ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ ಅಪ್ಪನ ಅಂಗಿಯಲ್ಲೇ ಪ್ರಾಣ ಬಿಟ್ಟ ಕಂದ, ಕರುಳು ಹಿಂಡುವ ಆ ಚಿತ್ರ

|
Google Oneindia Kannada News

ವಾಷಿಂಗ್ಟನ್, ಜೂನ್ 27: ಮೃತ ತಂದೆಯ ಅಂಗಿಯೊಳಗೆ ಪುಟ್ಟ ಮಗುವೊಂದು ಪ್ರಾಣಬಿಟ್ಟ ಕರುಳು ಹಿಂಡುವ ಘಟನೆಯ ಚಿತ್ರವೊಂದು ಇಡಿ ವಿಶ್ವದ ಗಮನ ಸೆಳೆದಿದೆ. ಅಮೆರಿಕದ ಕಠಿಣ ವಲಸೆ ನೀತಿಯ ಸಾಕ್ಷ್ಯವಾಗಿ ಈ ಚಿತ್ರ ಸುದ್ದಿಯಾಗಿದೆ.

ಅಪ್ಪ ಅಂದ್ರೆ ಆ ಮಗುವಿಗೆ ಅಚ್ಚುಮೆಚ್ಚು, ಅಪ್ಪಂಗೂ ಅಷ್ಟೇ ಮಗಳಂದ್ರೆ ಪ್ರಾಣ. ಒಂದರೆಕ್ಷಣ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದ ಅಪ್ಪ ಮತ್ತು ಮುದ್ದು ಮಗಳು ಹಾಗೆ ಒಂದಾಗಿಯೇ ಸಾವನ್ನೂ ಕಂಡ ದಾರುಣ ಕತೆ ಇದು.

ಮೆಕ್ಸಿಕೋ ಗಡಿಯ ಮೂಲಕ ತಂದೆ ಮತ್ತು ಮಗಳು ಅಮೆರಿಕಕ್ಕೆ ವಲಸೆ ಬರುತ್ತಿದ್ದ ಸಂದರ್ಭದಲ್ಲಿ ಬ್ರೌನ್ ವಿಲ್ಲೆ ನದಿಯಲ್ಲಿ ಈಜಿ ಬರುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಎಲ್ ಸಾಲ್ವಿಡಾರ್ ನಿಂದ ಡಲ್ಲಾಸ್ ನಲ್ಲಿ ಬದುಕು ಕಂಡುಕೊಳ್ಳಲು ಹೊರಟಿದ್ದ ಆಸ್ಕರ್ ಆಲ್ಬರ್ಟೊ ಮಾರ್ಟಿನೆಜ್ ರಮಿರೆಜ್ ತಮ್ಮ ಪುತ್ರಿ ವೆಲೇರಿಯಾ ಜೊತೆ ಪತ್ನಿಗಾಗಿ ಕಾಯುತ್ತ ನಿಂತಿದ್ದರು. ಈ ಸಂದರ್ಭದಲ್ಲಿ ಅವರ ಮಗಳು ವೆಲೇರಿಯಾ ನೀರಿಗೆ ಬಿದ್ದಳು. ಆಕೆಯನ್ನು ರಕ್ಷಿಸಲು ಹೊರಟ ಆಸ್ಕರ್ ತಮ್ಮ ಶರ್ಟಿನ ಹಿಂಬದಿಯಲ್ಲಿ ಆಕೆಯನ್ನು ತೂರಿಸಿಕೊಂಡು ಈಜಿದರೂ, ನದಿಯ ಸೆಳೆತದಿಂದಾಗಿ ಅಸುನೀಗಿದರು.

ಅಮೆರಿಕದೊಳಗೆ ಭಾರತೀಯ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದು ಹೇಗೆ ಗೊತ್ತೇ?ಅಮೆರಿಕದೊಳಗೆ ಭಾರತೀಯ ವಲಸಿಗರು ಅಕ್ರಮವಾಗಿ ಪ್ರವೇಶಿಸುವುದು ಹೇಗೆ ಗೊತ್ತೇ?

ತಂದೆ ಮಗುವನ್ನು ಶರ್ಟಿನ ಒಳಗಿನಿಂದ, ತಮ್ಮ ಬೆನ್ನಿನ ಮೇಲೆ ಆತುಕೊಳ್ಳುವಂತೆ ಕೂರಿಸಿಕೊಂಡು ಈಜಿದ್ದಾರೆ. ಆದರೆ ನೀರಿನಲ್ಲಿ ಮುಳುಗಿ ಇಬ್ಬರೂ ಮೃತರಾಗಿದ್ದಾರೆ. ಅವರ ಮೃತದೇಹ ಜೂನ್ 24 ರಂದು ಮೆಕ್ಸಿಕೋದ ಮತಮೊರೋಸ್ ನ ರಿಯೋ ಗ್ರಾಂಡ್ ನದಿ ತಟದಲ್ಲಿ ದೊರಕಿದೆ.

ಚಿತ್ರ ಕ್ಲಿಕ್ಕಿಸಿದ್ದು ಜುಲಿಯಾ ಲೆ ಡ್ಯೂಕ್

ಚಿತ್ರ ಕ್ಲಿಕ್ಕಿಸಿದ್ದು ಜುಲಿಯಾ ಲೆ ಡ್ಯೂಕ್

ಈ ಚಿತ್ರವನ್ನು ಜುಲಿಯಾ ಲೆ ಡ್ಯೂಕ್ ಎಂಬುವವರು ಕ್ಲಿಕ್ಕಿಸಿದ್ದು, ಮೆಕ್ಸಿಕನ್ ಪತ್ರಿಕೆ ಲಾ ಜೊರ್ನಾಡಾ ಇದನ್ನು ಪ್ರಕಟಿಸಿತ್ತು. ಅಸೋಸಿಯೇಟೆಡ್ ಪ್ರೆಸ್ ಈ ಚಿತ್ರದ ಹಕ್ಕನ್ನು ಪಡೆದಿದೆ. ಈ ಚಿತ್ರ ಮನಸ್ಸನ್ನು ಹಿಂಡುತ್ತಿದ್ದು, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಬಹುಶಃ ಆ ಮಗುವಿನ ತಂದೆ ಬಹಳ ಒಳ್ಳೆಯವನಿರಬೇಕು ಎಂದು ಅವರು ಮರುಕ ವ್ಯಕ್ತಪಡಿಸಿದ್ದಾರೆ.

ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ನಿರ್ಧಾರ

ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ನಿರ್ಧಾರ

ಅಮೆರಿಕಕ್ಕೆ ವಲಸೆ ಬರುವ ಪೋಷಕರನ್ನು ಮಕ್ಕಳಿಂದ ಬೇರ್ಪಡಿಸುವ ಮೂಲಕ ಶಿಕ್ಷೆ ನೀಡಬೇಕು ಎಂದು ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಆದರೆ ಅವರ ಈ ನಿರ್ಧಾರಕ್ಕೆ ಇಡೀ ವಿಶ್ವದಲ್ಲೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಅವರು ಹಿಂತೆಗೆದುಕೊಂಡಿದ್ದರು.

ಅಮೆರಿಕದ ಮರುಭೂಮಿಯಲ್ಲಿ ಭಾರತದ ಬಾಲಕಿಯ ಜೀವ ಸುಟ್ಟ ಬಿಸಿಲುಅಮೆರಿಕದ ಮರುಭೂಮಿಯಲ್ಲಿ ಭಾರತದ ಬಾಲಕಿಯ ಜೀವ ಸುಟ್ಟ ಬಿಸಿಲು

ಸಾಯುವವರೇ ಹೆಚ್ಚು!

ಸಾಯುವವರೇ ಹೆಚ್ಚು!

ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಬಗ್ಗೆ ಈಗಾಗಲೇ ಅಮೆರಿಕ ನಿರ್ಧಾ ತೆಗೆದುಕೊಂಡಿದ್ದು, ಅಮೆರಿಕದಲ್ಲಿ ಆಶ್ರಯ ಪಡೆಯುವ ಉದ್ದೇಶದಿಂದ ಕಾಯುತ್ತಿರುವ ಹಲವರು ಬೇರೆ ದಾರಿ ಕಾಣದೆ ಅಕ್ರಮವಾಗಿ ಈ ದೇಶವನ್ನು ಪ್ರವೇಶಿಸುತ್ತಿದ್ದಾರೆ. ಆಫ್ರಿಕಾ ಮತ್ತು ಏಷ್ಯಾದಿಂದ ಸಾವಿರಾರು ವಲಸಿಗರು ಮಾನವ ಕಳ್ಳಸಾಗಣೆದಾರರ ನೆರವಿನಿಂದ ಮೆಕ್ಸಿಕೋ ಮೂಲಕ ಅಮೆರಿಕ ಪ್ರವೇಶಿಸುತ್ತಿದ್ದಾರೆ. ಆದರೆ ಹಾಗೆ ಪ್ರವೇಶಿಸಲು ಹೊರಟವರಲ್ಲಿ ಒಂದೋ ಮರುಭೂಮಿಯ ಬಿಸಿಲಲ್ಲಿ ಸಿಕ್ಕು, ಅಥವಾ ನದಿಯಲ್ಲಿ ಈಜಲಾಗದ ಮುಳುಗಿ ಸಾಯುವವರೇ ಹೆಚ್ಚಾಗಿದ್ದಾರೆ

283 ಜನರ ಸಾವು

283 ಜನರ ಸಾವು

ಕಳೆದ ಒಂದು ವರ್ಷದಲ್ಲಿ ಈ ಭಾಗದಲ್ಲಿ ವಲಸೆಗೆಂದು ಬರುವ 283 ಜನರು ಸಾವಿಗೀಡಾಗಿದ್ದಾರೆ. 2000 ಮೈಲಿಯ ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಸುಟ್ಟು ಹಾಕುವಂಥ ಬಿಸಿಲೂ ಇದೆ, ಪ್ರವಾಹ ಎಬ್ಬಿಸುವಂಥ ರಿಯೋ ಗ್ರಾಂಡ್ ನದಿಯೂ ಇದೆ. ಈ ಎರಡರ ಮೂಲಕವೇ ಅಮೆರಿಕಕ್ಕೆ ಬರಬೇಕು. ಈ ಸಂದರ್ಭದಲ್ಲಿ ಬದುಕಿ ಬಂದವರಿಗಿಂತ ನಡುವಲ್ಲಿ ಸತ್ತವರೇ ಹೆಚ್ಚು. ಇತ್ತೀಚೆಗಷ್ಟೇ ಇಲ್ಲಿನ ಅರಿಜೋನಾ ಮರುಭೂಮಿಯಲ್ಲಿ ಭಾರತೀಯ ಮೂಲತ ಗುರುಪ್ರೀತ್ ಕೌರ್ ಎಂಬ ಆರು ವರ್ಷದ ಬಾಲಕಿ ಮೃತಳಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Father and daughter who was migrating to US died in a river, picture becomes viral,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X