ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಡ್ಕಾದಿಂದ ಕೊರೊನಾ ದೂರ, ಆಸ್ಪತ್ರೆ ಪತ್ರದ ಸತ್ಯಾಸತ್ಯತೆ

|
Google Oneindia Kannada News

ವಾಷಿಂಗ್ಟನ್, ಜುಲೈ 16: ಯುಎಸ್ಎ ಜನಪ್ರಿಯ ಆಸ್ಪತ್ರೆಯ ಪತ್ರ ಮತ್ತೊಮ್ಮೆ ವೈರಲ್ ಆಗುತ್ತಿದೆ. ಆಲ್ಕೋಹಾಲ್ ಸೇವನೆಯಿಂದ ಕೊರೊನಾವೈರಸ್ ದೂರಾಗಿಸಬಹುದು ಎಂಬ ಗಾಳಿಸುದ್ದಿ ಮತ್ತೆ ಬಲವಾಗಿ ಬೀಸಿದೆ. ಈ ಬಾರಿ ವೋಡ್ಕಾ ಕುಡಿದರೆ ಕೊರೊನಾ ಬರದಂತೆ ತಡೆಯಬಹುದು ಎಂದು ಹೇಳಲಾಗುತ್ತಿದೆ.

Recommended Video

Jio 5G, Jio tv+, Jio AR glasses and much more | Oneindia Kannada

ಸೈಂಟ್ ಲೂಕ್ಸ್ ಯುಎಸ್ ಆಸ್ಪತ್ರೆಯದ್ದು ಎನ್ನಲಾದ ಪತ್ರದಲ್ಲಿ ಈ ರೀತಿ ವೋಡ್ಕಾ ಸೇವನೆ ಬಗ್ಗೆ ಬರೆಯಲಾಗಿದೆ. ಮಾರ್ಚ್ ತಿಂಗಳಿನಲ್ಲೂ ಇದೇ ರೀತಿ ಒಂದು ಪತ್ರ ಸಾಮಾಜಿಕ ಜಾಲದಲ್ಲಿ ಹರಿದಾಡಿತ್ತು. ಆದರೆ, ಈ ರೀತಿ ಯಾವುದೇ ಪತ್ರವನ್ನು ಪ್ರಕಟಿಸಿಲ್ಲ ಎಂದು ಆಸ್ಪತ್ರೆ ಸ್ಪಷ್ಟಪಡಿಸಿತ್ತು.

Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?Fact Check: ನಿರಂತರ ನೀರು ಕುಡಿದ್ರೆ, ಕೊರೊನಾವೈರಸ್ ಸೂಸೈಡ್?

ಕೊವಿಡ್ 19 ಸೋಂಕು ತಗುಲದಂತೆ ಮಾಡಲು ಆಲ್ಕೋಹಾಲ್ ಸೇವಿಸಿ ಎಂಬ ವರದಿಯನ್ನು ಸೈಂಟ್ ಲೂಕ್ಸ್ ನೀಡಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಸಿಡಿಸಿ ಮಾರ್ಗ ಸೂಚನೆಯಂತೆ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ, ಇಂಥ ಯಾವುದೇ ಪತ್ರ ಬಂದರೂ ನಂಬಬೇಡಿ ಎಂದು ಆಸ್ಪತ್ರೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Fact check: Does Vodka prevent COVID-19

ಇನ್ನೊಂದೆಡೆ, ಆಲ್ಕೋಹಾಲ್ ಸೇವನೆ ಬಗ್ಗೆ ಹೇಳುವುದಾದರೆ, ಪ್ರತಿರೋಧಕ ಶಕ್ತಿ ತಗ್ಗಿಸುವುದಲ್ಲದೆ, ಶ್ವಾಸಕೋಶ ಸೋಂಕು ಹೆಚ್ಚಳಕ್ಕೆ ಕಾರಣಾಗುತ್ತದೆ. ಜೊತೆಗೆ ಶ್ವಾಸಕೋಶದಲ್ಲಿನ ಬಿಳಿ ರಕ್ತಕಣಗಳನ್ನು ಇಳಿಕೆ ಮಾಡುವುದರಿಂದ ಮ್ಯಾಕ್ರೋಫಾಗೆಸ್ ರಕ್ತಕಣವು ವೈರಲ್ ಸೋಂಕು ಪತ್ತೆ ಹಚ್ಚುವ ಗುಣವನ್ನು ಕಳೆದುಕೊಳ್ಳುತ್ತದೆ.

Fact Check: ಬಿಸಿ ನೀರಿನ ಹಬೆಗೆ ವೈರಾಣು ಬೆದರಿ ಹೋಗುತ್ತಾ?Fact Check: ಬಿಸಿ ನೀರಿನ ಹಬೆಗೆ ವೈರಾಣು ಬೆದರಿ ಹೋಗುತ್ತಾ?

ಆಲ್ಕೋಹಾಲ್ ಬಳಕೆಯನ್ನು ಹ್ಯಾಂಡ್ ಸ್ಯಾನಿಟೈಸರ್ ಬಳಕೆಯಲ್ಲಿ ಮಾತ್ರ ಉಪಯೋಗಿಸಲು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಳ್ (ಸಿಡಿಸಿ) ಶಿಫಾರಸು ಮಾಡಿದೆ. ಕೊವಿಡ್ 19 ತಡೆಗಟ್ಟಲು ಆರೋಗ್ಯ ಇಲಾಖೆಗಳ ಮಾರ್ಗ ಸೂಚಿಯಂತೆ ಸ್ಯಾನಿಟೈಸರ್, ಸೋಪು ಬಳಕೆ 20 ಸೆಕೆಂಡುಗಳ ಕಾಲ ನೀರಿನಲ್ಲಿ ಕೈ ತೊಳೆಯಲು ಸೂಚನೆ ನೀಡಲಾಗಿದೆ.

English summary
A letter from a famous US hospital, St Lukes has re-surfaced again, claiming that drinking alcohol, especially Vodka can help reduce the risk of getting COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X