ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದು ಚೀನಾ ಅಲ್ಲ ನಾವು: WHO

|
Google Oneindia Kannada News

ವಾಷಿಂಗ್ಟನ್, ಜುಲೈ 4:ಕೊರೊನಾವೈರಸ್‌ ಬಗ್ಗೆ ಮೊದಲು ಎಚ್ಚರಿಕೆ ನೀಡಿದ್ದು ಚೀನಾ ಅಲ್ಲ ನಾವು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Recommended Video

ತುಂಬಿ ಹರಿದ ಕಾಗಿಣಾ ನದಿ, ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರ ರಕ್ಷಣೆ | Oneindia Kannada

ಚೀನಾದ ವುಹಾನ್ ನಗರದಲ್ಲಿ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ನಮ್ಮ ವೆವ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದೆವು ಎನ್ನುವ ಮಾಹಿತಿ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ ಹೇಳಿದ ಡೊನಾಲ್ಡ್ ಟ್ರಂಪ್ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ ಹೇಳಿದ ಡೊನಾಲ್ಡ್ ಟ್ರಂಪ್

ಅಮೆರಿಕದಲ್ಲಿ ಕೊರೊನಾವೈರಸ್ ತಾರಕಕ್ಕೇರುತ್ತಿದ್ದಂತೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಕೊರೊನಾ ಸೋಂಕು ಪ್ರಕರಣದ ಬಗ್ಗೆ ಮಾಹಿತಿ ಇದ್ದರೂ ಅದು ನೀಡಿಲ್ಲ. ಜೊತೆಗೆ ಚೀನಾದ ಪರವಾಗಿ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದ್ದರು.

ಹ್ಯೂಬೆನಲ್ಲಿ ಡಿಸೆಂಬರ್‌ನಲ್ಲಿ ಮೊದಲ ನ್ಯುಮೋನಿಯಾ ಪ್ರಕರಣ ಪತ್ತೆ

ಹ್ಯೂಬೆನಲ್ಲಿ ಡಿಸೆಂಬರ್‌ನಲ್ಲಿ ಮೊದಲ ನ್ಯುಮೋನಿಯಾ ಪ್ರಕರಣ ಪತ್ತೆ

ಡಿಸೆಂಬರ್‌ ತಿಂಗಳಲ್ಲಿ ಹ್ಯೂಬೆಯಲ್ಲಿ ಮೊದಲ ನ್ಯುಮೋನಿಯಾ ಪ್ರಕರಣ ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಯಾರೂ ಕೂಡ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಏಪ್ರಿಲ್ 20 ರಂದು ಸುದ್ದಿಗೋಷ್ಠಿಯಲ್ಲಿ ಏನು ಹೇಳಿತ್ತು?

ಏಪ್ರಿಲ್ 20 ರಂದು ಸುದ್ದಿಗೋಷ್ಠಿಯಲ್ಲಿ ಏನು ಹೇಳಿತ್ತು?

ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೋಸ್ ಏಪ್ರಿಲ್ 20 ರಂದು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಅಂದು ಚೀನಾದಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಆ ಮಾಹಿತಿ ಎಲ್ಲಿಂದ ಬಂತು, ಚೀನಾದವರು ನೀಡಿದ್ದೋ ಅಥವಾ ಬೇರೆ ಮೂಲದಿಂದ ಲಭ್ಯವಾಯಿತೋ ಎನ್ನುವ ಕುರಿತು ಮಾಹಿತಿ ನೀಡಿರಲಿಲ್ಲ.

ಕೊರೊನಾವನ್ನು ವೈರಲ್ ನ್ಯುಮೋನಿಯಾ ಎಂದು ಕರೆದರು

ಕೊರೊನಾವನ್ನು ವೈರಲ್ ನ್ಯುಮೋನಿಯಾ ಎಂದು ಕರೆದರು

ಡಿಸೆಂಬರ್ 31 ರಂದು ಚೀನಾದಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಪತ್ತೆಯಾದಾಗ, ಚೀನಾದಲ್ಲಿದ್ದ ವಿಶ್ವ ಆರೋಗ್ಯ ಸಂಸ್ಥೆಯು ಅದನ್ನು ವೈರಲ್ ನ್ಯುಮೋನಿಯಾ ಎಂದು ಕರೆಯಿತು. ಅದೇ ದಿನವೇ ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು ಎಂದು ವರದಿ ನೀಡಿತ್ತು. ಈ ಕುರಿತು ಚೀನಾದ ಬಳಿ ಎರಡು ಬಾರಿ ವರದಿ ಕೇಳಿತ್ತು ಬಳಿಕ ಮೂರನೇ ಬಾರಿಗೆ ಚೀನಾ ಮಾಹಿತಿ ನೀಡಿತ್ತು.

ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನಕ್ಕೆ ತಡೆ

ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನಕ್ಕೆ ತಡೆ

ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಕುರಿತು ಮೊದಲು ಎಚ್ಚರಿಕೆ ನೀಡಿದೆ, ಇದು ಚೀನಾದಿಂದಲೇ ಉತ್ಪತ್ತಿಯಾಗಿದ್ದು ಎಂದು ಹೇಳಿದರೂ ಚೀನಾದ ಕುರಿತು ಆರೋಗ್ಯ ಸಂಸ್ಥೆ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಅನುದಾನವನ್ನು ತಡೆ ಹಿಡಿದಿದ್ದರು. ಸ್ವಲ್ಪ ದಿನಗಳ ಬಳಿಕ ಚೀನಾ ನೀಡುವಷ್ಟೇ ಅನುದಾನವನ್ನು ನೀಡುವುದಾಗಿ ತಿಳಿಸಿದ್ದರು.

English summary
The World Health Organization has updated its account of the early stages of the COVID crisis to say it was alerted by its own office in China, and not by China itself, to the first pneumonia cases in Wuhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X