ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಕಾಲಕ್ಕೆ 143 ಉಪಗ್ರಹ ಉಡಾವಣೆ: ಇಸ್ರೋದ ವಿಶ್ವದಾಖಲೆ ಮುರಿದ ಅಮೆರಿಕದ ಸ್ಪೇಸ್ ಎಕ್ಸ್

|
Google Oneindia Kannada News

ವಾಷಿಂಗ್ಟನ್, ಜನವರಿ 25: ಖ್ಯಾತ ಉದ್ಯಮಿ ಎಲೋನ್ ಮಸ್ಕ್ ಅವರ ಮಾಲೀಕತ್ವದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್, ಭಾನುವಾರ ಏಕಕಾಲಕ್ಕೆ 143 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತದ ಇಸ್ರೋ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಮುರಿದಿದೆ. ಎಲೋನ್ ಮಸ್ಕ್ ಅವರ ಟೆಲ್ಸಾ ಕಂಪೆನಿ ಭಾರತಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಈ ಹೊಸ ಸಾಧನೆ ಮಾಡಿದೆ. 2017ರ ಫೆಬ್ರವರಿಯಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತದ ಇಸ್ರೋ, ಜಗತ್ತನ್ನು ನಿಬ್ಬೆರಗಾಗುವಂತೆ ಮಾಡಿತ್ತು.

ಟ್ರಾನ್ಸ್‌ಪೋರ್ಟರ್-1 ಎಂಬ ಹೆಸರಿನ ಯೋಜನೆಯಲ್ಲಿ ಫಾಲ್ಕನ್ 9 ಉಡಾವಣಾ ವಾಹನದ ಮೂಲಕ ಫ್ಲೋರಿಡಾದ ಕೇಪ್ ಕಾನಾವರೆಲ್ ಎಂಬ ಸ್ಥಳದಿಂದ ಭಾರತೀಯ ಕಾಲಮಾನ ರಾತ್ರಿ 8.31ಕ್ಕೆ ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಲಾಯಿತು.

ಪಿಎಸ್‌ಎಲ್‌ವಿ-ಸಿ50ರಿಂದ ಸಂವಹನ ಉಪಗ್ರಹ ಸಿಎಂಎಸ್-01 ಉಡಾವಣೆಪಿಎಸ್‌ಎಲ್‌ವಿ-ಸಿ50ರಿಂದ ಸಂವಹನ ಉಪಗ್ರಹ ಸಿಎಂಎಸ್-01 ಉಡಾವಣೆ

ಒಂದು ಹಂತದಲ್ಲಿ ಈ ರಾಕೆಟ್ ಭಾರತದ ಮೇಲೆಯೂ ಹಾದು ಹೋಯಿತು. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಕೇಂದ್ರವು ಅದರ ಸಂಕೇತಗಳನ್ನು ಗುರುತಿಸಿತ್ತು. ಸ್ಪೇಸ್ ಎಕ್ಸ್ ಮೂಲಕ ಸಣ್ಣ ಉಪಗ್ರಹ ಗ್ರಾಹಕರು ಕಕ್ಷೆಗೆ ತಮ್ಮ ಉಪಗ್ರಹಗಳನ್ನು ರವಾನಿಸುವ ಯೋಜನೆಯಾದ ಸ್ಪೇಸ್ ಎಕ್ಸ್ ಸ್ಮಾಲ್ ಸ್ಯಾಟ್ ರೈಡ್‌ಶೇರ್ ಪ್ರೋಗ್ರಾಮ್ ಅಡಿ ಇದೇ ಮೊದಲ ಬಾರಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಮುಂದೆ ಓದಿ.

143 ಉಪಗ್ರಹಗಳು

143 ಉಪಗ್ರಹಗಳು

ಭಾನುವಾರ ಉಡಾವಣೆಯಾದ 143 ಉಪಗ್ರಹಗಳು ವಾಣಿಜ್ಯ ಹಾಗೂ ಸರ್ಕಾರದ ಕ್ಯೂಬ್‌ಸ್ಯಾಟ್‌ಗಳು, ಮೈಕ್ರೋಸ್ಯಾಟಲೈಟ್‌ಗಳು, ಕಕ್ಷಾ ವರ್ಗಾವಣೆ ವಾಹನಗಳು ಮತ್ತು 10 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಒಳಗೊಂಡಿವೆ.

ಜಾಗತಿಕ ಬ್ರಾಡ್‌ಬ್ಯಾಂಡ್ ಸಂಪರ್ಕ

ಜಾಗತಿಕ ಬ್ರಾಡ್‌ಬ್ಯಾಂಡ್ ಸಂಪರ್ಕ

ಉಪಗ್ರಹಗಳನ್ನು ನಿಯೋಜನೆ ಮಾಡುವ ಕೊನೆಯ 90 ನಿಮಿಷದ ಕಾರ್ಯ ನಿರ್ಣಾಯಕವಾಗಿತ್ತು. ಏಕೆಂದರೆ ಈ ಉಪಗ್ರಹಗಳು ಕೆಲವೇ ಸೆಕೆಂಡು ಹಾಗೂ ನಿಮಿಷಗಳಲ್ಲಿ ಬೇರೆ ಬೇರೆ ಯಾಗಬೇಕಿತ್ತು. ಈ ಉಪಗ್ರಹಗಳ ಮೂಲಕ 2021ರ ಅಂತ್ಯದೊಳಗೆ ಜಾಗತಿಕ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸಂಪರ್ಕ ಒದಗಿಸುವ ಗುರಿಯನ್ನು ಸ್ಪೇಸ್‌ಎಕ್ಸ್ ಹೊಂದಿದೆ.

ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಯಶಸ್ವಿ ಉಡಾವಣೆಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಯಶಸ್ವಿ ಉಡಾವಣೆ

ಸ್ಪೇಸ್ ಎಕ್ಸ್ ಕಡಿಮೆ ದರ

ಸೂರ್ಯ ಧ್ರುವ ಸಮಕಾಲಿಕ ಕಕ್ಷೆಗೆ ಪ್ರತಿ ಉಪಗ್ರಹವನ್ನು ಸೇರಿಸಲು ಪ್ರತಿ ಕಿಲೋ ಮೀಟರ್‌ಗೆ 15,000 ಡಾಲರ್ ಮೊತ್ತವನ್ನು ಸ್ಪೇಸ್ ಎಕ್ಸ್ ವಿಧಿಸುತ್ತಿದೆ. ಇದು ಬಾಹ್ಯಾಕಾಶ ಸಂಸ್ಥೆಗಳಲ್ಲಿಯೇ ಅತ್ಯಂತ ಕಡಿಮೆ ದರವಾಗಿದೆ.

ರಷ್ಯಾದ ದಾಖಲೆ ಮುರಿದಿದ್ದ ಭಾರತ

ರಷ್ಯಾದ ದಾಖಲೆ ಮುರಿದಿದ್ದ ಭಾರತ

2017ರ ಫೆಬ್ರವರಿ 15ರಂದು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ವಿಶ್ವದಾಖಲೆ ಸೃಷ್ಟಿಸಿತ್ತು. ಪಿಎಸ್‌ಎಲ್‌ವಿ-ಸಿ37 ರಾಕೆಟ್ ಹಾರಿಸಿದ್ದ ಉಪಗ್ರಹಗಳಲ್ಲಿ 101 ಉಪಗ್ರಹಗಳು ವಿದೇಶದ್ದಾಗಿವು. ಇದಕ್ಕೂ ಮುನ್ನ ರಷ್ಯಾ ಒಂದೇ ರಾಕೆಟ್‌ನಲ್ಲಿ 37 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ದಾಖಲೆಯಾಗಿತ್ತು.

English summary
Elon Musk's SpaceX has created a new world record by launching 143 satellites on a single rocket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X