ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ 45 ನಿಮಿಷ ವಿಮಾನ ಹಾರಾಟ ವಿಳಂಬಕ್ಕೆ ಕಾರಣ ಮಾಸ್ಕ್!

|
Google Oneindia Kannada News

ವಾಶಿಂಗ್ಟನ್, ನವೆಂಬರ್,30: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಪ್ರಯಾಣಿಕರೊಬ್ಬರು ಮಾಸ್ಕ್ ಧರಿಸಲು ನಿರಾಕರಿಸಿದ್ದಕ್ಕೆ 45 ನಿಮಿಷ ವಿಮಾನ ಹಾರಾಟ ವಿಳಂಬವಾಗಿರುವ ಘಟನೆ ಕುರಿತು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಸಾಲ್ಟ್ ಲೇಕ್ ಸಿಟಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟ ಡೆಲ್ಟಾ ಏರ್ ಲೈನ್ಸ್ ಗೆ ಸೇರಿದ ವಿಮಾನದಲ್ಲಿ ಪ್ರಯಾಣಿಸಲು ಮುಂದಾಗಿದ್ದ 44 ವರ್ಷದ ಜೋಶುವಾ ಕೊಲ್ಬಿ ಕೌನ್ಸಿಲ್ ಎಂಬ ವ್ಯಕ್ತಿಯು ಮಾಸ್ಕ್ ಧರಿಸಿರಲಿಲ್ಲ. ವಿಮಾನ ಏರುವುದಕ್ಕೂ ಮೊದಲು ಮಾಸ್ಕ್ ಧರಿಸುವ ವಿಚಾರಕ್ಕೆ ದೊಡ್ಡ ಹೈಡ್ರಾಮಾವನ್ನು ಸೃಷ್ಟಿಸಿದ್ದಾನೆ ಎಂದು ತಿಳಿದು ಬಂದಿದೆ.

ಮುಂಬೈನಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದ 10 ಕೋಟಿ ದಂಡ ಸಂಗ್ರಹ! ಮುಂಬೈನಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಂದ 10 ಕೋಟಿ ದಂಡ ಸಂಗ್ರಹ!

ವಿಮಾನ ಏರುವುದಕ್ಕೆ ಮುಂದಾದ ವ್ಯಕ್ತಿಯನ್ನು ತಡೆದ ಸಿಬ್ಬಂದಿಯು ಕೊರೊನಾವೈರಸ್ ಸೋಂಕಿನ ಹಿನ್ನೆಲೆ ಮಾಸ್ಕ್ ಧರಿಸುವಂತೆ ಸೂಚಿಸಿದರು. ವಿಮಾನದ ಕ್ಯಾಪ್ಟನ್ ಮತ್ತು ಅಟೆಂಡೆಂಟ್ ಕೂಡಾ ವ್ಯಕ್ತಿಗೆ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡರು.

Flight Will 45 Minutes Delay From A Single Man For Not Wear Mask

ಭದ್ರತಾ ಸಿಬ್ಬಂದಿ ಜೊತೆಗೂ ಪ್ರಯಾಣಿಕನ ಜಗಳ:

ಮಾಸ್ಕ್ ಧರಿಸುವುದಕ್ಕೆ ನಿರಾಕರಿಸಿದ ಪ್ರಯಾಣಿಕನನ್ನು ಕೆಳಗಿಳಿಸಲು ಭದ್ರತಾ ಸಿಬ್ಬಂದಿಯನ್ನೇ ಕರೆಯಿಸಲಾಯಿತು. ಈ ವೇಳೆ ಸೀಟ್ ಬಿಟ್ಟು ಏಳುವುದಕ್ಕೂ ವ್ಯಕ್ತಿ ನಿರಾಕರಿಸಿದ್ದು ದೊಡ್ಡ ಹೈಡ್ರಾಮಾ ಸೃಷ್ಟಿಸಿದನು. ಸಹ ಪ್ರಯಾಣಿಕರು ಮನವಿ ನಂತರದಲ್ಲಿ ಅಂತಿಮವಾಗಿ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯೇ ಬಂಧಿಸಿ ಕರೆದೊಯ್ದರು. ವ್ಯಕ್ತಿ ಸೃಷ್ಟಿಸಿದ ಅವಾಂತರದಿಂದ ವಿಮಾನ 45 ನಿಮಿಷಗಳ ಕಾಲ ತಡವಾಗಿ ಹೊರಡುವಂತಾಗಿದ್ದು, ವಿಮಾನಯಾನ ಸಂಸ್ಥೆಯು ಈ ವಿಳಂಬಕ್ಕೆ ಪ್ರಯಾಣಿಕರ ಕ್ಷಮೆಯಾಚಿಸಿತು. ಇನ್ನೊಂದು ಕಡೆ ವಿಮಾನದಲ್ಲಿ ಮಾಸ್ಕ್ ಧರಿಸುವುದಕ್ಕೆ ರಂಪಾಟ ಮಾಡಿದ ವ್ಯಕ್ತಿಯನ್ನು ಒಂದು ದಿನ ಜೈಲಿನಲ್ಲಿಟ್ಟುಕೊಂಡು ಮರುದಿನ ಬಿಡುಗಡೆ ಮಾಡಲಾಗಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

English summary
Flight Will 45 Minutes Delay From A Single Man For Not Wear Mask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X