• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

‘ಭಾರತ ಕೊರೊನಾ ವಿರುದ್ಧ ಗೆಲ್ಲುತ್ತದೆ, ಆದಷ್ಟು ಬೇಗ ವ್ಯಾಕ್ಸಿನ್ ಸಿಗಬೇಕಿದೆ’

|

ಜಗತ್ತಿಗೆ ಗೊತ್ತು ಭಾರತದ ಸಾಮರ್ಥ್ಯ ಏನೆಂಬುದು. ಅದರಲ್ಲೂ ಭಾರತದ ಔಷಧ ವಲಯಕ್ಕೆ ಶತಮಾನಗಳ ಇತಿಹಾಸವಿದೆ. ಇಂಥ ಹೊತ್ತಲ್ಲೇ ಕೊರೊನಾ 2ನೇ ಅಲೆ ರೂಪದಲ್ಲಿ ಬಂದು ವಕ್ಕರಿಸಿದ್ದು, ಜಗತ್ತಿನಾದ್ಯಂತ ಭಾರತಕ್ಕೆ ಸಹಾಯ ಸಿಗುತ್ತಿದೆ.

ಭಾರತದ 2ನೇ ಅಲೆ ವಿಚಾರವಾಗಿ ಮಾತನಾಡಿರುವ ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ, ಭಾರತ ಕೊರೊನಾ ವಿರುದ್ಧ ಗೆಲ್ಲುತ್ತದೆ. ಆದ್ರೆ ವೇಗವಾಗಿ ಎಲ್ಲರಿಗೂ ವ್ಯಾಕ್ಸಿನ್ ಸಿಗಬೇಕಾಗಿದೆ ಎಂದಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧದ ಭಾರತದ ಹೋರಾಟ ಸ್ಮರಿಸಿದ್ದಾರೆ ಡಾ. ಫೌಸಿ. ಎಲ್ಲರಿಗೂ ಗೊತ್ತಿದೆ ಭಾರತ ಇಡೀ ಜಗತ್ತಿನಲ್ಲೇ ಅತಿದೊಡ್ಡ ಔಷಧ ವಲಯ ಹೊಂದಿರುವ ದೇಶ ಎಂದು.

ಆದರೆ ಈಗ ಯಾಕೆ ವ್ಯಾಕ್ಸಿನ್ ಉತ್ಪಾದನೆಯಲ್ಲಿ ಹಿಂದುಳಿದಿದೆ ಎಂಬುದೇ ಪ್ರಶ್ನೆಯಾಗಿದೆ. ಕೂಡಲೇ ಅಲರ್ಟ್ ಆಗಿ, ವ್ಯಾಕ್ಸಿನ್ ಕಚ್ಚಾವಸ್ತು ಸಿಗುವ ದೇಶಗಳ ಜೊತೆಗೆ ಸಂಪರ್ಕ ಸಾಧಿಸಬೇಕಿದೆ. ಹಾಗೇ ಭಾರತದ ಪ್ರಜೆಗಳಿಗೆ ಸಾಧ್ಯವಾದಷ್ಟು ಬೇಗ ವ್ಯಾಕ್ಸಿನ್ ನೀಡಬೇಕಿದೆ ಎಂದಿದ್ದಾರೆ ಡಾ. ಫೌಸಿ. ಅಮೆರಿಕ ಅಧ್ಯಕ್ಷ ಬೈಡನ್ ಸಂಪುಟದ ಹಿರಿಯ ಆರೋಗ್ಯ ಸಲಹೆಗಾರರೂ ಆಗಿರುವ ಡಾ. ಫೌಸಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

 1 ಬಿಲಿಯನ್ ನೀಡಲಿದೆ ಕೆನಡಾ

1 ಬಿಲಿಯನ್ ನೀಡಲಿದೆ ಕೆನಡಾ

ಕೊರೊನಾ ಕೂಪದಲ್ಲಿ ನರಳುತ್ತಿರುವ ಭಾರತಕ್ಕೆ ಜಗತ್ತು ನೆರವು ನೀಡುತ್ತಿದೆ. ಭಾರತದ ಪಾಲಿಗೆ ಶತ್ರುಗಳೆಂದು ತಿಳಿದಿದ್ದ ರಾಷ್ಟ್ರಗಳು ಕೂಡ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ನೆರವು ನೀಡಲು ಮುಂದಾಗಿವೆ. ಮತ್ತೊಂದ್ಕಡೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಷ್ಟೋ ಇಷ್ಟೋ ಸಹಾಯ ಮಾಡುತ್ತಿವೆ. ಆದರೆ ಕೆನಡಾ ಎಲ್ಲಾ ಎಲ್ಲೆಗಳನ್ನೂ ಮೀರಿ ಸುಮಾರು 7500 ಕೋಟಿ ರೂಪಾಯಿ, ಅಂದರೆ ಬರೋಬ್ಬರಿ ಒಂದು ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ನೆರವು ಘೋಷಿಸಿತ್ತು. ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡಲು ಕೆನಡಾ ಸಿದ್ಧವೆಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಕೆಲ ದಿನಗಳ ಹಿಂದೆ ಪ್ರಕಟಿಸಿದ್ದರು.

ಅಮೆರಿಕದಂತೆ ಭಾರತದಲ್ಲೂ ಆತಂಕ..?

ಅಮೆರಿಕದಂತೆ ಭಾರತದಲ್ಲೂ ಆತಂಕ..?

ದೊಡ್ಡಣ್ಣ ಎಂಬ ಪಟ್ಟ ಕಟ್ಟಿಕೊಂಡಿದ್ದ ಅಮೆರಿಕ ಕೊರೊನಾ ಕಾಟಕ್ಕೆ ನಲುಗಿದೆ. ಆದ್ರೆ ಈಗಿನ ಸ್ಥಿತಿ ನೋಡಿದರೆ ಭಾರತದಲ್ಲೂ ಅಮೆರಿಕದ ರೀತಿ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ಜಗತ್ತಿನಾದ್ಯಂತ ಭಾರತದ ಕೊರೊನಾ ಪರಿಸ್ಥಿತಿ ಕಂಡು ಕಳವಳ ವ್ಯಕ್ತವಾಗಿದೆ. ಈಗಾಗಲೇ ಹಲವು ದೇಶಗಳು ಸಹಾಯ ಮಾಡಿವೆ, ಇದೇ ರೀತಿ ಅಮೆರಿಕ ಕೂಡ ಒಂದಷ್ಟು ಸಹಾಯ ಮಾಡಿದೆ. ಆದರೂ ಸದ್ಯ ಕೊರೊನಾ ಕಂಟ್ರೋಲ್‌ಗೆ ಸಿಗುವುದು ಅನುಮಾನ. ಈ ಪರಿಸ್ಥಿತಿ ನೋಡಿದರೆ ವ್ಯಾಕ್ಸಿನ್ ಒಂದೇ ಕೊರೊನಾ ವಿರುದ್ಧ ಉಳಿದಿರುವ ಬ್ರಹ್ಮಾಸ್ತ್ರವಾಗಿದೆ.

ಅಮೆರಿಕದಲ್ಲಿ 3 ಕೋಟಿ ಸೋಂಕಿತರು..!

ಅಮೆರಿಕದಲ್ಲಿ 3 ಕೋಟಿ ಸೋಂಕಿತರು..!

ಅಮೆರಿಕದಲ್ಲಿ ಈವರೆಗೆ 3 ಕೋಟಿ 36 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 2 ಕೋಟಿ 40 ಲಕ್ಷದ ಗಡಿ ದಾಟಿದೆ. 6 ಲಕ್ಷ 98 ಸಾವಿರ ಅಮೆರಿಕನ್ನರು ಕೊರೊನಾ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಭಾರತದಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈವರೆಗೆ ಸುಮಾರು 2 ಲಕ್ಷ 62 ಸಾವಿರ ಜನ ಭಾರತದಲ್ಲಿ ‘ಕೊರೊನಾ' ಸೋಂಕಿನಿಂದ ಪ್ರಾಣಬಿಟ್ಟಿದ್ದಾರೆ. ಇದೆಲ್ಲಾ ನೋಡುತ್ತಿದ್ದರೆ ಇನ್ನೂ ಕೆಲ ವಾರಗಳು ಭಯಾನಕ ಪರಿಸ್ಥಿತಿ ಇರಲಿದ್ದು, ಜನ ಕೊರೊನಾ ರೂಲ್ಸ್ ಫಾಲೋ ಮಾಡಬೇಕಿದೆ.

ಮಾಸ್ಕ್ ಧರಿಸುವ ಅಗತ್ಯವಿಲ್ಲ

ಮಾಸ್ಕ್ ಧರಿಸುವ ಅಗತ್ಯವಿಲ್ಲ

ಲಸಿಕೆ ಪಡೆಯುವವರೆಗೂ ಮಾಸ್ಕ್ ಧರಿಸಿ ನಂತರ ಅಗತ್ಯವಿಲ್ಲ ಎಂಬ ಮಾರ್ಗಸೂಚಿಯನ್ನು ಅಮೆರಿಕದಲ್ಲಿ ನೀಡಲಾಗಿದೆ. ಬಸ್, ವಿಮಾನ, ಆಸ್ಪತ್ರೆ, ಜೈಲು, ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಇದ್ದ ಕಠಿಣ ನಿಯಮ ಬದಲಾಗಿದೆ. ಇದು ಅಮೆರಿಕನ್ನರಿಗೆ ಗ್ರೇಟ್ ಡೇ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಈ ಮೂಲಕ ಕೊರೊನಾ ಪೂರ್ವ ಜೀವನಕ್ಕೆ ಅಮೆರಿಕ ಮರಳುವ ಹಾದಿಯಲ್ಲಿದೆ.

English summary
Joe Biden administration's top medical advisor Dr. Fauci has advised India to ramp the vaccine production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X