ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯನ ಹತ್ಯೆ: ಸುಳಿವು ನೀಡಿದವರಿಗೆ $15000 ಬಹುಮಾನ ಘೋಷಿಸಿದ ಎಫ್‌ಬಿಐ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 17: ಭಾರತ ಮೂಲದ ಪ್ರಜೆ ಪರೇಶ್ ಕುಮಾರ್ ಅವರ ಅಪಹರಣ ಮತ್ತು ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ನೀಡಿದವರಿಗೆ $15,000 (ಸುಮಾರು 11 ಲಕ್ಷ) ಬಹುಮಾನ ನೀಡುವುದಾಗಿ ಅಮರಿಕದ ಎಫ್‌ಬಿಐ ತಿಳಿಸಿದೆ. ಪರೇಶ್ ಕುಮಾರ್ ಪಟೇಲ್ ಅವರನ್ನು 2012ರಲ್ಲಿ ಹತ್ಯೆ ಮಾಡಲಾಗಿತ್ತು.

ಪರೇಶ್ ಕುಮಾರ್ ಅವರನ್ನು ಅವರು ಕೆಲಸ ಮಾಡುತ್ತಿದ್ದ ವರ್ಜೀನಿಯಾದ ಚೆಸ್ಟರ್‌ಫೀಲ್ಸ್‌ನ ರೇಸ್‌ಅವೇ ಗ್ಯಾಸ್ ಸ್ಟೇಷನ್‌ನಿಂದ 2012ರ ಸೆಪ್ಟೆಂಬರ್ 16ರಂದು ಅಪಹರಣ ಮಾಡಲಾಗಿತ್ತು. ನಾಲ್ಕು ದಿನಗಳ ಬಳಿಕ ಅವರ ಮೃತದೇಹ ವರ್ಜೀನಿಯಾದ ರಿಚ್ಮಂಡ್ ನಗರದ ಆಂಕಾರೋ ಬೋಟ್ ಲ್ಯಾಂಡಿಂಗ್‌ನಲ್ಲಿ ಪತ್ತೆಯಾಗಿತ್ತು. ಅವರ ಮೃತದೇಹಕ್ಕೆ ಗುಂಡುಗಳು ಹೊಕ್ಕಿದ್ದವು.

ಹಾಸನ; ಮಗನ ಕೊಲೆಗೆ ಅಪ್ಪನೇ ಕೊಟ್ಟ ಸುಪಾರಿಹಾಸನ; ಮಗನ ಕೊಲೆಗೆ ಅಪ್ಪನೇ ಕೊಟ್ಟ ಸುಪಾರಿ

ತೀವ್ರ ಕಗ್ಗಂಟಾಗಿದ್ದ ಈ ಪ್ರಕರಣವನ್ನು ಭೇದಿಸುವಲ್ಲಿ ರಿಚ್ಮಂಡ್ ಪೊಲೀಸ್ ಇಲಾಖೆ ವಿಫಲವಾಗಿದೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ (ಎಫ್‌ಬಿಐ) ರಿಚ್ಮಂಡ್ ಸೆಂಟ್ರಲ್ ವರ್ಜೀನಿಯಾ ಕ್ರೈಮ್ಸ್ ಟಾಸ್ಕ್ ಫೋರ್ಸ್ ತಂಡವು ರಿಚ್ಮಂಡ್ ಪೊಲೀಸ್ ಇಲಾಖೆ ನೆರವಿನೊಂದಿಗೆ ತನಿಖೆ ನಡೆಸುತ್ತಿದೆ. ಆದರೆ ಇದುವರೆಗೂ ಅದರ ಯಾವುದೇ ಸುಳಿವು ಸಿಕ್ಕಿಲ್ಲ.

FBI Announces $15000 For Information On India Mans Murder Case

ಪರೇಶ್ ಕುಮಾರ್ ಪಟೇಲ್ ಸೆ. 16ರಂದು ಅಂದಾಜು ಬೆಳಿಗ್ಗೆ 6 ಗಂಟೆಗೆ ತಮ್ಮ ಅಂಗಡಿಗೆ ಬಂದಿದ್ದರು. ವಾಹನದಿಂದ ಇಳಿದ ಕೂಡಲೇ ಇಬ್ಬರು ವ್ಯಕ್ತಿಗಳು ಅವರಿಗೆ ಎದುರಾಗಿದ್ದರು ಎಂದು ಚೆಸ್ಟರ್ ಫೀಲ್ಡ್ ಕೌಂಟಿ ಪೊಲೀಸರಿಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾಗಿ ಎಫ್‌ಬಿಐ ತಿಳಿಸಿದೆ.

ರೈನಾ ಸಂಬಂಧಿ ಕೊಲೆ ಕೇಸ್ ಕ್ಲೋಸ್ಡ್: ಪಂಜಾಬ್ ಸಿಎಂರೈನಾ ಸಂಬಂಧಿ ಕೊಲೆ ಕೇಸ್ ಕ್ಲೋಸ್ಡ್: ಪಂಜಾಬ್ ಸಿಎಂ

ಮಾರುವೇಷದಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಪರೇಶ್ ಅವರನ್ನು ವ್ಯಾನ್ ಒಂದಕ್ಕೆ ತಳ್ಳಿ ಅವರನ್ನು ಅಪಹರಿಸಿದ್ದರು. ನಾಲ್ಕು ದಿನಗಳ ಬಳಿಕ ಅವರ ಮೃತದೇಹ ಪತ್ತೆಯಾಗಿತ್ತು.

English summary
FBI has announced $15,000 rewards to anyone giving information redarding the kidnap and murder case of Indian national Pareshkumar Patel in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X