ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವೇನೋ ತಗ್ಗಿದೆ, ಆದರೆ ಡೆಲ್ಟಾ ರೂಪಾಂತರದ ಬಗ್ಗೆ ಎಚ್ಚರವಿರಲಿ; ಬೈಡನ್

|
Google Oneindia Kannada News

ವಾಷಿಂಗ್ಟನ್, ಜುಲೈ 21: "ಕೊರೊನಾ ಲಸಿಕೆ ಅಭಿಯಾನದಿಂದಾಗಿ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ನಾಟಕೀಯ ರೀತಿಯಲ್ಲಿ ಇಳಿಕೆಯಾಗಿದೆ. ಆದರೆ ಜನರು ಕೊರೊನಾ ಸೋಂಕಿನ ಡೆಲ್ಟಾ ರೂಪಾಂತರದ ಕುರಿತು ಎಚ್ಚರಕೆಯಿಂದಿರಬೇಕಿದೆ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ಬೈಡನ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಕ್ಯಾಬಿನೆಟ್ ಸಭೆ ನಡೆಸಿದ್ದು, ದೇಶದಲ್ಲಿನ ಕೊರೊನಾ ಸ್ಥಿತಿಗತಿಗಳ ಕುರಿತು ಮಾಹಿತಿ ಹಂಚಿಕೊಂಡರು.

"ಕಳೆದ ಆರು ತಿಂಗಳಿನಲ್ಲಿ ಲಸಿಕಾ ಅಭಿಯಾನದಿಂದಾಗಿ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಶೇಕಡಾ 90ರಷ್ಟು ಸಾವಿನ ಪ್ರಮಾಣ ಕಡಿಮೆಯಾಗಿದೆ. ಈಗ ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ಸಾವನ್ನಪ್ಪಿದ ಬಹುಪಾಲು ಮಂದಿ ಲಸಿಕೆ ಪಡೆದುಕೊಂಡಿಲ್ಲದವರು" ಎಂದು ಹೇಳಿದರು.

v

"ದೇಶದಲ್ಲಿ ಸೋಂಕಿನಿಂದ ಸಾವಿನ ಸಂಖ್ಯೆ ತಗ್ಗಿತೆಂದು ಜನರು ನಿರ್ಲಕ್ಷಿಸುವಂತಿಲ್ಲ. ಮುಂದಿನ ವಾರಗಳಲ್ಲಿ ಡೆಲ್ಟಾ ರೂಪಾಂತರ ಪ್ರಕರಣಗಳು ತೀವ್ರಗೊಳ್ಳಲಿರುವುದಾಗಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಅಮೆರಿಕದಲ್ಲಿ ವರದಿಯಾಗಿರುವ ಪ್ರಕರಣಗಳಿಗೆ ಮುಕ್ಕಾಲು ಪಾಲು ಡೆಲ್ಟಾ ರೂಪಾಂತರವೇ ಕಾರಣ ಎನ್ನಲಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಜನರು ಮೈಮರೆಯುವಂತಿಲ್ಲ" ಎಂದು ಹೇಳಿದ್ದಾರೆ.

"ವಯಸ್ಕರು ಹಾಗೂ ಮಕ್ಕಳು ಈ ರೂಪಾಂತರಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಅವರಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜನರು ಯಾವುದೇ ಹಿಂಜರಿಕೆಯಿಲ್ಲದೇ ಕೊರೊನಾ ಲಸಿಕೆಗಳನ್ನು ಪಡೆದುಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.

ಭಾರತದಲ್ಲಿ ಡಿಸೆಂಬರ್‌ನಲ್ಲಿ ಪತ್ತೆಯಾದ B.1.617.2 "ಡೆಲ್ಟಾ" ರೂಪಾಂತರ ಇದೀಗ ಹಲವು ದೇಶಗಳನ್ನು ಆವರಿಸಿದೆ. ಈ ಕುರಿತು ಈಚೆಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನೂ ರವಾನಿಸಿತ್ತು.

ಕೊರೊನಾ ಕುರಿತು ತಪ್ಪು ಮಾಹಿತಿ: ಸಾಮಾಜಿಕ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಬೈಡನ್ಕೊರೊನಾ ಕುರಿತು ತಪ್ಪು ಮಾಹಿತಿ: ಸಾಮಾಜಿಕ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಬೈಡನ್

"ಡೆಲ್ಟಾ ವೈರಸ್‌ನಿಂದಾಗಿ ಪತ್ತೆ ಸೋಂಕು ಹೆಚ್ಚಳವಾಗುತ್ತಿದೆ. ಡೆಲ್ಟಾ ರೂಪಾಂತರವು 111ಕ್ಕೂ ಹೆಚ್ಚು ದೇಶಗಳಲ್ಲಿದೆ. ಇದು ಈಗಾಗಲೇ ವಿಶ್ವಾದ್ಯಂತ ಹರಡಲು ಆರಂಭವಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನಮ್ ಕಳವಳ ವ್ಯಕ್ತಪಡಿಸಿದ್ದರು.

Recommended Video

ಜಪಾನ್ ಗೆ ಸಹಾಯ ಮಾಡದಂತೆ ಖಡಕ್ ವಾರ್ನಿಗ್ ಕೊಟ್ಟ ಚೀನಾ! | Oneindia Kannada

"ಭಾರತದಲ್ಲಿ ಮೊದಲು ಪತ್ತೆಯಾದ, ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರ ಬೇರೆಲ್ಲಾ ರೂಪಾಂತರಗಳಿಗಿಂತಲೂ ಅತಿ ವೇಗವಾಗಿ ಹರಡುತ್ತಿದೆ. ಮಿಕ್ಕೆಲ್ಲಾ ರೂಪಾಂತರಗಳಿಗಿಂತ ಈ ರೂಪಾಂತರದ ಕುರಿತು ಹೆಚ್ಚು ಕಾಳಜಿ ವಹಿಸಬೇಕಿದೆ. ಈ ರೂಪಾಂತರ ಹರಡುತ್ತಿರುವ ವೇಗವನ್ನು ಗಮನಿಸಿದರೆ, ಶೀಘ್ರವೇ ಜಾಗತಿಕವಾಗಿ ಅತಿ ಪ್ರಬಲವಾದ ರೂಪಾಂತರವಾಗುವ ಸಾಧ್ಯತೆಯಿದೆ" ಎಂದು ಡಬ್ಲುಎಚ್‌ಒ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದರು.

English summary
Dramatic drop in Covid deaths but US must stay vigilant about Delta variant, warns Joe Biden to people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X