India
 • search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದೃಷ್ಟದ ವ್ಯಕ್ತಿ: ಹಾಲು ಕೊಳ್ಳುವ ವಿಚಾರದಲ್ಲಿ ಬದಲಾದ ವ್ಯಕ್ತಿಯ ಹಣೆಬರಹ

|
Google Oneindia Kannada News

ಚೆಸ್ಟರ್ ಕೌಂಟಿ, ಮೇ 30: ಅದೃಷ್ಟಕ್ಕಿಂತ ದೊಡ್ಡದು ಯಾವುದೂ ಇಲ್ಲ. ಇದು ಯಾವುದೇ ಸಮಯದಲ್ಲಿ ರಸ್ತೆಯಿಂದ ವ್ಯಕ್ತಿಯನ್ನು ಎತ್ತಿಕೊಂಡು ಅರಮನೆಗಳಿಗೆ ಕೊಂಡೊಯ್ಯಬಹುದು. ಇದೀಗ ಅಮೆರಿಕದಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ವ್ಯಕ್ತಿ ಹಾಲು ತರಲು ಹೋಗಿದ್ದ, ಆಗ ಅವನ ಅದೃಷ್ಟ ಬದಲಾಗಿ ಹೋಗಿದೆ ಮತ್ತು ಅವನು 15 ಕೋಟಿ ಆಸ್ತಿಗೆ ಒಡೆಯನಾಗಿದ್ದಾನೆ. ಇದರಿಂದ ಆತ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದ್ದಾನೆ.

ಭಾರತದಲ್ಲಿ ಅನೇಕ ರಾಜ್ಯಗಳಲ್ಲಿ ಲಾಟರಿ, ದುಡ್ಡು ಕೊಟ್ಟು ಆಡುವ ಆನ್ ಲೈನ್ ಗೇಮ್ಸ್ ಮೇಲೆ ನಿಷೇಧ ಹೇರಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಲಾಟರಿಯನ್ನು ನಿಷೇಧಿಸಿದ್ದರೂ ಕೇರಳ ಸರ್ಕಾರ ಲಾಟರಿಯನ್ನು ನಿಷೇಧಿಸಿಲ್ಲ. ಭಾರತದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಲಾಟರಿ ಮಾರಾಟಕ್ಕೆ ಅನುಮತಿ ಇದ್ದರೂ, ಇಡೀ ದೇಶದ ಗಮನ ಸೆಳೆಯುಯುವುದು ಕೇರಳ ರಾಜ್ಯದ 'ತಿರುವೋಣಂ ಬಂಪರ್' ಲಾಟರಿ. 2021ರಲ್ಲಿ 'ತಿರುವೋಣಂ ಬಂಪರ್' ಲಾಟರಿ ಮತ್ತೊಮ್ಮೆ ಸುದ್ದಿಯಾಗಿತ್ತು.

ಅಮೆರಿಕದ ಚೆಸ್ಟರ್ ಕೌಂಟಿಯ ವ್ಯಕ್ತಿಗೆ ಅದೃಷ್ಟ ಒಲಿದಂತೆ ಕಳೆದ ವರ್ಷ ಕೇರಳದ ಆಟೋ ಡ್ರೈವರ್ ಅದೃಷ್ಟಶಾಲಿ ಆಗಿದ್ದು, ರಾತ್ರೋ ರಾತ್ರಿ ಬಡ ವ್ಯಕ್ತಿ ಕೋಟ್ಯಾಧಿಪತಿ ಆಗಿದ್ದ. 12 ಕೋಟಿ ರೂಪಾಯಿ ಮುಖಬೆಲೆಯ ತಿರುವೋಣಂ ಬಂಪರ್ ಲಾಟರಿಯನ್ನು ಎರ್ನಾಕುಲಂ ಮೂಲದ ಜಯಪಾಲನ್ ಗೆದ್ದಿದ್ದ. ತೆರಿಗೆ ಎಲ್ಲಾ ಕಳೆದು ಸುಮಾರು 7.4 ಕೋಟಿ ರೂಪಾಯಿ ಜಯಪಾಲನ್‌ಗೆ ಸಿಕ್ಕಿತ್ತು.

ಒಂದೇ ದಿನದಲ್ಲಿ ಲಕ್ಷಾದಿಪತಿಯಾಗಬೇಕು ಎನ್ನುವ ಆಸೆಯಿಂದ ಹಲವಾರು ಜನ ನಾನಾ ಕಸರತ್ತು ಮಾಡುತ್ತಾರೆ. ನಾನಾ ಹುದ್ದೆ ವ್ಯವಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡುವವರು ನಮ್ಮಲ್ಲಿ ಅಧಿಕ ಜನರಿದ್ದಾರೆ. ಆದರೆ ಅದೆಕ್ಕೆಲ್ಲ ಅದೃಷ್ಟ ಒಂದು ಇದ್ದರೆ ಸುಮ್ನೆ ಕೂತಲ್ಲೇ ಲಕ್ಷ್ಮಿ ತಾನಾಗೆ ಒಲಿಯುತ್ತಾಳೆ ಅನ್ನೋದಕ್ಕೆ ಇಲ್ಲೊಂದು ನಿದರ್ಶನವಿದೆ. ವ್ಯಕ್ತಿಯೊಬ್ಬನಿಗೆ ಇಂತಹ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ.

ಲಾಟರಿ ಟಿಕೆಟ್ ಖರೀದಿ

ಲಾಟರಿ ಟಿಕೆಟ್ ಖರೀದಿ

ಮಾಧ್ಯಮ ವರದಿಗಳ ಪ್ರಕಾರ, ಒಬ್ಬ ವ್ಯಕ್ತಿ ಅಮೆರಿಕಾದ ಚೆಸ್ಟರ್ ಕೌಂಟಿಯಲ್ಲಿ ವಾಸಿಸುತ್ತಿದ್ದರು. ಇತ್ತೀಚಿಗೆ ಬೆಳಗ್ಗೆ ಎದ್ದು ಕಾಫಿ ಮಾಡಲು ಹೋಗಿದ್ದರು. ಅಡುಗೆ ಮನೆಗೆ ಹೋದಾಗ ಹಾಲು ಇಲ್ಲ ಎಂದು ತಿಳಿದು ಸಮೀಪದ ಅಂಗಡಿಗೆ ಹೋದರು. ಹಾಲು ತೆಗೆದುಕೊಂಡ ನಂತರ ಅವನ ಕಣ್ಣು ಅಲ್ಲಿ ಮಾರಾಟವಾಗುತ್ತಿದ್ದ ಲಾಟರಿ ಟಿಕೆಟ್ ಮೇಲೆ ಬಿದ್ದಿದೆ. ಸ್ವಲ್ಪ ಹೊತ್ತು ಯೋಚಿಸಿದ ನಂತರ ಲಾಟರಿ ಟಿಕೆಟ್ ಖರೀದಿಸಲು ನಿರ್ಧರಿಸಿದರು, ಆದರೆ ನಂತರ ನಡೆದ ಘಟನೆ ಅವರ ಅದೃಷ್ಟವನ್ನು ಬದಲಾಯಿಸಿದೆ.

ಎರಡನೇ ದಿನದಲ್ಲಿ ಲಕ್ಷಾಧಿಪತಿಯಾದ

ಎರಡನೇ ದಿನದಲ್ಲಿ ಲಕ್ಷಾಧಿಪತಿಯಾದ

ಮರುದಿನ ಎಚ್ಚರಗೊಂಡ ವ್ಯಕ್ತಿಗೆ ಲಾಟರಿ ಫಲಿತಾಂಶ ಬಂದಿರುವುದು ಕಂಡಿದೆ. ಅವನು ತನ್ನ ಚೀಟಿಯನ್ನು ತೆಗೆದುಕೊಂಡು ಅದನ್ನು ಲಕ್ಕಿ ಡ್ರಾ ಸಂಖ್ಯೆಯೊಂದಿಗೆ ಹೊಂದಿಸಿದ್ದಾನೆ. ಬಳಿಕ ಆತ ಆಶ್ಚರ್ಯಗೊಂಡಿದ್ದಾನೆ. ಲಾಟರಿ ಟಿಕೆಟ್‌ನಲ್ಲಿ ಅವರು ಒಂದು ಮಿಲಿಯನ್ ಡಾಲರ್ ಪೂರ್ಣ ಲಾಟರಿ ಪಡೆದಿದ್ದರು. ಅವರು ಟಿಕೆಟ್ ತೆಗೆದುಕೊಳ್ಳುವ ಸಮಯದಲ್ಲಿ ಪವರ್‌ಪ್ಲೇ ಅನ್ನು ಆರಿಸಿಕೊಂಡಿದ್ದರು. ಇದರಿಂದ ಅವರು $2 ಮಿಲಿಯನ್‌ ಗೆದ್ದಿದ್ದಾರೆ. ಭಾರತದ ಕರೆನ್ಸಿ ಪ್ರಕಾರ ಇದರ ಬೆಲೆ 15 ಕೋಟಿ ರೂಪಾಯಿ ಆಗಿದೆ.

ಗಾಬರಿಗೊಂಡ ವ್ಯಕ್ತಿ

ಗಾಬರಿಗೊಂಡ ವ್ಯಕ್ತಿ

ಸೌತ್ ಕೆರೊಲಿನಾ ಎಜುಕೇಶನ್ ಲಾಟರಿ ಅಧಿಕಾರಿಗಳೊಂದಿಗೆ ಮಾತನಾಡುತ್ತಾ, ಆ ವ್ಯಕ್ತಿ ನಾನು ಆ ಸಮಯದಲ್ಲಿ ನರ್ವಸ್ ಆಗಿದ್ದೆ ಎಂದು ಹೇಳಿದರು. ನಾನು ಇಷ್ಟು ದೊಡ್ಡ ಮೊತ್ತವನ್ನು ಗೆದ್ದಿದ್ದೇನೆ ಎಂದು ನಂಬಲಾಗಲಿಲ್ಲ. ಲಾಟರಿ ಅಧಿಕಾರಿಗಳ ಪ್ರಕಾರ ಇಷ್ಟು ದೊಡ್ಡ ಮೊತ್ತವನ್ನು ಗೆದ್ದಿರುವ ವ್ಯಕ್ತಿಗೆ ಭದ್ರತೆ ನೀಡುವ ದೃಷ್ಟಿಯಿಂದ ಲಾಟರಿ ಅಧಿಕಾರಿಗಳು ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ.

  RCB ಡ್ರೆಸ್ಸಿಂಗ್ ರೂಮ್ ನಲ್ಲಿ ಕೊನೇ ಕ್ಷಣ ಕಳೆದ ದಿನೇಶ್ ಕಾರ್ತಿಕ್‌ ಭಾವುಕರಾಗಿ ಹೇಳಿದ್ದೇನು? | OneIndia Kannada
  ಹಣವಿಲ್ಲದೆ ಲಾಟರಿ ಟಿಕೆಟ್ ಖರೀದಿ

  ಹಣವಿಲ್ಲದೆ ಲಾಟರಿ ಟಿಕೆಟ್ ಖರೀದಿ

  ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ಒಬ್ಬ ವ್ಯಕ್ತಿ ಅಂಗಡಿಗೆ ಹೋದನು ಮತ್ತು ಅಂಗಡಿಯವನು ಅವನಿಗೆ ಲಾಟರಿ ಟಿಕೆಟ್ ನೀಡಿದನು. ವ್ಯಕ್ತಿಯ ಬಳಿ ಹಣವಿಲ್ಲ, ಈ ಕಾರಣದಿಂದ ನಂತರ ಕೊಡುವಂತೆ ಕೇಳಲಾಗಿತ್ತು. ಕೆಲವು ದಿನಗಳ ನಂತರ, ವ್ಯಕ್ತಿಗೆ $ 1.5 ಲಕ್ಷ ಲಾಟರಿ ಹೊಡೆದಿತ್ತು. ಅವರು ಯಾವುದೇ ಟಿಕೆಟ್ ಪಾವತಿಸದೆ ಮಿಲಿಯನೇರ್ ಆಗಿದ್ದಾರೆ ಎಂದು ಕಂಡುಬಂದಿದೆ.

  English summary
  A man won 15 crore when he went to get up in the morning and bought a milk and lottery ticket living in Chester County America.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X