ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ಒಂದು ಫ್ಲೂ ಅಷ್ಟೇ': ಡೊನಾಲ್ಡ್ ಟ್ರಂಪ್ ಪೋಸ್ಟ್ ಕಿತ್ತುಹಾಕಿದ ಫೇಸ್‌ಬುಕ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 7: ಕೊರೊನಾ ವೈರಸ್ ಕುರಿತು ತಪ್ಪು ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೋಸ್ಟ್‌ಅನ್ನು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳು ಅವರ ಖಾತೆಯಿಂದ ಕಿತ್ತುಹಾಕಿವೆ.

ಕೋವಿಡ್ 19 ಕೇವಲ ಒಂದು ಫ್ಲೂ ಅಷ್ಟೇ ಎನ್ನುವ ಮೂಲಕ ಕೊರೊನಾ ವೈರಸ್ ಬಗ್ಗೆ ತಪ್ಪು ಮಾಹಿತಿ ನೀಡಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಈ ಕ್ರಮ ಕೈಗೊಂಡಿವೆ. ಆದರೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅಳಿಸಿ ಹಾಕುವ ಮುನ್ನ ಅದನ್ನು 26,000ಕ್ಕೂ ಅಧಿಕ ಸಲ ಶೇರ್ ಮಾಡಲಾಗಿತ್ತು ಎಂದು ಫೇಸ್ ಬುಕ್ ಕಂಪೆನಿಯ ಕ್ರೌಡ್ ಟ್ಯಾಂಗಲ್ ಮಾಹಿತಿ ನೀಡಿದೆ.

ಡೊನಾಲ್ಡ್ ಟ್ರಂಪ್ ಡಿಸ್ಚಾರ್ಜ್; ಮಾಸ್ಕ್ ಇಲ್ಲದೆ ಸಂಚಾರ!ಡೊನಾಲ್ಡ್ ಟ್ರಂಪ್ ಡಿಸ್ಚಾರ್ಜ್; ಮಾಸ್ಕ್ ಇಲ್ಲದೆ ಸಂಚಾರ!

ಕೋವಿಡ್ 19ರ ತೀವ್ರತೆಯ ಬಗ್ಗೆ ಸರಿಯಲ್ಲದ ಮಾಹಿತಿ ನೀಡಿದ್ದ ಪೋಸ್ಟ್ಅನ್ನು ನಾವು ತೆಗೆದುಹಾಕಿದ್ದೇವೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

Facebook, Twitter Action Over US President Donald Trumps Misleading Covid-19 Posts

ಟ್ವಿಟ್ಟರ್ ಕೂಡ ಟ್ರಂಪ್ ಅವರ ಪೋಸ್ಟ್‌ ಮೇಲೆ ಕ್ರಮ ತೆಗೆದುಕೊಂಡಿದೆ. ಟ್ರಂಪ್ ಮಾಡಿದ್ದ ಟ್ವೀಟ್ಅನ್ನು ರೀಟ್ವೀಟ್ ಮಾಡುವ ಆಯ್ಕೆಯನ್ನು ನಿರ್ಬಂಧಿಸಿರುವ ಟ್ವಿಟ್ಟರ್, 'ಈ ಟ್ವೀಟ್ ಕೋವಿಡ್ 19ರ ಕುರಿತು ತಪ್ಪುದಾರಿಗೆ ಎಳೆಯುವ ಮತ್ತು ತೀವ್ರ ಹಾನಿಕಾರಕ ಮಾಹಿತಿಗಳನ್ನು ಹರಡುವ ವಿರುದ್ಧದ ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದೆ' ಎಂದು ತಿಳಿಸಿದೆ.

ಅಭಿಮಾನಿಗಳಿಗೆ ಧನ್ಯವಾದ ಹೇಳದೆ ಒರಟ ಎನಿಸಿಕೊಳ್ಳಬೇಕಿತ್ತೆ?: ಟ್ರಂಪ್ಅಭಿಮಾನಿಗಳಿಗೆ ಧನ್ಯವಾದ ಹೇಳದೆ ಒರಟ ಎನಿಸಿಕೊಳ್ಳಬೇಕಿತ್ತೆ?: ಟ್ರಂಪ್

Recommended Video

Gayle ಈಗಲೂ RCB ಗೆ ಸೇರಬಹುದು | Oneindia Kannada

'ಫ್ಲೂ ಸಮಯ ಮತ್ತೆ ಬರುತ್ತಿದೆ. ಲಸಿಕೆ ಇದ್ದರೂ ಪ್ರತಿ ವರ್ಷ, ಕೆಲವೊಮ್ಮೆ 1,00,000ಕ್ಕೂ ಅಧಿಕ ಜನರು ಫ್ಲೂದಿಂದ ಸಾಯುತ್ತಿದ್ದಾರೆ. ನಾವು ನಮ್ಮ ದೇಶವನ್ನು ಮುಚ್ಚಲು ಹೋಗುತ್ತೇವೆಯೇ? ಇಲ್ಲ. ನಾವು ಅದರೊಂದಿಗೆ ಬದುಕುವುದನ್ನು ಕಲಿತಿದ್ದೇವೆ. ಅದೇ ರೀತಿ ನಾವು ಕೋವಿಡ್ ಜತೆಗೂ ಬದುಕುವುದನ್ನು ಕಲಿಯುತ್ತಿದ್ದೇವೆ. ಇದು ಜನಸಂಖ್ಯೆಗೆ ಅಷ್ಟೇನೂ ಮಾರಕವಲ್ಲ' ಎಂದು ಟ್ರಂಪ್ ಹೇಳಿದ್ದರು.

English summary
Facebook and Twitter took action on posts from US President Donald Trump for violating their rules against Covid-19, calling it was just like the flu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X