ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಅವರನ್ನೇ ಮರು ಆಯ್ಕೆ ಮಾಡಿ: ಭಾರತೀಯ ಅಮೆರಿಕನ್ನರು

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 19: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಅವರಿಗೆ ಮತ ಹಾಕಿ ಎಂದು ಭಾರತ ಮೂಲದ ಅಮೆರಿಕನ್ನರು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ 3 ರಂದು ನಡೆಯಲಿದೆ.ಭಾರತೀಯ ಅಮೆರಿಕನ್ ಫೈನಾನ್ಸ್ ಸಮಿತಿಯ ಅಲ್ ಮಸನ್ ಮಾತನಾಡಿ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಅಮೆರಿಕನ್ನರು ಶಕ್ತಿಯಾಗಿ ಹೊರಹೊಮ್ಮಿದ್ದಾರೆ, ನಿಮ್ಮ ಕೊಡುಗೆ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸಹಾಯವಾಗುತ್ತದೆ ಎಂದರು.

ನಮಗೆ ಉತ್ತಮ ಆರ್ಥಿಕತೆ, ಕಡಿಮೆ ಬಡ್ಡಿದರ ಮತ್ತು ಸಣ್ಣ ಸರ್ಕಾರ ಬೇಕೆ, ಹಾಗಿದ್ದಲ್ಲಿ ಯಾಕೆ ಟ್ರಂಪ್ ಅವರನ್ನೇ ಮರು ಆಯ್ಕೆ ಮಾಡಬಾರದು, ಭಾರತಕ್ಕೆ ಉತ್ತಮ ಸ್ನೇಹಿತ ಬೇಕೆಂದರೆ ಟ್ರಂಪ್ ಅವರನ್ನು ಆಯ್ಕೆ ಮಾಡೋಣ ಎಂದು ಭಾರತ ಮೂಲದ ಖ್ಯಾತ ಉದ್ಯಮಿ ಚಿಂಟು ಪಟೇಲ್ ಹೇಳಿದ್ದಾರೆ.

ಜೋ ಬಿಡೆನ್ ಅಮೆರಿಕದ ಅಧ್ಯಕ್ಷರಾದರೆ ಭಾರತಕ್ಕೆ ಒಳ್ಳೆಯದಲ್ಲ: ಟ್ರಂಪ್ ಪುತ್ರ ಜೋ ಬಿಡೆನ್ ಅಮೆರಿಕದ ಅಧ್ಯಕ್ಷರಾದರೆ ಭಾರತಕ್ಕೆ ಒಳ್ಳೆಯದಲ್ಲ: ಟ್ರಂಪ್ ಪುತ್ರ

ಇಂಡಿಯನ್ ವಾಯ್ಸ್ ಫಾರ್ ಟ್ರಂಪ್ ಸದಸ್ಯ ಶ್ರೀಧರ್ ಚಿತ್ಯಾಲ, ಕಳೆದ ನಾಲ್ಕು ವರ್ಷಗಳಲ್ಲಿನ ಟ್ರಂಪ್ ಅವರ ಆಡಳಿತ ನೀತಿಗಳು ಗಟ್ಟಿಯಾದ, ಯಾವುದೇ ಅಡೆತಡೆಗಳಿಲ್ಲದೆ, ರೂಪಾಂತರ ಹೊಂದುವಂತಿದ್ದವು.

ಚೀನಾ ವಿಚಾರದಲ್ಲಿ, ಭಾರತದ ಪರ ಎಂಬ ಬಲವಾದ ಸಂದೇಶವನ್ನು ಟ್ರಂಪ್ ಕಳುಹಿಸಿದ್ದಾರೆ. ಅವರನ್ನು ಮರು ಆಯ್ಕೆ ಮಾಡುವುದೇ ನಮ್ಮ ಯೋಚನೆಯಾಗಿರಬೇಕು.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಉದ್ಯಮಿ ನವೀನ್ ಶಾ ಮಾತನಾಡಿ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ವೈರಸ್ ನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎನ್ನುತ್ತಾರೆ. ಅಮೆರಿಕವನ್ನು ಶಾಂತಿ ಮತ್ತು ಸೌಹಾರ್ದತೆಯತ್ತ ಮತ್ತು ಆರ್ಥಿಕತೆಯಲ್ಲಿ ಉತ್ತಮ ಸಾಧನೆ ಮಾಡಲು ಬಹಳ ಶ್ರಮವಹಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಮಾಡಿ

ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಮಾಡಿ

ಇದೊಂದು ಐತಿಹಾಸಿಕ ಚುನಾವಣೆಯಾಗಿದ್ದು ಇಲ್ಲಿ ನಾವೆಲ್ಲರೂ ಸರಳ ಆಯ್ಕೆಯನ್ನು ಮಾಡಿಕೊಳ್ಳಬೇಕು.

ಚೀನಾದ ಸವಾಲು ಎದುರಿಸಲು ಟ್ರಂಪ್ ಸಿದ್ಧ

ಚೀನಾದ ಸವಾಲು ಎದುರಿಸಲು ಟ್ರಂಪ್ ಸಿದ್ಧ

ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಹಾಗೆಯೇ ಚೀನಾ ಸವಾಲು ಎದುರಾದಾಗ ಭಾರತದ ಜತೆ ಅವರು ನಿಲ್ಲುವ ಭರವಸೆ ನಮಗಿದೆ.
ಚೀನಾ ನೀಡಿರುವ ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಟ್ರಂಪ್ ಅವರೇ ಮರು ಆಯ್ಕೆಯಾಗಿ ಅಧ್ಯಕ್ಷರಾಗಿ ಬರಬೇಕು ಎಂದು ಹೇಳಿದರು.

ನಾವು ಸಣ್ಣ ಸಂಖ್ಯೆಯಲ್ಲಿದ್ದೇವೆ

ನಾವು ಸಣ್ಣ ಸಂಖ್ಯೆಯಲ್ಲಿದ್ದೇವೆ

ನಾವು ಇಲ್ಲಿ ಸಣ್ಣ ಸಂಖ್ಯೆಯಲ್ಲಿ ಇರಬಹುದು, ಆದರೆ ನಾವು ಡಾಲರ್ ಗಳಲ್ಲಿ ಲೆಕ್ಕ ಹಾಕುವುದಾದರೆ ಶಕ್ತಿಯುತವಾಗಿದ್ದೇವೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ನಮ್ಮ ಮತವನ್ನು ಡೊನಾಲ್ಡ್ ಟ್ರಂಪ್ ಅವರಿಗೇ ಹಾಕೋಣ, ನಮ್ಮ ದೇಶವನ್ನು ನಾವು ಹಿಂದಕ್ಕೆ ತೆಗೆದುಕೊಂಡು ಹೋಗುವುದು ಬೇಡ, ಮುಂದಕ್ಕೆ ತೆಗೆದುಕೊಂಡು ಹೋಗೋಣ ಎಂದು ಪಟೇಲ್ ಭಾರತೀಯ ಸಮುದಾಯಕ್ಕೆ ಕರೆ ನೀಡಿದರು.

ಟ್ರಂಪ್ ಭಾರತದ ಪರ

ಟ್ರಂಪ್ ಭಾರತದ ಪರ

ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಭಾರತೀಯ ಅಮೆರಿಕನ್ನರ ಪರವಾಗಿ ಕೆಲಸ ಮಾಡುತ್ತಿರುವ ಡಾ ರಾಜ್ ಭಯಾನಿ, ಕಳೆದ ನಾಲ್ಕು ವರ್ಷಗಳಲ್ಲಿ ಚೀನಾ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತದ ಪರವಾಗಿ ಬೆಂಬಲ ಸೂಚಿಸಿದ ಟ್ರಂಪ್ ಅವರನ್ನು ಮರು ಆಯ್ಕೆ ಮಾಡುವುದು ಭಾರತೀಯರಿಗೆ ಮುಖ್ಯವಾಗಿದೆ ಎಂದರು.

English summary
Describing President Donald Trump as India’s “good friend”, a group of Indian-Americans have urged the community members across the country to support and vote for the Republican leader in the November 3 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X