ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕೊರೊನಾ ಮೂಲ; ಹಲವು ದುರಂತ ಎದುರು ನೋಡಬೇಕಾಗಬಹುದು ಹುಷಾರ್"

|
Google Oneindia Kannada News

ವಾಷಿಂಗ್ಟನ್, ಜೂನ್ 01: ಕೊರೊನಾ ಸೋಂಕಿನ ಮೂಲವನ್ನು ಕಂಡುಕೊಳ್ಳದೇ ಹೋದರೆ ಈ ಸೋಂಕಿನಂಥದ್ದೇ ಹಲವು ದುರಂತಗಳನ್ನು ಪ್ರಪಂಚ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ರೋಗತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸೋಂಕಿನ ಮೂಲ ಪತ್ತೆಗೆ ಚೀನಾ ಸರ್ಕಾರ ಕೂಡ ಸಹಕಾರ ನೀಡುವುದು ಈ ಕ್ಷಣದ ತುರ್ತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೋವಿಡ್ -19 ಸೋಂಕಿನ ಮೂಲವನ್ನು ಸಂಪೂರ್ಣವಾಗಿ ಅರಿತುಕೊಳ್ಳದ ಹೊರತು ಕೋವಿಡ್ 26, ಕೋವಿಡ್ 32ಗಳನ್ನೂ ನಾವು ನೋಡಬೇಕಾಗುತ್ತದೆ ಎಂದು ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಟೆಕ್ಸಾಸ್ ಮಕ್ಕಳ ಆಸ್ಪತ್ರೆ ಸಹ ನಿರ್ದೇಶಕ ಪೀಟರ್ ಹೋಟೆಜ್ ಎಚ್ಚರಿಕೆ ರವಾನಿಸಿದ್ದಾರೆ. ಮುಂದೆ ಓದಿ...

 ಕೊರೊನಾ ಮೂಲದ ಅಧ್ಯಯನ ತುಂಬಾ ಅವಶ್ಯಕ

ಕೊರೊನಾ ಮೂಲದ ಅಧ್ಯಯನ ತುಂಬಾ ಅವಶ್ಯಕ

ಚೀನಾದ ಹುಬೈ ಪ್ರಾಂತ್ಯದಲ್ಲಿ ಪತ್ತೆಯಾಯಿತು ಎನ್ನಲಾದ ಕೊರೊನಾ ಸೋಂಕಿನ ಮೂಲದ ರೋಗಶಾಸ್ತ್ರ ಹಾಗೂ ಸೋಂಕು ಶಾಸ್ತ್ರವನ್ನು ಅಧ್ಯಯನ ನಡೆಸಲೇಬೇಕು ಎಂದು ಒತ್ತಿಹೇಳಿರುವ ಅವರು, ಈ ಕುರಿತು ಆರು ತಿಂಗಳಿನಿಂದ ವರ್ಷದವರೆಗೂ ಅಧ್ಯಯನ ನಡೆಸಬೇಕಾಗಬಹುದು ಎಂದು ಹೇಳಿದ್ದಾರೆ. 2019ರಲ್ಲಿ ಚೀನಾದ ಲ್ಯಾಬ್‌ನಲ್ಲಿ ಏನಾಯಿತು ಎಂಬ ಕುರಿತು ಗುಪ್ತಚರ ತನಿಖೆ ನಡೆಸಲು ವಿಜ್ಞಾನಿಗಳಿಗೆ ಅವಕಾಶ ಮಾಡಿಕೊಡಲು ಚೀನಾ ಅಧಿಕಾರಿಗಳಿಗೆ ಒಪ್ಪಿಸಬಹುದು. ಸೂಕ್ತ ರೀತಿಯಲ್ಲಿ ಈ ಪ್ರಕ್ರಿಯೆ ನಡೆಸಬೇಕಷ್ಟೆ ಎಂದು ಹೇಳಿದ್ದಾರೆ.

ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್

 ಇನ್ನಷ್ಟು ದುರಂತ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಬೇಕು

ಇನ್ನಷ್ಟು ದುರಂತ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಬೇಕು

ಚೀನಾವನ್ನು ದೂರುವ ಬದಲು ಕೊರೊನಾ ಮೂಲ ಕಂಡುಕೊಳ್ಳುವ ಅಗತ್ಯದ ಕುರಿತು ಮನವರಿಕೆ ಮಾಡಿ ಅವರನ್ನು ಒಪ್ಪಿಸಬೇಕಿದೆ. ಚೀನಾದ ಪ್ರಯೋಗಾಲಯದಿಂದ ಈ ಸೋಂಕು ಸೋರಿಕೆಯಾಗಿರುವ ಸಾಧ್ಯತೆ ನಿಜವಾದರೆ, ತನಿಖೆಗೆ ಇನ್ನಷ್ಟು ಸಹಾಯಕವಾಗುತ್ತದೆ. ಸೋಂಕಿನ ಮೂಲ ಕಂಡುಕೊಳ್ಳದ ಹೊರತು ಅದರ ಸ್ವರೂಪ, ವ್ಯಾಪ್ತಿ ಅಥವಾ ಮುಂದಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದರಿಂದ ಮುಂದೆ ಆಗಬಹುದಾದ ಅನಾಹುತಗಳ ಕುರಿತು ಅರಿತುಕೊಳ್ಳಲು ಸಾಧ್ಯವಿಲ್ಲ. ಇನ್ನಷ್ಟು ದುರಂತಗಳಿಗೆ ಎಡೆಮಾಡಿಕೊಡಬಹುದು. ಈ ಬಗ್ಗೆ ಗಮನ ಕೇಂದ್ರೀಕರಿಸಬೇಕಿದೆ ಎಂದು ಹೇಳಿದ್ದಾರೆ.

 ಪ್ರಾಣಿಗಳಿಂದ ಸೋಂಕು ತಗುಲಿದ್ದಕ್ಕೆ ಸಾಕ್ಷ್ಯಗಳಿಲ್ಲ

ಪ್ರಾಣಿಗಳಿಂದ ಸೋಂಕು ತಗುಲಿದ್ದಕ್ಕೆ ಸಾಕ್ಷ್ಯಗಳಿಲ್ಲ

ಪ್ರಯೋಗಾಲಯದಿಂದ ಸೋಂಕು ಸೋರಿಕೆಯಾಯಿತೇ, ಪ್ರಾಣಿಗಳಿಂದ ಈ ಸೋಂಕು ಮಾನವರಿಗೆ ತಗುಲಿತೇ ಎಂಬುದರ ಕುರಿತು ಹೆಚ್ಚಿನ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಆಹಾರ ಹಾಗೂ ಔಷಧ ನಿಯಂತ್ರಕ ಕಮಿಷನರ್ ಸ್ಕಾಟ್ ಗಾಟ್ಲೀಬ್ ತಿಳಿಸಿದ್ದಾರೆ. ಈ ನಡುವೆ ವುಹಾನ್ ಲ್ಯಾಬ್‌ನಲ್ಲಿ ಸೋಂಕಿನ ಮೂಲವಿದೆ ಎಂಬು ವಾದವನ್ನು ಚೀನಾ ತಳ್ಳಿಹಾಕಿದೆ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ವಾದಿಸಿದೆ.

ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಸೋರಿಕೆ: ಬ್ರಿಟನ್ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಸೋರಿಕೆ: ಬ್ರಿಟನ್

 ಕೊರೊನಾ ಮೂಲ ಕಂಡುಹಿಡಿಯಲು ಜೋಬೈಡನ್ ಆದೇಶ

ಕೊರೊನಾ ಮೂಲ ಕಂಡುಹಿಡಿಯಲು ಜೋಬೈಡನ್ ಆದೇಶ

ಚೀನಾದಲ್ಲಿ ಪ್ರಾಣಿ ಮೂಲದಿಂದ ಕೊರೊನಾ ಸೋಂಕು ಹರಡಿತೇ ಅಥವಾ ಪ್ರಯೋಗಾಲಯದಲ್ಲಿನ ಅವಘಡದಿಂದ ಸೋಂಕು ಸೃಷ್ಟಿಯಾಯಿಯೇ ಎಂಬ ಕುರಿತು ತನಿಖೆ ನಡೆಸಿ ಮೂರು ತಿಂಗಳ ಒಳಗೆ ವರದಿ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಪ್ತಚರ ಇಲಾಖೆಗೆ ಈಚೆಗೆ ಆದೇಶಿಸಿದ್ದರು. ಕೊರೊನಾ ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ಮತ್ತಷ್ಟು ಪ್ರಯತ್ನ ಮಾಡಬೇಕು. ಸಾಕಷ್ಟು ಮಾಹಿತಿಗಳ ಪರಿಶೀಲನೆ ನಡೆಸಬೇಕು. ಈ ಮೂಲಕ ನಿಖರ ಅಭಿಪ್ರಾಯಕ್ಕೆ ಬರುವಂತಾಗಬೇಕು. 90 ದಿನಗಳ ಬಗ್ಗೆ ವರದಿ ನೀಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

English summary
US Disease experts warns of more damage if coronavirus origin not found
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X