ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!

|
Google Oneindia Kannada News

ವಾಷಿಂಗ್ಟನ್, ಮೇ 2: ಕೊರೊನಾ ಸೋಂಕಿತರನ್ನು ಗುಣಪಡಿಸುವ ನಿಟ್ಟಿನಲ್ಲಿ Remdesivir (ರೆಮ್ದೆಸಿವಿರ್) ಪರಿಣಾಮಕಾರಿ ಎಂಬ ಅಂಶ ಅಮೇರಿಕಾದಲ್ಲಿ ನಡೆದ ಪ್ರಯೋಗದಿಂದ ತಿಳಿದುಬಂದಿತ್ತು. ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ ರೆಮ್ದೆಸಿವಿರ್ ಯಶಸ್ವಿಯಾಗಿತ್ತು.

ಈ ಹಿನ್ನಲೆಯಲ್ಲಿ ''ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ರೆಮ್ದೆಸಿವಿರ್ ಪ್ರಭಾವ 'ಕ್ಲಿಯರ್-ಕಟ್' ಆಗಿದೆ'' ಎಂದು ಅಮೇರಿಕಾದ ಪ್ರಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ಕೂಡ ಹೇಳಿದ್ದರು.

ಕೊರೊನಾ ಆತಂಕ ತೊಲಗಿಸಿದ ಔಷಧಿ: ಅಮೇರಿಕಾದಿಂದ ಸಿಹಿ ಸುದ್ದಿ!ಕೊರೊನಾ ಆತಂಕ ತೊಲಗಿಸಿದ ಔಷಧಿ: ಅಮೇರಿಕಾದಿಂದ ಸಿಹಿ ಸುದ್ದಿ!

ಪರಿಣಾಮ, ಇದೀಗ ಇದೇ ರೆಮ್ದೆಸಿವಿರ್ ಔ‍ಷಧಿಯನ್ನು ಕೋವಿಡ್-19 ರೋಗಿಗಳ ತುರ್ತು ಚಿಕಿತ್ಸೆಗೆ ನೀಡುವಂತೆ ಅಮೇರಿಕಾದ ದಿ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್.ಡಿ.ಎ) ಅನುಮತಿ ನೀಡಿದೆ.

ಗ್ರೀನ್ ಸಿಗ್ನಲ್ ಕೊಟ್ಟ ಎಫ್.ಡಿ.ಎ

ಗ್ರೀನ್ ಸಿಗ್ನಲ್ ಕೊಟ್ಟ ಎಫ್.ಡಿ.ಎ

ಕೋವಿಡ್-19 ರೋಗಿಗಳನ್ನು ರೆಮ್ದೆಸಿವಿರ್ ಬಹುಬೇಗ ಗುಣಪಡಿಸುವುದು ಪ್ರಯೋಗದಲ್ಲಿ ಖಾತ್ರಿ ಆದ ಬಳಿಕ, ಅದನ್ನು Emergency use authorisation (EUA) ಅರ್ಥಾತ್ ತುರ್ತು ಚಿಕಿತ್ಸೆ ಸಮಯದಲ್ಲಿ ಬಳಕೆ ಮಾಡುವಂತೆ ಎಫ್.ಡಿ.ಎ ಗ್ರೀನ್ ಸಿಗ್ನಲ್ ನೀಡಿದೆ.

ಸಂತಸ ಪಟ್ಟ ಡೊನಾಲ್ಡ್ ಟ್ರಂಪ್

ಸಂತಸ ಪಟ್ಟ ಡೊನಾಲ್ಡ್ ಟ್ರಂಪ್

''Gilead ಗೆ ಇದೀಗ ಎಫ್.ಡಿ.ಎ ಇಂದ ರೆಮ್ದೆಸಿವಿರ್ ಗಾಗಿ EUA ಸಿಕ್ಕಿದೆ ಎಂಬುದನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ'' ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ ಹೇಳಿದ್ದಾರೆ. ''ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಹೆಜ್ಜೆ'' ಎಂದಿದ್ದಾರೆ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಅಜರ್.

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?

ರೋಗದ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ

ರೋಗದ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ

ತೀವ್ರ ಪರಿಸ್ಥಿತಿಯೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ವಯಸ್ಕರು ಮತ್ತು ಮಕ್ಕಳಿಗೆ ರೆಮ್ದೆಸಿವಿರ್ ಕೊಡಲು ಸಮ್ಮತಿ ನೀಡಲಾಗಿದೆ. EUA ಅನುಸಾರ, ರೋಗದ ತೀವ್ರತೆಯ ಆಧಾರದ ಮೇಲೆ ಐದು ದಿನಗಳ ಮತ್ತು ಹತ್ತು ದಿನಗಳ ಚಿಕಿತ್ಸೆಯ ಅವಧಿಯನ್ನು ಸೂಚಿಸಲಾಗುತ್ತದೆ.

ತಾತ್ಕಾಲಿಕ ಸಮ್ಮತಿ

ತಾತ್ಕಾಲಿಕ ಸಮ್ಮತಿ

''ಈ ಸಮ್ಮತಿ ತಾತ್ಕಾಲಿಕವಾಗಿದ್ದು, ಹೊಸ ಔಷಧಿಯ ಅರ್ಜಿ ಸಲ್ಲಿಕೆ, ವಿಮರ್ಶೆ ಮತ್ತು ಅನುಮೋದನೆ ಪ್ರಕ್ರಿಯೆಯ ಸ್ಥಾನ ಪಡೆಯುವುದಿಲ್ಲ. ಆದರೆ, ತೀವ್ರ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ರೆಮ್ದೆಸಿವಿರ್ ಸಹಕಾರಿಯಾಗುತ್ತದೆ'' ಎಂದು Gilead ಸೈನ್ಸಸ್ ಕಂಪನಿ ತಿಳಿಸಿದೆ.

ಬೇಗ ಚೇತರಿಕೆ

ಬೇಗ ಚೇತರಿಕೆ

''ರೆಮ್ದೆಸಿವಿರ್ ಪ್ರಯೋಗದಿಂದ ಲಭ್ಯವಾಗಿರುವ ಡೇಟಾ ತುಂಬಾ ಉತ್ತೇಜನಕಾರಿಯಾಗಿದೆ. 10 ದಿನಗಳ ಕಾಲ ಚಿಕಿತ್ಸೆ ಪಡೆದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಂತೆ, 5 ದಿನಗಳ ಕಾಲ ರೆಮ್ದೆಸಿವಿರ್ ಡೋಸೇಜ್ ಪಡೆದವರ ಆರೋಗ್ಯದಲ್ಲೂ ಸುಧಾರಣೆ ಕಾಣಿಸಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಅವಶ್ಯಕ'' ಎಂದು ಕ್ಲಿನಿಯಲ್ ಪ್ರೊಫೆಸರ್ ಆಫ್ ಮೆಡಿಸಿನ್ ಅರುಣಾ ಸುಬ್ರಮಣಿಯನ್ ಈ ಹಿಂದೆ ತಿಳಿಸಿದ್ದರು.

ಸಕಾರಾತ್ಮಕ ಪರಿಣಾಮ ಹೊಂದಿದೆ

ಸಕಾರಾತ್ಮಕ ಪರಿಣಾಮ ಹೊಂದಿದೆ

''ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ರೆಮ್ದೆಸಿವಿರ್ ಪ್ರಭಾವ 'ಕ್ಲಿಯರ್-ಕಟ್' ಆಗಿದೆ. ಕೊರೊನಾ ವೈರಸ್ ನಿಂದ ಚೇತರಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡುವಲ್ಲಿ ರೆಮ್ದೆಸಿವಿರ್ ಸ್ಪಷ್ಟವಾದ, ಗಮನಾರ್ಹವಾದ, ಸಕಾರಾತ್ಮಕವಾದ ಪರಿಣಾಮ ಹೊಂದಿರುವುದು ಪ್ರಯೋಗದ ಮೂಲಕ ಗೊತ್ತಾಗಿದೆ. ರೆಮ್ದೆಸಿವಿರ್ ಔಷಧಿ ವೈರಸ್ ಅನ್ನು ನಿರ್ಬಂಧಿಸಿರುವುದು ಪ್ರಯೋಗದಿಂದ ಸಾಬೀತಾಗಿದೆ'' ಎಂದು ಅಮೇರಿಕಾದ ಪ್ರಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ಹೇಳಿದ್ದರು.

English summary
FDA Allows Emergency Use Of Remdesivir To Treat Covid-19 Patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X