ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಿ7 ಶೃಂಗಸಭೆಗೆ ಭಾರತ, ರಷ್ಯಾ ಆಹ್ವಾನಿಸುವಲ್ಲಿ ಟ್ರಂಪ್ ವಿಫಲರಾಗುತ್ತಾರೆ'

|
Google Oneindia Kannada News

ವಾಷಿಂಗ್ಟನ್, ಜೂನ್ 3: ಜಿ7 ಶೃಂಗಸಭೆಗೆ ಭಾರತ ಹಾಗೂ ರಷ್ಯಾವನ್ನು ಆಹ್ವಾನಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಫಲರಾಗಲಿದ್ದಾರೆ ಎಂದು ಚೀನಾ ಹೇಳಿದೆ.

ಪ್ರತಿ ವರ್ಷವೂ ಅಮೆರಿಕ, ಯುಕೆ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಕೆನಡಾ ಈ ಏಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಭೆ ಸೇರುತ್ತಿದ್ದವು. ಆರ್ಥಿಕತೆ, ಹವಾಮಾನ ವೈಪರಿತ್ಯ, ಭದ್ರತೆ ಕುರಿತು ಚರ್ಚೆ ನಡೆಸುತ್ತಿದ್ದವು.

ಟ್ರಂಪ್ ಗೆ, 'ನಿಮ್ಮೂರಿಗೆ ಬರಲು ಒಲ್ಲೆ' ಎಂದ ಜರ್ಮನ್ ಚಾನ್ಸಲರ್ಟ್ರಂಪ್ ಗೆ, 'ನಿಮ್ಮೂರಿಗೆ ಬರಲು ಒಲ್ಲೆ' ಎಂದ ಜರ್ಮನ್ ಚಾನ್ಸಲರ್

ಈ ಬಾರಿ ಈ ಸಭೆಗೆ ಭಾರತ ಹಾಗೂ ರಷ್ಯಾವನ್ನು ಕೂಡ ಸೇರ್ಪಡೆ ಮಾಡಲು ಟ್ರಂಪ್ ನಿರ್ಧರಿಸಿದ್ದಾರೆ. ಹೀಗಾಗಿ ಜೂನ್‌ನಲ್ಲಿ ನಡೆಯಬೇಕಿದ್ದ ಸಭೆಯನ್ನು ಡಿಸೆಂಬರ್‌ಗೆ ಮುಂದೂಡಿದ್ದಾರೆ.

Doomed To Fail Trumps Plan To Invite India, Russia To G7 Upsets China

ಬೀಜಿಂಗ್ ವಿರುದ್ಧ ಟ್ರಂಪ್ ದ್ವೇಷ ಸಾಧಿಸುತ್ತಿರುವ ಕಾರಣ ಅವರು ಕುಖ್ಯಾತರಾಗುತ್ತಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ಜಾಹೋ ಲಿಜಿಯನ್ ಹೇಳಿದ್ದಾರೆ.

ಎಲ್ಲಾ ಅಂತಾರಾಷ್ಟ್ರೀಯ ಸಂಸ್ಥೆಗಳು, ಸಮ್ಮೇಳನಗಳು ಬಹುಪಕ್ಷೀಯತೆಯನ್ನು ಎತ್ತಹಿಡಿಯಲು, ವಿಶ್ವ ಶಾಂತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ದೇಶಗಳ ನಡುವಿನ ಪರಸ್ಪರ ನಂಬಿಕೆಗೆ ಅನುಕೂಲವಾಗಿರಬೇಕು ಎಂದು ಚೀನಾ ನಂಬಿದೆ ಎಂದರು.

ಹಾಗೆಯೇ ಕೊವಿಡ್ 19 ಕುರಿತು ಚೀನಾದ ಮೇಲೆ ಅಮೆರಿಕ ಮಾಡಿರುವ ಆರೋಪಗಳನ್ನು ಕೂಡ ತಳ್ಳಿ ಹಾಕಿದೆ. ಹಾಗೆಯೇ ಪುಟಿನ್ ಅವರ ಬಳಿ ಮಾತನಾಡಿ ಅವರನ್ನು ಜಿ7 ಶೃಂಗಸಭೆಗೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಚೀನಾದ ವುಹನ್ ಲ್ಯಾಬ್‌ನಿಂದಲೇ ಹರಡಿದೆ ಎಂದು ಆರೋಪ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಚೀನಾದ ವಿದ್ಯಾರ್ಥಿಗಳಿಗೂ ಅಮೆರಿಕ ಪ್ರವೇಶವನ್ನು ನಿರಾಕರಿಸಿದ್ದಾರೆ.

English summary
China on Tuesday strongly reacted to US President Donald Trump's plans to invite India, Russia, Australia and South Korea to G7 summit, saying that any attempts to draw a "small circle" against Beijing will be "doomed to fail and become unpopular".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X