ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ರೂಪಾಂತರಿ 85 ದೇಶಗಳಲ್ಲಿ ಪತ್ತೆ, ಪ್ರಬಲ ವಂಶಾವಳಿಯಾಗುವ ಸಾಧ್ಯತೆ: WHO

|
Google Oneindia Kannada News

ವಿಶ್ವಸಂಸ್ಥೆ, ಜೂನ್ 24: ಡೆಲ್ಟಾ ರೂಪಾಂತರಿ ಸೋಂಕು 85 ದೇಶಗಳಲ್ಲಿ ಪತ್ತೆಯಾಗಿದ್ದು, ಪ್ರಬಲ ವಂಶಾವಳಿಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ವಿಸ್ತರಣೆಯಾಗುತ್ತಿರುವ ಇದು ಪ್ರಬಲ ವಂಶಾವಳಿಯಾಗುವ ಸಾಧ್ಯತೆ ಇದ್ದು, ವಿಶ್ವದ ಮತ್ತಷ್ಟು ರಾಷ್ಟ್ರಗಳಿಗೆ ಹರಡಬಹುದು ಎಂದು ಹೇಳಲಾಗಿದೆ.

ಮಧ್ಯಪ್ರದೇಶ: ಮೊದಲ 'ಡೆಲ್ಟಾ ಪ್ಲಸ್' ಸೋಂಕಿತೆ ಸಾವು ಮಧ್ಯಪ್ರದೇಶ: ಮೊದಲ 'ಡೆಲ್ಟಾ ಪ್ಲಸ್' ಸೋಂಕಿತೆ ಸಾವು

ಪ್ರಸ್ತುತ ಡೆಲ್ಟಾ ತಳಿಯು ವೇಗವಾಗಿ ಹರಡುತ್ತಿದ್ದು, ಕಳೆದ ಎರಡು ವಾರಗಳಲ್ಲಿ 11 ದೇಶಗಳಲ್ಲಿ ಹೊಸದಾಗಿ ಪತ್ತೆಯಾಗಿದೆ, ಅಲ್ಲದೆ ಇನ್ನಷ್ಟು ದೇಶಗಳಲ್ಲಿ ಅದು ವ್ಯಾಪಿಸುವ ಸಾಧ್ಯತೆ ಇದೆ.

Delta Variant Now Reported In 85 Countries, Expected To Become Dominant Lineage, Says WHO

ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 22 ರಂದು ಬಿಡುಗಡೆ ಮಾಡಿದ ಕೋವಿಡ್ 19 ವರದಿ ಪ್ರಕಾರ, ಜಾಗತಿಕವಾಗಿ 170 ದೇಶಗಳಲ್ಲಿ ಆಲ್ಫಾ, 119 ದೇಶಗಳಲ್ಲಿ ಬೀಟಾ, 71 ದೇಶಗಳಲ್ಲಿ ಗಾಮಾ ಹಾಗೂ 85 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿದೆ.

ಡೆಲ್ಟಾ ರೂಪಾಂತರಿಯು ಆಲ್ಫಾ ತಳಿಗಿಂತಲೂ ವ್ಯಾಪಕವಾಗಿ ಹರಡಬಲ್ಲದು, ಈಗಿನ ಸ್ಥಿತಿಯೇ ಮುಂದುವರೆದರೆ ಡೆಲ್ಟಾ ಪ್ರಬಲ ವಂಶಾವಳಿಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ರೂಪಾಂತರಿ ತಳಿಗಳ ಹರಡುವಿಕೆಗೆ ಸಂಬಂಧಿಸಿದಂತೆ ನಿಕಟವಾಗಿ ಮೇಲ್ವಿಚಾರಣೆ ವಹಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡೆಲ್ಟಾ ಪ್ಲಸ್ ರೂಪಾಂತರಿ ತಗುಲಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಕೋವಿಡ್ 19 ಸೋಂಕಿನ ರೂಪಾಂತರಿ ಡೆಲ್ಟಾ ಪ್ಲಸ್‌ ಸೋಂಕು ತಾಗಿದ್ದ ಮಹಿಳೆ ಬುಧವಾರ ಕೊನೆಯುಸಿರೆಳೆದಿದ್ದಾರೆ. ಮಧ್ಯಪ್ರದೇಶದಲ್ಲಿ ಇದುವರೆಗೆ ಐದು ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಮೂರು ಪ್ರಕರಣಗಳು ಭೋಪಾಲ್‌ನಲ್ಲಿ ಪತ್ತೆಯಾಗಿದ್ದರೆ ಎರಡು ಪ್ರಕರಣಗಳು ಉಜ್ಜಯಿನಿಯಲ್ಲಿ ದೃಢಪಟ್ಟಿದೆ.

ಡೆಲ್ಟಾ ಪ್ಲಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪತಿಗೆ ಮೊದಲು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು, ಬಳಿಕ ಮಹಿಳೆಗೆ ಸೋಂಕು ತಾಗಿದೆ, ಮಹಿಳೆಯ ಪತಿ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ, ಆದರೆ ಮಹಿಳೆ ಇದುವರೆಗೂ ಲಸಿಕೆ ಪಡೆದಿಲ್ಲ.

English summary
The Delta variant, the significantly more transmissible strain of COVID-19, is expected to become a dominant lineage if current trends continue, the WHO has warned after it was reported in 85 countries and continues to be detected in more places around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X