರಿನಲ್ಲಿ ಮಿಸ್ ಕೆಂಟುಕಿ ಕಿರೀಟ ಮುಡಿಗೇರಿಸಿದ್ದರು.