ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಮುಗಿಯುತ್ತಿದ್ದಂತೆ ಡಾ. ಆಂಥೋನಿ ಫೌಸಿ ಮನೆ ಕಡೆಗೆ..?

|
Google Oneindia Kannada News

ಒಂದಿಲ್ಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಜೊತೆಗೂ ಕಿತ್ತಾಡುತ್ತಿದ್ದಾರೆ. ಈಗಾಗಲೇ ಬಹಿರಂಗವಾಗಿ ಇಬ್ಬರೂ ಪರಸ್ಪರ ಬೈದಾಡಿದ್ದೂ ಆಗಿದೆ. ಇದು ಸಾಲದು ಅಂತಾ ಡಾ. ಆಂಥೋನಿ ಫೌಸಿ ಅವರನ್ನು ಮನೆಗೆ ಕಳಿಸಲು ಟ್ರಂಪ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ನಾಳೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ಮಾಡಲು ಕಡೆಯ ದಿನವಾಗಿದ್ದು, ನಾಳೆ ಚುನಾವಣೆ ಅಂತ್ಯವಾಗಲಿದೆ. ಹೀಗೆ ಚುನಾವಣೆ ಮುಗಿಯುತ್ತಿದ್ದಂತೆ ಡಾ. ಫೌಸಿ ಅವರಿಗೆ ಗೇಟ್ ಪಾಸ್ ನೀಡಲು ಟ್ರಂಪ್ ವೈಟ್‌ಹೌಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಟ್ರಂಪ್ ಮತ್ತು ಡಾ. ಫೌಸಿ ನಡುವೆ ಉತ್ತಮ ಒಡನಾಟವಿತ್ತು.

ಖುದ್ದು ಡಾ. ಫೌಸಿ ವೈಟ್‌ಹೌಸ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನ ಹಾಡಿ ಹೊಗಳಿದ್ದರು. ಟ್ರಂಪ್ ಕೂಡ ಡಾ. ಫೌಸಿ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಆದರೆ ಅದ್ಯಾವಾಗ ಕೊರೊನಾ ಕಂಟ್ರೋಲ್ ಬಗ್ಗೆ ಇಬ್ಬರ ಮಧ್ಯೆ ಜಗಳ ಆರಂಭವಾಯಿತೋ, ಅಂದಿನಿಂದ ಡಾ. ಫೌಸಿ ಮತ್ತು ಟ್ರಂಪ್ ಹಾವು-ಮುಂಗಸಿಯಂತೆ ಕಿತ್ತಾಡುತ್ತಿದ್ದಾರೆ.

ಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿ ಅಮೆರಿಕದಲ್ಲಿ ಎಲ್ಲಾ ಸರಿದಾರಿಗೆ ಬರಲು 2 ವರ್ಷ ಬೇಕು: ಆಂಥೋನಿ ಫೌಸಿ

ಕೊರೊನಾ ಕಂಟ್ರೋಲ್ ಮಾಡಲು ಮಾಸ್ಕ್ ಹಾಕಬೇಕಿಲ್ಲ ಎಂದು ಟ್ರಂಪ್ ಮತ್ತು ಟ್ರಂಪ್ ಬೆಂಬಲಿಗರು ವಾದಿಸುವಾಗ ಡಾ. ಫೌಸಿ ಇದನ್ನು ವಿರೋಧಿಸಿದ್ದರು. ಕೊರೊನಾ ಹರಡದಂತೆ ತಡೆಯುವುದಕ್ಕೆ ಮಾಸ್ಕ್‌ ಹಾಕಲೇಬೇಕೆಂದು ಡಾ. ಫೌಸಿ ವಾದಿಸಿದ್ದರು. ಆದರೆ ತನ್ನದೇ ಆಡಳಿತದ ಅಧಿಕಾರಿ ತನ್ನ ನಿರ್ಧಾರದ ವಿರುದ್ಧ ಮಾತನಾಡಿದ್ದು ಟ್ರಂಪ್‌ಗೆ ಬಿಲ್‌ಕುಲ್ ಇಷ್ಟವಾಗಲಿಲ್ಲ. ಹೀಗಾಗಿ ಅಂದಿನಿಂದಲೂ ಡಾ. ಆಂಥೋನಿ ಫೌಸಿ ಅವರನ್ನು ಕಂಡರೆ ಡೊನಾಲ್ಡ್ ಟ್ರಂಪ್‌ ಕೆಂಡ ಕಾರುತ್ತಿದ್ದಾರೆ.

ಉಡಾಯಿಸುವುದರಲ್ಲಿ ಟ್ರಂಪ್ ಎಕ್ಸ್‌ಪರ್ಟ್..!

ಉಡಾಯಿಸುವುದರಲ್ಲಿ ಟ್ರಂಪ್ ಎಕ್ಸ್‌ಪರ್ಟ್..!

ಅಮೆರಿಕದಲ್ಲಿ ಟ್ರಂಪ್ 'ಫೈಯರ್ಡ್' (ಕೆಲಸದಿಂದ ತೆಗೆದು ಹಾಕು) ಡೈಲಾಗ್‌ನಿಂದಲೇ ಫೇಮಸ್. ತಮ್ಮ ಮಾತನ್ನು ಕೇಳದ ಅಧಿಕಾರಿಗಳನ್ನು ಮುಲಾಜಿಲ್ಲದೆ ಟ್ರಂಪ್ ಕೆಲಸದಿಂದ ತೆಗೆದು ಹಾಕುತ್ತಾರೆ. ಹೀಗೆ ತಾವು ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಹಲವು ಅಧಿಕಾರಿಗಳನ್ನು ಡೊನಾಲ್ಡ್ ಟ್ರಂಪ್ ವೈಟ್‌ಹೌಸ್‌ನಿಂದ ಹೊರಗೆ ಉಡಾಯಿಸಿದ್ದರು. ಬಳಿಕ ಒಂದಷ್ಟು ಶಾಂತರಾದರೂ, ಚುನಾವಣೆ ಸಂದರ್ಭದಲ್ಲಿ ತಮ್ಮ ಹಿಂದಿನ ವರ್ತನೆಯನ್ನ ಟ್ರಂಪ್ ಮುಂದುವರಿಸಿದ್ದಾರೆ. ಇದೀಗ ಡಾ. ಫೌಸಿ ಸರದಿ ಬಂದಿದ್ದು, ಚುನಾವಣೆ ಮುಗಿದ ತಕ್ಷಣ ಡಾ. ಫೌಸಿ ಮನೆಗೆ ಹೋಗೋದು ಪಕ್ಕಾ ಎನ್ನಲಾಗುತ್ತಿದೆ.

ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ: ಅಮೆರಿಕದ 'ನಾಸ್ಟ್ರಡಾಮಸ್'

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಮಾಸ್ಕ್ ವಿಚಾರಕ್ಕೆ ಮಹಾಯುದ್ಧ..!

ಅಮೆರಿಕದಲ್ಲಿ 2020ರ ಚುನಾವಣೆ ಮಾಸ್ಕ್ ಹಾಕುವವರು ಹಾಗೂ ಮಾಸ್ಕ್ ಹಾಕದೇ ಇರುವವರ ನಡುವಿನ ಮಹಾಯುದ್ಧವಾಗಿ ಮಾರ್ಪಟ್ಟಿದೆ. ಟ್ರಂಪ್ ಮತ್ತು ಬೆಂಬಲಿಗರು ಮಾಸ್ಕ್ ತೊಡುವ ವಿಚಾರಕ್ಕೆ ವಿರೋಧವನ್ನ ತೋರುತ್ತಾ ಬಂದಿದ್ದರೆ, ಬಿಡೆನ್ ಮತ್ತು ಡೆಮಾಕ್ರಟಿಕ್ ನಾಯಕರು ಮಾಸ್ಕ್ ಕಡ್ಡಾಯ ಮಾಡಿ ಎನ್ನುತ್ತಿದ್ದಾರೆ. ಆದರೆ ಟ್ರಂಪ್ ಮಾತ್ರ ಮಾಸ್ಕ್ ವಿಚಾರವಾಗಿ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು.

ಕೊರೊನಾ ವಿರುದ್ಧ ಮಾಸ್ಕ್ ಉಪಯೋಗಕ್ಕೆ ಬರುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಕಡೆಗೆ ಟ್ರಂಪ್‌ಗೂ ಡೆಡ್ಲಿ ಕೊರೊನಾ ವಕ್ಕರಿಸುವುದಕ್ಕೂ ಕೆಲವುದಿನಗಳ ಹಿಂದೆ ಆಘಾತಕಾರಿ ಘಟನೆ ನಡೆದಿತ್ತು. ಅಧಿಕೃತ ನಿವಾಸವಾದ ವೈಟ್‌ಹೌಸ್‌ನಲ್ಲಿ ಟ್ರಂಪ್ ಆಯೋಜಿಸಿದ್ದ ಸಭೆಯಲ್ಲಿ ಮಾಸ್ಕ್ ತೊಡದೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಹಗ್ ಕೊಟ್ಟಿದ್ದರು. ಈ ವೀಡಿಯೋ ಇವತ್ತಿಗೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಟ್ರಂಪ್ ಪ್ರಚಾರದಿಂದ 30000 ಜನರಿಗೆ ಕೊರೊನಾವೈರಸ್, 700 ಮಂದಿ ಸಾವುಟ್ರಂಪ್ ಪ್ರಚಾರದಿಂದ 30000 ಜನರಿಗೆ ಕೊರೊನಾವೈರಸ್, 700 ಮಂದಿ ಸಾವು

ವೈದ್ಯರನ್ನೂ ಬೈದಿದ್ದ ಟ್ರಂಪ್..!

ವೈದ್ಯರನ್ನೂ ಬೈದಿದ್ದ ಟ್ರಂಪ್..!

ಶನಿವಾರ ಚುನಾವಣಾ ಪ್ರಚಾರ ನಡೆಸುತ್ತಿದ್ದ ಟ್ರಂಪ್, ದಿಢೀರ್ ಅಮೆರಿಕದ ವೈದ್ಯರ ಮೇಲೆ ಕೋಪಗೊಂಡು, ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಕೊರೊನಾ ಸೋಂಕಿನಿಂದ ಅಮೆರಿಕನ್ನರು ಪ್ರಾಣಬಿಡುತ್ತಿದ್ದರೆ ವೈದ್ಯರು ದುಡ್ಡು ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದರು ಟ್ರಂಪ್. 2020ರ ಅಧ್ಯಕ್ಷೀಯ ಚುನಾವಣೆ 3ನೇ ಡಿಬೆಟ್‌ನಲ್ಲೂ ಟ್ರಂಪ್ ಇದೇ ರೀತಿ ಹೇಳಿಕೆ ನೀಡಿದ್ದರು. ನಾನು ಹೇಳುತ್ತಿದ್ದೇನೆ ಕೊರೊನಾ ತೊಲಗುತ್ತಿದೆ, ಕೊರೊನಾ ತೊಲಗುತ್ತಿದೆ ಅಂತಾ. ಕೊರೊನಾ ಇನ್ನುಮುಂದೆ ಇರಲು ಸಾಧ್ಯವಿಲ್ಲ ಎಂದು ಉದ್ಘರಿಸಿದ್ದರು. ಮರುದಿನವೇ ಅಮೆರಿಕ ಕೊರೊನಾ ಸೋಂಕಿತರ ವಿಚಾರದಲ್ಲಿ ಮತ್ತೊಂದು ದಾಖಲೆ ಬರೆದಿತ್ತು.

ಒಂದೇ ದಿನದಲ್ಲಿ 83 ಸಾವಿರ ಜನರಿಗೆ ಸೋಂಕು ತಗುಲಿತ್ತು. ಹೀಗೆ ಟ್ರಂಪ್ ಕೊರೊನಾ ಸೋಂಕು ನಿಭಾಯಿಸುವ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೆ, ಕೊರೊನಾ ಬಗ್ಗೆ ಮಾತನಾಡುವಾಗಲೂ ನಾನಾ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಇದೀಗ ಡಾ. ಫೌಸಿ ಜೊತೆಗೂ ಟ್ರಂಪ್ ತಿಕ್ಕಾಟ ಮುಂದುವರಿದಿದೆ.

ಟೆಸ್ಟಿಂಗ್ ಕಡಿಮೆ ಮಾಡಿದ್ರೆ ಕೇಸ್‌ ಇಳಿಕೆ, ಅಮೆರಿಕ ಅಧಿಕಾರಿಗಳ ವಿರುದ್ಧ ಆರೋಪಟೆಸ್ಟಿಂಗ್ ಕಡಿಮೆ ಮಾಡಿದ್ರೆ ಕೇಸ್‌ ಇಳಿಕೆ, ಅಮೆರಿಕ ಅಧಿಕಾರಿಗಳ ವಿರುದ್ಧ ಆರೋಪ

ಮುಂದಿನ 6 ವಾರಗಳು ಭಯಾನಕ

ಮುಂದಿನ 6 ವಾರಗಳು ಭಯಾನಕ

ಹೌದು, ಅಮೆರಿಕ ನಾಯಕರಿಗೆ ಈಗಾಗಲೇ ತಜ್ಞರು ನೀಡಿರುವ ಎಚ್ಚರಿಕೆಯಂತೆ ಮುಂದಿನ 6 ವಾರಗಳು ಭಾರಿ ಗಂಡಾಂತರದಿಂದ ಕೂಡಿರಬಹುದು. ಇದಕ್ಕೆಲ್ಲಾ ಪ್ರಮುಖ ಕಾರಣ ಚಳಿಗಾಲ. ಅಮೆರಿಕ ಭೂಮಧ್ಯ ರೇಖೆಯ ಉತ್ತರ ಭಾಗದಲ್ಲಿ ಹರಡಿಕೊಂಡಿದೆ. ಹೀಗಾಗಿ ಉತ್ತರ ಧ್ರುವ ಪ್ರದೇಶಕ್ಕೆ ಸಾಕಷ್ಟು ಹತ್ತಿರದಲ್ಲಿದೆ. ಚಳಿಗಾಲದ ಪರಿಣಾಮ ನವೆಂಬರ್-ಡಿಸೆಂಬರ್ ವೇಳೆಗೆ ಪ್ರಾರಂಭವಾಗಿ ಜನವರಿ-ಫೆಬ್ರವರಿ ತಿಂಗಳವರೆಗೂ ಮುಂದುವರಿಯಲಿದೆ. ಅದರಲ್ಲೂ ಮುಂದಿನ 6 ವಾರಗಳು ಅಮೆರಿಕನ್ನರ ಪಾಲಿಗೆ ಹಾರಿಬಲ್ ಎಂದು ತಜ್ಞ ವೈದ್ಯರು ವಾರ್ನಿಂಗ್ ಕೊಟ್ಟಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

English summary
Quarrel between Donald Trump and Dr. Fauci has reached a climax. Trump may fire Dr. Fauci from his post after the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X