• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಮೊದಲ 'ಭಾರತದ ರೂಪಾಂತರ' ವೈರಸ್ ಪ್ರಕರಣ ಪತ್ತೆ

|

ಕ್ಯಾಲಿಫೋರ್ನಿಯಾ, ಮಾರ್ಚ್ 5: ಭಾರತದಲ್ಲಿ ಮೊದಲು ಕಂಡುಬಂದಿದ್ದ ಕೋವಿಡ್ ರೂಪಾಂತರ ತಳಿಯ ಸೋಂಕಿನ ಒಂದು ಪ್ರಕರಣ ಅಮೆರಿಕದಲ್ಲಿ ದಾಖಲಾಗಿದೆ. ಉತ್ತರ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರಲ್ಲಿ ಭಾರತದ ಕೋವಿಡ್ ರೂಪಾಂತರ ತಗುಲಿರುವುದನ್ನು ಸ್ಟಾಂಡ್‌ಫೋರ್ಡ್ ವಿಶ್ವವಿದ್ಯಾಲಯ ಪತ್ತೆಹಚ್ಚಿದೆ.

ಹೊಸ ತಳಿಯು ಎರಡು ರೂಪಾಂತರಗಳನ್ನು ಹೊಂದಿದೆ. ಇದರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪತ್ತೆಯಾದ ಸ್ಪೈಕಿ ಪ್ರೋಟೀನ್‌ನಲ್ಲಿ ಅಂಟಿಕೊಳ್ಳುವ ವೈರಸ್ ಒಂದಾಗಿದೆ ಎಂದು ಸ್ಟಾಂಡ್‌ಫೋರ್ಟ್ ಹೆಲ್ತ್ ಕೇರ್ ವಕ್ತಾರರಾದ ಲಿಸಾ ಕಿಮ್ ತಿಳಿಸಿದ್ದಾರೆ.

ಭಾರತದಲ್ಲಿ ಮತ್ತೆ ಲಕ್ಷ ದಾಟಿದ ಕೊರೊನಾ ಪ್ರಕರಣ; 1,03,558 ಹೊಸ ಪ್ರಕರಣ ದಾಖಲುಭಾರತದಲ್ಲಿ ಮತ್ತೆ ಲಕ್ಷ ದಾಟಿದ ಕೊರೊನಾ ಪ್ರಕರಣ; 1,03,558 ಹೊಸ ಪ್ರಕರಣ ದಾಖಲು

ಸ್ಯಾನ್ ಫ್ರಾನ್ಸಿಸ್ಕೋ ಬೇ ಪ್ರದೇಶದ ರೋಗಿಯೊಬ್ಬರಲ್ಲಿ ಈ ಸೋಂಕು ಕಂಡುಬಂದಿದೆ. ಇದು ಅಮೆರಿಕದಲ್ಲಿ ದಾಖಲಾದ ಈ ಮಾದರಿಯ ಮೊದಲ ಪ್ರಕರಣ ಎಂಬುದಾಗಿ ನಾವು ಭಾವಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಈ ರೂಪಾಂತರ ವೈರಸ್ ಮೊದಲು ಭಾರತದಲ್ಲಿ ವರದಿಯಾಗಿತ್ತು. ಭಾರತದ ಆರೋಗ್ಯಾಧಿಕಾರಿಗಳು ಕಳೆದ ತಿಂಗಳು ಈ ರೂಪಾಂತರದ ಬಗ್ಗೆ ಮಾಹಿತಿ ನೀಡಿದ್ದರು. 'ಭಾರತದ ವೈರಸ್ ರೂಪಾಂತರ' ಎಂಬ ಪದ ಪ್ರಯೋಗಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಬ್ರಿಟನ್ ರೂಪಾಂತರ, ದಕ್ಷಿಣ ಆಫ್ರಿಕಾ ರೂಪಾಂತರ ಹೀಗೆ ಕರೆಯುವುದಾದರೆ ವುಹಾನ್ ವೈರಸ್ ಅಥವಾ ಚೀನಾ ವೈರಸ್ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

English summary
One case of a new Covid variant first detected in India has been found in the United States California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X