ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಾದ ಚಂದ್ರಯಾನ ಯೋಜನೆ ಬಿಡ್ ಗೆದ್ದ ಎಲೋನ್ ಮಸ್ಕ್

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 17: ಚಂದ್ರನ ಅಂಗಳದಲ್ಲಿ ಗಗನಯಾತ್ರಿಕರನ್ನು ಇಳಿಸುವ ನಾಸಾದ ಬೃಹತ್ ಯೋಜನೆಯ ಗುತ್ತಿಗೆಯನ್ನು ಖ್ಯಾತ ಉದ್ಯಮಿ ಎಲೋನ್ ಮಸ್ಕ್ ಪಡೆದುಕೊಂಡಿದ್ದಾರೆ. 2024ರ ಆರಂಭದಲ್ಲಿ ಚಂದ್ರನಲ್ಲಿಗೆ ಗಗನಯಾತ್ರಿಕರನ್ನು ತರುವ ಬಾಹ್ಯಾಕಾಶ ನೌಕೆಯನ್ನು ರೂಪಿಸುವ 2.9 ಬಿಲಿಯಲ್ ಡಾಲರ್ ಮೌಲ್ಯದ ಗುತ್ತಿಗೆಯನ್ನು ಎಲೋನ್ ಮಸ್ಕ್ ಒಡೆತನದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್ ಪಡೆದುಕೊಂಡಿದೆ.

ಕ್ರಮವಾಗಿ ಜಗತ್ತಿನ ಮೊದಲ ಮತ್ತು ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಗಳು ಎನಿಸಿರುವ ಬೆಜೋಸ್ ಮತ್ತು ಮಸ್ಕ್ ಅವರು ನಾಸಾದ ಈ ಮಹತ್ವಾಕಾಂಕ್ಷಿ ಯೋಜನೆಯ ಬಿಡ್ ಪಡೆಯಲು ತೀವ್ರ ಪೈಪೋಟಿ ನಡೆಸಿದ್ದರು. 1972ರ ಬಳಿಕ ಚಂದ್ರನಲ್ಲಿ ಮೊದಲ ಬಾರಿ ಮನುಷ್ಯರನ್ನು ಇಳಿಸುವ ಈ ಬೃಹತ್ ಯೋಜನೆಯು ಯಾರ ಪಾಲಾಗಿದೆ ಎನ್ನುವುದು ಕುತೂಹಲ ಮೂಡಿಸಿತ್ತು.

ನಾಸಾ ಗಗನಯಾನ ತರಬೇತಿಗೆ ಆಯ್ಕೆಯಾದ ಮೊದಲ ಅರಬ್ ಮಹಿಳೆನಾಸಾ ಗಗನಯಾನ ತರಬೇತಿಗೆ ಆಯ್ಕೆಯಾದ ಮೊದಲ ಅರಬ್ ಮಹಿಳೆ

ಮಸ್ಕ್ ಅವರ ಸ್ಪೇಕ್ಸ್ ಎಕ್ಸ್ ಏಕಾಂಗಿಯಾಗಿ ಬಿಡ್ ಸಲ್ಲಿಸಿದರೆ, ಅಮೇಜಾನ್.ಕಾಂನ ಸಂಸ್ಥಾಪಕ ಬೆಜೋಸ್ ಅವರ ಬ್ಲೂ ಒರಿಜಿನ್ ಸಂಸ್ಥೆಯು ಲಾಖ್ಹೀಡ್ ಮಾರ್ಟಿಕ್ ಕಾರ್ಪ್, ನಾರ್ತ್‌ರೋಪ್ ಗ್ರುಮ್ಮನ್ ಕಾರ್ಪ್‌ ಮತ್ತು ಡ್ರೇಪರ್ ಸಹಭಾಗಿತ್ವದಲ್ಲಿ ಬಿಡ್ಡಿಂಗ್ ನಡೆಸಿತ್ತು. ಇದರ ಜತೆಗೆ ರಕ್ಷಣಾ ಗುತ್ತಿಗೆದಾರ ಕಂಪೆನಿ ಡೈನೆಟಿಕ್ಸ್ ಕೂಡ ಸ್ಪರ್ಧೆಯಲ್ಲಿತ್ತು.

Elon Musks SpaceX Wins $2.9 Billion Moon Lander Contract Of NASA

ಆದರೆ ಈ ಗುತ್ತಿಗೆಯನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ತೋರಿಸುತ್ತಿರುವ ಸ್ಪೇಸ್ ಎಕ್ಸ್‌ಗೆ ನಾಸಾ ನೀಡಿದೆ. ಈ ಘೋಷಣೆಯ ಬಳಿಕ 'ನಾಸಾ ರೂಲ್ಸ್' ಎಂದು ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ತನ್ನ ಆರ್ಟೆಮಿಸ್ ಕಾರ್ಯಕ್ರಮದ ಭಾಗವಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು ತನ್ನ ಮೊದಲ ವಾಣಿಜ್ಯ ಹ್ಯೂಮನ್ ಲ್ಯಾಂಡರ್ ಯೋಜನೆಯ ಒಪ್ಪಂದ ಮಾಡಿಕೊಂಡಿದೆ.

'ನಾಸಾವು ಅಪೋಲೋ ಯೋಜನೆಯ ಬಳಿಕ ನಡೆಯುತ್ತಿರುವ ಮೊದಲ ಮನುಷ್ಯರನ್ನು ಚಂದ್ರನ ಮೇಲೆ ಇಳಿಸುವ ಚಂದ್ರಯಾನ ಯೋಜನೆಗೆ ಸ್ಟಾರ್‌ಶಿಪ್‌ಅನ್ನು ಆಯ್ಕೆಮಾಡಿಕೊಂಡಿದೆ. ಮಾನವ ಬಾಹ್ಯಾಕಾಶ ಆವಿಷ್ಕಾರದಲ್ಲಿನ ಹೊಸ ಯುಗದಲ್ಲಿ ನಾಸಾಗೆ ಸಹಾಯ ಮಾಡಲು ನಾವು ವಿಧೇಯರಾಗಿದ್ದೇವೆ' ಎಂದು ಸ್ಪೇಸ್ ಎಕ್ಸ್ ಟ್ವೀಟ್ ಮಾಡಿದೆ.

English summary
Elon Musk's SpaceX wins $2.9 billion moon lander contract of NASA to bring astronauts to the moon in 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X