• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರತಿದಿನ 3 ಲಕ್ಷ ಕೊರೊನಾ ಕೇಸ್, ಯಾವ ದೇಶಕ್ಕೆ ಆಪತ್ತು ಗೊತ್ತಾ..?

|

ಅಮೆರಿಕ ಕೊರೊನಾ ಸುಳಿಯಲ್ಲಿ ಸಿಲುಕಿ ಪತರುಗುಟ್ಟಿರುವುದು ಗೊತ್ತಿರುವ ವಿಚಾರ. ಆದರೆ ಈಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಅಮೆರಿಕದ ಜನರಿಗೆ ತಜ್ಞರು ದೊಡ್ಡ ವಾರ್ನಿಂಗ್ ಕೊಟ್ಟಿದ್ದಾರೆ. ಬ್ರಿಟನ್‌ನಲ್ಲಿ ಪತ್ತೆ ಹಚ್ಚಲಾಗಿದ್ದ ಕೊರೊನಾ ಕುಲಾಂತರಿ ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಹರಡಲಿದೆ ಎಂದು ಎಚ್ಚರಿಸಲಾಗಿದೆ. ಈಗಾಗಲೇ ಅಮೆರಿಕದಲ್ಲಿ ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಕನ್ಫರ್ಮ್ ಆಗುತ್ತಿವೆ.

ಆದರೆ ಇದಕ್ಕಿಂತಲೂ ಕೆಟ್ಟ ದಿನಗಳು ಮುಂದೆ ಇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ತಜ್ಞರು. ನಿತ್ಯದ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ. ಅಮೆರಿಕದ ರೋಗ ನಿಯಂತ್ರಣ ಇಲಾಖೆ ಇಂತಹ ಎಚ್ಚರಿಕೆ ರವಾನಿಸಿದ್ದು, ಬೈಡನ್‌ಗೆ ಅಧಿಕಾರ ಪಡೆಯುವುದಕ್ಕೆ ಮೊದಲೇ ಶಾಕ್ ಸಿಕ್ಕಿದೆ.

ಅಮೆರಿಕ ಕೊರೊನಾ: ಅತ್ತ ಸೋಂಕಿತರ ಸಾವು, ಇತ್ತ ಪ್ರಜಾಪ್ರಭುತ್ವಕ್ಕೆ ಕಂಟಕ..!

ಈಗಾಗಲೇ ಬೈಡನ್ 10 ಕೋಟಿ ಜನರಿಗೆ ವ್ಯಾಕ್ಸಿನ್ ವಿತರಿಸಲು ಸಜ್ಜಾಗಿದ್ದಾರೆ. ತಮ್ಮ 100 ದಿನಗಳ ಆಡಳಿತದ ಒಳಗಾಗಿ 100 ಮಿಲಿಯನ್ ಅಮೆರಿಕನ್ನರಿಗೆ ಲಸಿಕೆ ನೀಡಲು ಪ್ಲಾನ್ ಮಾಡಿದ್ದಾರೆ. ಆದರೆ ಪರಿಸ್ಥಿತಿ ವ್ಯತಿರಿಕ್ತವಾಗುತ್ತಿದ್ದು, ಎಲ್ಲವೂ ಕೈಮೀರಿ ಹೋಗುವ ಹಂತದಲ್ಲಿದೆ. ಕುಲಾಂತರಿ ತಳಿ ಅಬ್ಬರದ ಎದುರು ಅಮೆರಿಕ ಅಳಿಸಿಹೋಗುವ ಹಂತ ತಲುಪಲಿದೆ ಎನ್ನುತ್ತಿದ್ದಾರೆ ತಜ್ಞರು.

ವೇಗವಾಗಿ ಹರಡುವ ಕುಲಾಂತರಿ..!

ವೇಗವಾಗಿ ಹರಡುವ ಕುಲಾಂತರಿ..!

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸ್ಪಷ್ಟನೆಯಂತೆ ಕೊರೊನಾ ಕುಲಾಂತರಿ ಅತಿ ವೇಗವಾಗಿ ಹರಡಿ, ಅಬ್ಬರ ತೋರಿದರೂ ಅಷ್ಟು ಪರಿಣಾಮಕಾರಿಯಲ್ಲ. ಆದರೆ ಅಮೆರಿಕ ಮಟ್ಟಿಗೆ ಕುಲಾಂತರಿ ಡೆಡ್ಲಿ ಆಗಬಹುದು. ಏಕೆಂದರೆ ಸ್ಥಳೀಯರ ರೋಗನಿರೋಧಕ ಶಕ್ತಿ ಮೇಲೆ ವೈರಸ್ ಲೈಫ್ ಸೈಕಲ್ ನಿರ್ಧಾರವಾಗುತ್ತದೆ. ಹೀಗಾಗಿ ಅಮೆರಿಕ ಮುಂದಿನ ಕೆಲವು ವಾರಗಳ ಕಾಲ ಅಲರ್ಟ್ ಆಗಿರಬೇಕಿದೆ. ಅದರಲ್ಲೂ ಮಾರ್ಚ್ ವೇಳೆಗೆ ಪ್ರತಿನಿತ್ಯ ಸುಮಾರು 3 ಲಕ್ಷ ಕೇಸ್‌ಗಳು ದಾಖಲಾದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ಇದು ಅಮೆರಿಕನ್ನರನ್ನ ಬೆಚ್ಚಿಬೀಳುವಂತೆ ಮಾಡಿದೆ.

ಕೋಟಿಗೂ ಹೆಚ್ಚು ಸೋಂಕಿತರು

ಕೋಟಿಗೂ ಹೆಚ್ಚು ಸೋಂಕಿತರು

ಅಮೆರಿಕದಲ್ಲಿ ಈವರೆಗೆ 2 ಕೋಟಿ 41 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ 4 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಅಮೆರಿಕನ್ನರಿಗೆ ಸಾಮೂಹಿಕವಾಗಿ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭವಾಗಿದ್ದರೂ, ಜನರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಭವಿಷ್ಯವೇ ಮಂಕಾಗಿ ಹೋಗುತ್ತಿದೆ. ಜೀವ ಉಳಿಸಿಕೊಂಡವನೇ ಮಹಾಶೂರ ಎಂಬಂತಾಗಿದೆ. ಹೊರ ಬರಲು ಜನರು ಭಯಪಡುತ್ತಿದ್ದಾರೆ. ಜೀವ ಉಳಿದರೆ ಸಾಕಪ್ಪಾ ಅಂತಾ ಗೊಣಗುತ್ತಿದ್ದಾರೆ ಅಮೆರಿಕನ್ನರು. ಇದರ ಮಧ್ಯೆ ಬ್ರಿಟನ್ ಕುಲಾಂತರಿ ವೈರಸ್ ಎಕ್ಸ್‌ಟ್ರಾ ಇನ್ನಿಂಗ್ಸ್ ಶುರುಮಾಡಿದೆ.

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ ಈ ಮಟ್ಟಿಗೆ ಕೊರೊನಾ ಸೋಂಕು ಉಲ್ಬಣವಾಗಲು ಟ್ರಂಪ್ ಆಡಳಿತದ ಎಡವಟ್ಟು ದೊಡ್ಡದು. ಸಣ್ಣ ಸಣ್ಣ ವಿಚಾರಗಳಿಗೆ ಜಗಳ ತೆಗೆದು ಕೂರುತ್ತಿದ್ದ ಟ್ರಂಪ್ ತಜ್ಞರ ಮಾತನ್ನು ಕೇಳಲೇ ಇಲ್ಲ. ಕೊರೊನಾ ಬಗ್ಗೆ ಅಸಡ್ಡೆ ಮಾಡುತ್ತಲೇ ಬಂದರು. ಮಾಸ್ಕ್ ಬಗ್ಗೆ ಕೇರ್ ಲೆಸ್ ಆಗಿದ್ದರು. ಅಲ್ಲದೆ ಮಾಸ್ಕ್ ಹಾಕುವುದು ಬೇಡ ಅಂತಾ ತನ್ನ ಬೆಂಬಲಿಗರಿಗೆ ಆಜ್ಞೆ ಹೊರಡಿಸಿದ್ದರು. ಇದೆಲ್ಲದರ ಪರಿಣಾಮ ಅಮೆರಿಕದಲ್ಲಿ ಕೊರೊನಾ ವೈರಸ್ ಗೂಡು ಕಟ್ಟಿಬಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿ ದಾಟಿ ಹೋದರೂ ಅಚ್ಚರಿ ಇಲ್ಲ. ಸಾವಿನ ಸಂಖ್ಯೆ 4 ಲಕ್ಷ ಮೀರಿದ್ದು, 1 ಮಿಲಿಯನ್ ಆದರೂ ಅಚ್ಚರಿ ಪಡಬೇಕಿಲ್ಲ.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!

ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ ‘ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಹಾಗೆ ನೋಡಿದರೆ ಕೊರೊನಾ ಸೋಂಕು ಕಂಟ್ರೋಲ್ ಮಾಡಿರುವ ವಿಚಾರದಲ್ಲಿ ಭಾರತವೇ ಅಮೆರಿಕ ನಾಯಕರಿಗೆ ಮಾದರಿ.

English summary
Experts warned that UK variant could drive rapid growth in American corona cases. March may become horrible for Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X