ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಟ್‌ ಹೌಸ್‌ನಲ್ಲಿ ಮೊದಲ ಕೊರೊನಾ ಕೇಸ್‌ ಪತ್ತೆ: ಟ್ರಂಪ್‌ಗೆ ಹೆಚ್ಚಿದ ಆತಂಕ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 21: ಅಮೆರಿಕ ವೈಟ್‌ಹೌಸ್‌ ಸಿಬ್ಬಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢವಾಗಿದೆ. ಶುಕ್ರವಾರ ಈ ಕುರಿತು ವೈಟ್‌ಹೌಸ್ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ. ಇದೀಗ, ವೈಟ್‌ಹೌಸ್‌ನ ಉಳಿದ ಸಿಬ್ಬಂದಿಗೆ ಕೊರೊನಾ ಆತಂಕ ಹೆಚ್ಚಾಗಿದೆ.

ಇನ್ನು ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೂ ಸೋಂಕು ತಗಲಿರಬಹುದು ಎಂಬ ಅನುಮಾನ ಕಾಡಿದೆ ಹಿನ್ನೆಲೆ, ಆ ಸಿಬ್ಬಂದಿ ಜೊತೆ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಯಾವುದೇ ರೀತಿಯ ಸಂಪರ್ಕ ಹೊಂದಿಲ್ಲ ಎಂದು ಖಚಿತಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಪರೀಕ್ಷೆ!ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕೊರೊನಾ ಪರೀಕ್ಷೆ!

ಮೈಕ್ ಪೆನ್ಸ್ ವಕ್ತರಾ ಕೇಟಿ ಮಿಲ್ಲರ್ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಶುಕ್ರವಾರ ಸಂಜೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ, ಟ್ರಂಪ್ ಮತ್ತು ಮೈಕ್ ಪೆನ್ಸ್ ಇವರ ಜೊತೆ ಸಂಪರ್ಕ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ.

First Coronavirus Positive Case In Whitehouse

ಯುಎಸ್‌ನಲ್ಲಿ ಸೋಂಕು ಹೆಚ್ಚಾಗುವ ಭೀತಿಯಿಂದ ಈಗಾಗಲೇ ಜನರನ್ನು ಮನೆಯಲ್ಲೇ ಉಳಿದುಕೊಳ್ಳಿ ಎಂದು ಸೂಚಿಸಲಾಗಿದೆ. ಕಂಪನಿಗಳಿಗೆ ಮನೆಯಿಂದ ಕೆಲಸ ಮಾಡಲು ಆದೇಶಿಸಿದೆ.

ಇನ್ನು ಕಳೆದ ವಾರ ಬ್ರೆಜಿಲ್‌ನ ಸದಸ್ಯರೊಬ್ಬರು ಡೊನಾಲ್ಡ್ ಟ್ರಂಪ್ ಜೊತೆ ಡಿನ್ನರ್ ಪಾರ್ಟಿ ಮಾಡಿದ್ದರು. ಈ ಅನುಮಾನದಿಂದ ಟ್ರಂಪ್ ಈಗಾಗಲೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗಿಟಿವ್ ಫಲಿತಾಂಶ ಬಂದಿದೆ. ಆದರೆ, ಮೈಕ್‌ ಪೆನ್ಸ್ ಟೆಸ್ಟ್ ಮಾಡಿಕೊಂಡಿಲ್ಲ.

ಹಲವು ದೇಶಕ್ಕೆ ಬಾಗಿಲು ಮುಚ್ಚಿದ ಭಾರತ ಆ ಒಂದು ರಾಷ್ಟ್ರಕ್ಕೆ ಅವಕಾಶ ಕೊಟ್ಟಿದ್ಯಾ?ಹಲವು ದೇಶಕ್ಕೆ ಬಾಗಿಲು ಮುಚ್ಚಿದ ಭಾರತ ಆ ಒಂದು ರಾಷ್ಟ್ರಕ್ಕೆ ಅವಕಾಶ ಕೊಟ್ಟಿದ್ಯಾ?

ಯುಎಸ್‌ಎನಲ್ಲಿ ಇದುವರೆಗೂ 20,193 ಕೊರೊನಾ ಕೇಸ್‌ಗಳು ದೃಢಪಟ್ಟಿದೆ. ಅದರಲ್ಲಿ 279 ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಕೊರೊನಾ ಹರಡುವಿಕೆಯನ್ನು ತಡೆಯಲು ಎಲ್ಲ ರೀತಿಯ ಮುಂಜಾಗೃತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

English summary
First coronavirus positive case reported in america's white house. now, donald trump want to check COVID 19 test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X