ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕೊರೊನಾ ನೆಗೆಟಿವ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ಶ್ವೇತಭವನದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ಟ್ರಂಪ್ ಅವರಿಗೆ ಆ್ಯಂಟಿಜನ್ ಪರೀಕ್ಷೆ ಸೇರಿದಂತೆ ಇತರೆ ಸುಧಾರಿತ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಟ್ರಂಪ್ ಅವರು ಇದೀಗ ಗುಣಮುಖರಾಗಿದ್ದು, ಆದರೂ ಅವರ ಆರೋಗ್ಯ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Donald Trumps Doctor Says The US President Has Tested Negative For Coronavirus

ಕೆಲ ದಿನಗಳ ಹಿಂದಷ್ಟೇ ಡೊನಾಲ್ಡ್ ಟ್ರಂಪ್ ಅವರು ಕೊರೊನಾ ಸೋಂಕಿಗೊಳಗಾಗಿದ್ದರು. ನಂತರ ವೈದ್ಯರ ಸಲಹೆ ಮೇರೆಗೆ ಸೇನಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕು ತಗುಲಿದ ದಿನದಿಂದಲೂ ಟ್ರಂಪ್ ಅವರಿಗೆ ನಿಯಮಿತವಾಗಿ ಕೊವಿಡ್ ಪರೀಕ್ಷೆ ನಡೆಸಲಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಕೊವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.

ಟ್ರಂಪ್ ಚುನಾವಣಾ ಪ್ರಚಾರ ಆರಂಭಿಸಿದ್ದು, ಭಾಷಣದಲ್ಲಿ ಕೊವಿಡ್‌ 19ಗೆ ನನ್ನಲ್ಲಿ ಪ್ರತಿರೋಧವಿದೆ ಎಂದು ಹೇಳಿದ್ದಾರೆ.

ನನ್ನಲ್ಲಿ ಕೊವಿಡ್ 19ಗೆ ಪ್ರತಿರೋಧವಿದೆ ಎಂದ ಡೊನಾಲ್ಡ್ ಟ್ರಂಪ್ ನನ್ನಲ್ಲಿ ಕೊವಿಡ್ 19ಗೆ ಪ್ರತಿರೋಧವಿದೆ ಎಂದ ಡೊನಾಲ್ಡ್ ಟ್ರಂಪ್

ಅಮೆರಿಕದ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್ ಕೊವಿಡ್‌ಗೆ ನಾನು ರೋಗನಿರೋಧಕನೆಂಬಂತೆ ತೋರುತ್ತಿದೆ. ನನ್ನೊಳಗಿನ ರೋಗ ಪ್ರತಿರೋಧವು ದೀರ್ಘಕಾಲೀನವಾಗಬಹುದು, ಅಲ್ಪಕಾಲೀನವಾಗಿರಬಹುದು, ಅಥವಾ ಶಾಶ್ವತವಾಗಿರಬಹುದು ಇದರ ಬಗ್ಗೆ ನನಗೆ ತಿಳಿದಿಲ್ಲ. ಯಾರಿಗೂ ಗೊತ್ತಿಲ್ಲ ಆದರೆ ನಾನು ಮಾತ್ರ ಕೊವಿಡ್‌ಗೆ ಪ್ರತಿರೋಧಕ ಹೊಂದಿದ್ದೇನೆ ಎಂದು ಹೇಳಿದ್ದಾರೆ.

Recommended Video

AB DE Villiers ಆಟಕ್ಕೆ ಭಾರತದ ಕೋಚ್ ಫುಲ್ ಫಿದಾ | Oneindia Kannada

ಟ್ರಂಪ್ ಅವರು ಪ್ರಚಾರದಲ್ಲಿ ತೊಡಗಬಹುದು ಎಂದು ವೈದ್ಯರು ಹೇಳಿದ್ದಾರೆ. ಇತ್ತೀಚೆಗಷ್ಟೇ ಕೊರೊನಾ ವೈರಸ್‌ಗೆ ಒಳಗಾಗಿದ್ದ ಡೊನಾಲ್ಡ್ ಟ್ರಂಪ್ , ಮೂರು ದಿನ ಸೇನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಶ್ವೇತಭವನಕ್ಕೆ ಬಂದ ತಕ್ಷಣವೇ ಮಾಸ್ಕ್ ತೆಗೆದು ವಿವಾದವನ್ನೂ ಸೃಷ್ಟಿಸಿದ್ದರು.

English summary
Donald Trump's doctor says the US President has tested negative for coronavirus on consecutive days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X