ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹುಟ್ಟು: ವಿಶ್ವ ಆರೋಗ್ಯ ಸಂಸ್ಥೆ ತನಿಖೆ ಕುರಿತು ತಜ್ಞರ ಅನುಮಾನ

|
Google Oneindia Kannada News

ವಾಷಿಂಗ್ಟನ್, ಜುಲೈ 02: ಕೊರೊನಾ ಹುಟ್ಟಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸುತ್ತಿರುವ ತನಿಖೆಯ ಕುರಿತು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಚ್ಚರಿ ವಿಚಾರವೆಂದರೆ ಈ ಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಿಕಟ ಸಂಪರ್ಕವಿರುವ ದೇಶಗಳ ತಜ್ಞರೇ ಸಂಸ್ಥೆಯ ತನಿಖಾ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಇದಕ್ಕೆ ಇಂಬು ನೀಡುವಂತೆ ಕೊರೋನಾ ವೈರಸ್ ವಿಚಾರವಾಗಿ ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟು ಕೂಡ ಮುಂದುವರೆದಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯಿಂದ ನಿಸ್ಪಕ್ಷಪಾತ ವರದಿ ಬರುತ್ತದೆಯೇ ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ.

 ಮಕ್ಕಳಿಗೆ ಚೀನಾದ ಈ ಲಸಿಕೆ ಅತಿ ಸುರಕ್ಷಿತ ಎಂದ ಲ್ಯಾನ್ಸೆಟ್ ಅಧ್ಯಯನ ಮಕ್ಕಳಿಗೆ ಚೀನಾದ ಈ ಲಸಿಕೆ ಅತಿ ಸುರಕ್ಷಿತ ಎಂದ ಲ್ಯಾನ್ಸೆಟ್ ಅಧ್ಯಯನ

ಶೀಘ್ರದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಮೂಲದ ಕುರಿತ ತನ್ನ 2ನೇ ಹಂತದ ತನಿಖೆಗೆ ಸಿದ್ಧತೆ ನಡೆಸುತ್ತಿರುವಂತೆಯೇ ಜಾಗತಿಕ ತಜ್ಞರ ತಂಡ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ಪ್ರಸ್ತುತೆಯನ್ನು ಪ್ರಶ್ನೆ ಮಾಡುತ್ತಿದ್ದ, ದಿನಕಳೆದಂತೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.

 ಮೊದಲ ಹಂತದ ತನಿಖೆ

ಮೊದಲ ಹಂತದ ತನಿಖೆ

ಈ ಹಿಂದೆ ಮಾರ್ಚ್‌ನಲ್ಲಿ ನಡೆದ ಮೊದಲ ಹಂತದ ತನಿಖೆಯಲ್ಲಿ ಕೊರೋನಾ ವೈರಸ್ ಮಾನವ ನಿರ್ಮಿತ ಅಥವಾ ಚೀನಾ ಲ್ಯಾಬ್ ನಿಂದ ಸೋರಿಕೆಯಾದ ವೈರಸ್ ಅಲ್ಲ. ಇದು ಪ್ರಾಣಿಗಳಿಂದ ಅಂದರೆ ಬಾವಲಿ ಅಥವಾ ಇತರೆ ಪ್ರಾಣಿಗಳ ಮೂಲಕವಾಗಿ ಮಾನವರಿಗೆ ಹಬ್ಬಿದೆ ಎಂದು ಹೇಳಲಾಗಿತ್ತು. ಆದರೆ ಬ್ರಿಟನ್ ಸೇರಿದಂತೆ ಕೆಲ ದೇಶಗಳ ತಜ್ಞರು ಕೊರೊನಾ ವೈರಸ್ ನ ಸುದೀರ್ಘ ತನಿಖೆ ನಡೆಸಿ ಅದು ಮಾನವ ನಿರ್ಮಿತ ಎಂದು ಹೇಳಿದ್ದರು.

 ವೈರಸ್ ಸೋರಿಕೆ

ವೈರಸ್ ಸೋರಿಕೆ

ಈ ಮೊದಲು ನಾರ್ವೇ, ಅಮೆರಿಕ ಮತ್ತು ಬ್ರಿಟನ್ ದೇಶದ ಕೆಲ ವಿಜ್ಞಾನಿಗಳು ಕೊರೊನಾ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದಲೇ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಇದಕ್ಕೆ ಸಾಕಷ್ಟು ಸಾಕ್ಷಿಗಳನ್ನೂ ಕೂಡ ನೀಡಿದ್ದರು.

 ಕೊರೊನಾ ವೈರಸ್ ಸೃಷ್ಟಿಸಿದ್ದು ಮಾನವ

ಕೊರೊನಾ ವೈರಸ್ ಸೃಷ್ಟಿಸಿದ್ದು ಮಾನವ

ಕೊರೊನಾ ವೈರಸ್ ನ ರಚನೆ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ ಅದು ಮಾನವ ಸೃಷ್ಟಿ ಎಂದು ತಿಳಿಯುತ್ತದೆ ಎಂದು ಹೇಳಿದ್ದರು. ಅಲ್ಲದೆ ಈ ವೈರಸ್ ಮಾನವ ನಿರ್ಮಿತ ಅಲ್ಲ ಎಂದು ಸಾಬೀತು ಮಾಡಲು ವಿಜ್ಞಾನಿಗಳು ರಿವರ್ಸ್ ಇಂಜಿನಿಯರಿಂಗ್ ವರ್ಷನ್‌ನಿಂದ ಟ್ರ್ಯಾಕ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಚೀನಾದ ರೆಟ್ರೋ ಇಂಜಿನಿಯರಿಂಗ್‌ನ ಸಾಕ್ಷಿ ತಮ್ಮ ಬಳಿ ಇದೆ ಎಂದು ವಾದಿಸಿದ್ದಾರೆ.

 ಬಾವುಲಿಗಳಿಂದ ಸೋಂಕು

ಬಾವುಲಿಗಳಿಂದ ಸೋಂಕು

ಚೀನಾದ ಮೊಜಿಯಾಂಗ್ ಗಣಿಯಲ್ಲಿ ಸೋಂಕಿತ ಬಾವಲಿಗಳಿಂದ ಸೋಂಕಿಗೆ ತುತ್ತಾದ ಆರು ಗಣಿ ಕಾರ್ಮಿಕರು ಕೋವಿಡ್ ರೀತಿಯ ನ್ಯುಮೋನಿಯಾದಿಂದ ಬಳಲುತ್ತಿದ್ದರು. 2012ರಲ್ಲೇ ಈ ರೀತಿಯ ವಿಚಿತ್ರ ಸೋಂಕನ್ನು ಕಂಡುಹಿಡಿಯಲಾಗಿತ್ತು. ಆದಾಗ್ಯೂ, ಕಳೆದ ವರ್ಷದಲ್ಲಿ, ಚೀನಾದ ಅಧಿಕಾರಿಗಳು ಗಣಿ ಮುಚ್ಚಿ ವಿಜ್ಞಾನಿಗಳಿಂದ ಮಾದರಿಗಳನ್ನು ಮುಟ್ಟುಗೋಲು ಹಾಕಿಕೊಂಡರು. ಅಲ್ಲದೆ ಗಣಿಗೆ ಭೇಟಿ ನೀಡುವ ಪತ್ರಕರ್ತರೊಂದಿಗೆ ಮಾತನಾಡದಂತೆ ಸ್ಥಳೀಯರಿಗೆ ಆದೇಶಿಸಿದ್ದರು. ಇನ್ನು ಕಳೆದ ಡಿಸೆಂಬರ್‌ನಲ್ಲಿ ನಡೆದ ಅಸೋಸಿಯೇಟೆಡ್ ಪ್ರೆಸ್ ತನಿಖೆಯಲ್ಲಿ ಚೀನಾ ಸರ್ಕಾರ ಕೋವಿಡ್-19 ಸಂಶೋಧನೆಯ ಪ್ರಕಟಣೆಗೆ ನಿರ್ಬಂಧಗಳನ್ನು ವಿಧಿಸಿತ್ತು. ಅಲ್ಲದೆ ಇದರಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳ ಕಡ್ಡಾಯ ಪರಿಶೀಲನೆಯನ್ನು ಕಡ್ಡಾಯಗೊಳಿಸಿತ್ತು.

 ವೈರಸ್ ಮೂಲ ಶೋಧ ಅಸಾಧ್ಯ

ವೈರಸ್ ಮೂಲ ಶೋಧ ಅಸಾಧ್ಯ

ಕಳೆದ ಒಂದೂವರೆ ವರ್ಷದಿಂದ ತನಿಖೆ ನಡೆದಿದ್ದು, ಈ ತನಿಖೆ ಮೇಲೆ ಚೀನಾ ಛಾಯೆ ಖಂಡಿತಾ ಇದೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆಯಿಂದ ವೈರಸ್ ಮೂಲ ಪತ್ತೆ ಅಸಾಧ್ಯ ಎಂಬುದು ಬಹಿರಂಗವಾಗಿಯೇ ತಿಳಿಯುತ್ತದೆ. ಅಂತೆಯೇ ಅಮೆರಿಕ ಮತ್ತು ಇತರ ದೇಶಗಳು ತಮ್ಮಲ್ಲಿರುವ ಬುದ್ಧಿವಂತಿಕೆ ಮತ್ತು ತಂತ್ರಜ್ಞಾನವನ್ನು ಒಟ್ಟುಗೂಡಿಸಿ ಈ ತನಿಖೆ ಮಾಡಲು ಪ್ರಯತ್ನಿಸಬಹುದು. ಅಂತೆಯೇ WHO ಗೆ ಅಗತ್ಯವಿರುವ ಅಧಿಕಾರವನ್ನು ನೀಡಲು ಅಂತಾರಾಷ್ಟ್ರೀಯ ಆರೋಗ್ಯ ಕಾನೂನುಗಳನ್ನು ಪರಿಷ್ಕರಿಸಬಹುದು ಅಥವಾ ತನಿಖೆ ನಡೆಸಲು ಕೆಲವು ಹೊಸ ಘಟಕವನ್ನು ರಚಿಸಬಹುದು ಎಂದು ಸಲಹೆ ನೀಡಿದ್ದಾರೆ.
ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ತನಿಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಕಾನೂನು ಮತ್ತು ಮಾನವ ಹಕ್ಕುಗಳ ಕುರಿತ ವಿಶ್ವ ಆರೋಗ್ಯ ಸಂಸ್ಥೆ ಸಹಯೋಗ ಕೇಂದ್ರದ ನಿರ್ದೇಶಕ ಲಾರೆನ್ಸ್ ಗೋಸ್ಟಿನ್ ಅವರು, ವಿಶ್ವ ಆರೋಗ್ಯ ಸಂಸ್ಥೆ ನಡೆಸುತ್ತಿರುವ ತನಿಖೆಯಿಂದ ವೈರಸ್ ಪತ್ತೆ ಅಸಾಧ್ಯ.

 ತನಿಖೆಗೆ ಒತ್ತಾಯಿಸಿದ್ದ ಅಮೆರಿಕ

ತನಿಖೆಗೆ ಒತ್ತಾಯಿಸಿದ್ದ ಅಮೆರಿಕ

ಈಗಾಗಲೇ ನಡೆಯುತ್ತಿರುವ ತನಿಖೆಯನ್ನು ಚುರುಕುಗೊಳಿಸಿ 90 ದಿನಗಳಲ್ಲಿ ಈ ಕುರಿತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಪ್ರಯತ್ನದಲ್ಲಿ ನಮ್ಮ ನ್ಯಾಷನಲ್ ಲ್ಯಾಬ್ಸ್ ಮತ್ತು ನಮ್ಮ ಸರ್ಕಾರದ ಇತರ ಇಂಟೆಲಿಜೆನ್ಸ್ ಏಜೆನ್ಸಿಗಳು ಪ್ರಯತ್ನಗಳನ್ನು ಹೆಚ್ಚಿಸಲು ಕೆಲಸ ಮಾಡಬೇಕೆಂದು ನಾನು ಕೇಳಿದ್ದೇನೆ ಎಂದು ಹೇಳಿದ್ದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಕೋವಿಡ್ ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸಿ 90 ದಿನಗಳಲ್ಲಿ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದರು. ಈಗಾಗಲೇ ಅಮೆರಿಕ ತಜ್ಞರು ಮತ್ತು ವಿಜ್ಞಾನಿಗಳು ಕೋವಿಡ್-19 ವೈರಸ್ ನ ಮೂಲದ ಕುರಿತು ತನಿಖೆ ನಡೆಸುತ್ತಿದ್ದು, ಇದರ ಜೊತೆಗೆ ಅಮೆರಿಕ ಗುಪ್ತಚರ ಇಲಾಖೆಗಳ ಕೆಲ ತಂಡಗಳೂ ಕೂಡ ಈ ತನಿಖೆ ನಡೆಸುತ್ತಿವೆ.ಈ ಬಗ್ಗೆ ಮಾಹಿತಿ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, 'ಕೊರೊನಾ ವೈರಸ್ ಮೂಲದ ಕುರಿತು ಒಂದು ನಿಶ್ಚಿತ ತೀರ್ಮಾನಕ್ಕೆ ಹತ್ತಿರವಾಗಬಲ್ಲ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

English summary
As the World Health Organization draws up plans for the next phase of its probe of how the coronavirus pandemic started, an increasing number of scientists say the U.N.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X