ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲೇ ಮೊದಲು: HIV ಪೀಡಿತೆಯಿಂದ ಮೂತ್ರಪಿಂಡ ದಾನ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 29: 35 ವರ್ಷ ವಯಸ್ಸಿನ ಎಚ್ ಐವಿ ಪೀಡಿತ ಮಹಿಳೆಯೊಬ್ಬರು ತಮ್ಮ ಕಿಡ್ನಿಯನ್ನು ಮತ್ತೋರ್ವ ಎಚ್ ಐವಿ ಪೀಡಿತರಿಗೆ ದಾನ ಮಾಡಿದ ಘಟನೆ ಅಮೆರಿಕದ ವಾಷಿಂಗ್ಟನ್ ನಲ್ಲಿ ವರದಿಯಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸ್ವತಃ ಎಚ್ ಐವಿಯಿಂದ ಬಳಲುತ್ತಿದ್ದ ಮಹಿಳೆ, ಇನ್ನೋರ್ವ ಎಚ್ ಐವಿ ಪೀಡಿತನಿಗೆ ಮೂತ್ರಪಿಂಡವನ್ನು ದಾನ ಮಾಡಿ, ಕಸಿ ಚಿಕಿತ್ಸೆಗೆ ಅನುವು ಮಾಡಿಕೊಟ್ಟ ಘಟನೆ ಜಗತ್ತಿನಲ್ಲೇ ಮೊದಲು ಎನ್ನಲಾಗಿದೆ.

ಜಗತ್ತಿಗೇ ಸಿಹಿಸುದ್ದಿ! ಇದೀಗ HIV ಸೋಂಕು ಮಂಗಮಾಯ ಮಾಡೋಕೂ ಸಾಧ್ಯ!ಜಗತ್ತಿಗೇ ಸಿಹಿಸುದ್ದಿ! ಇದೀಗ HIV ಸೋಂಕು ಮಂಗಮಾಯ ಮಾಡೋಕೂ ಸಾಧ್ಯ!

ಎಚ್ ಐವಿ ಪೀಡಿತ ವ್ಯಕ್ತಿಗಳಿಗೆ ಅಂಗಾಂಗ ಕಸಿ ಮಾಡುವುದು ಸುಲಭದ ಕೆಲಸವಲ್ಲ.ಇದುವರೆಗೆ ಮೃತ ವ್ಯಕ್ತಿಗಳ ಅಂಗಾಂಗಗಳನ್ನಷ್ಟೇ ಎಚ್ ಐವಿ ಪೀಡಿತರಿಗೆ ಕಸಿ ಮಾಡಲಾಗುತ್ತಿತ್ತು. ಆದರೆ ಇದೀಗ ಜೀವಂತ ಎಚ್ ಐವಿ ಪೀಡಿತ ವ್ಯಕ್ತಿಯ ಕಿಡ್ನಿಯನ್ನು ಇನ್ನೋರ್ವ ರೋಗಿಗೆ ದಾನ ಮಾಡಿರುವುದು ಮತ್ತು ಕಸಿ ಮಾಡಿರುವುದು ಅಚ್ಚರಿ ಎನ್ನಿಸಿದೆ.

For the first time in the world: HIV positive patient donates kidney

ಬೋನ್ ಮ್ಯಾರೋ(ಅಸ್ತಿಮಜ್ಜೆ) ಕಸಿ ಚಿಕಿತ್ಸೆಯ ಮೂಲಕ ರೋಗಿಯನ್ನು ಎಚ್ ಐವಿ ಸೋಂಕಿನಿಂದ ಮುಕ್ತಗೊಳಿಸುವುದಕ್ಕೆ ಸಾಧ್ಯ ಎಂದು ಇತ್ತೀಚೆಗಷ್ಟೇ ಲಂಡನ್ನಿನ ವಿಜ್ಞಾನಿಗಳು ಪತ್ತೆಹಚ್ಚಿದ್ದರು.

ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಗರ್ಭಿಣಿಗೆ ಎಚ್ ಐವಿ ಸೋಂಕಿನ ರಕ್ತ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಅಸುರಕ್ಷಿತ ಲೈಂಗಿಕ ಸಂಪರ್ಕ ಅಥವಾ ಎಚ್ ಐವಿ ಸೋಂಕಿತ ವ್ಯಕ್ತಿಗಳ ರಕ್ತದ ಸಂಪರ್ಕದಿಂದ ಆರಂಭವಾಗುವ ಎಚ್ ಐವಿ ಸೋಂಕು ಒಮ್ಮೆ ದೇಹವನ್ನು ಹೊಕ್ಕರೆ ಅದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದುವರೆಗೂ ಇರಲಿಲ್ಲ. ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣ ಕಡಿಮೆ ಮಾಡುವ ಮೂಲಕ ವ್ಯಕ್ತಿಯ ದೇಹವನ್ನು ರೋಗಗಳ ಗೂಡನ್ನಾಗಿ ಮಾಡುವ ಭಯಾನಕ ಕಾಯಿಲೆ ಇದು.

English summary
The kidney of a 35-year-old HIV-positive woman has been transplanted into another patient with the AIDS virus, US surgeons announced Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X