ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಕೊರೊನಾ ಸೋಂಕು ತಗುಲಿದ್ದ ಮೊದಲ ನಾಯಿ ಸಾವು

|
Google Oneindia Kannada News

ವಾಷಿಂಗ್ಟನ್, ಜುಲೈ 31: ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ನಾಯಿ ಸಾವನ್ನಪ್ಪಿದೆ. ಅದಕ್ಕೆ ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಸೋಂಕಿನ ಲಕ್ಷಣಗಳೇ ಗೋಚರಿಸಿದ್ದವು.

ಏಳು ವರ್ಷದ ಜರ್ಮನ್ ಷಫರ್ಡ್ ನಾಯಿ ಏಪ್ರಿಲ್‌ನಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಅದೇ ಸಂದರ್ಭದಲ್ಲಿ ಮಾಲೀಕ ರಾಬರ್ಟ್ ಕೂಡ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿದ್ದರು.

ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡಲಿದೆ ಹೃದ್ರೋಗ

ನಾಯಿಗೆ ಉಸಿರಾಟದ ತೊಂದರೆಯಿತ್ತು. ವಾರ, ತಿಂಗಳುಗಳು ಕಳೆದಂತೆ ಅದರ ಪರಿಸ್ಥಿತಿ ಚಿಂತಾಜನಕವಾಗಿತ್ತು. ರಾಬರ್ಟ್ ಹಾಗೂ ಅವರ ಪತ್ನಿ ನ್ಯೂಯಾರ್ಕ್‌ನಲ್ಲಿ ವಾಸವಿದ್ದಾರೆ.

First Dog To Test Positive For Coronavirus In US Dies

ಜುಲೈ 11 ರಂದು ನಾಯಿ ರಕ್ತ ವಾಂತಿಯನ್ನು ಮಾಡಿಕೊಂಡಿತ್ತು.ಮೂತ್ರದಲ್ಲೂ ಕೂಡ ರಕ್ತವಿತ್ತು, ಓಡಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ನಾಯಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಎಲ್ಲಾ ಆಸ್ಪತ್ರೆಗಳು ಬಂದ ಇದ್ದವು.ಕೆಲವು ದಿನಗಳ ಬಳಿಕ ಪರೀಕ್ಷೆ ನಡೆಸಿದಾಗ ನಾಯಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ನಾಯಿಗೆ ಹತ್ತು ತಿಂಗಳು ಇದ್ದಾಗಿನಿಂದ ಅದನ್ನು ಸಾಕಿದ್ದರು. ಇಲ್ಲಿಯವರೆಗೆ ಯಾವುದೇ ಚಿಕ್ಕಪುಟ್ಟ ವ್ಯಾಧಿಯೂ ಕೂಡ ಅದಕ್ಕಿರಲಿಲ್ಲ. ಅಮೆರಿಕದಲ್ಲಿ 12 ನಾಯಿಗಳು 10 ಬೆಕ್ಕಿಗೆ ಕೊರೊನಾ ಸೋಂಕು ತಗುಲಿದೆ.

English summary
The first dog to test positive for the coronavirus in the United States has died, National Geographic magazine reported, after struggling with symptoms that may be familiar to many of the virus's human sufferers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X