ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 16: ಅಮೆರಿಕದಲ್ಲಿ ಮೆಕ್ಸಿಕೋ ಗಡಿ ನಿರ್ಮಾಣಕ್ಕೆ ಸಂಬಂಧಿಸಿದ ಬಿಕ್ಕಟ್ಟು ದಿನೇ-ದಿನೇ ಉಲ್ಬಣವಾಗುತ್ತಲೇ ಇದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?

ಶುಕ್ರವಾರ ಡೊನಾಲ್ಡ್ ಟ್ರಂಪ್ ಅವರು ಈ ಘೋಷಣೆ ಹೊರಡಿಸಿದ್ದಾರೆ. ಈಗಾಗಲೆ ಕಳೆದ 35 ದಿನಗಳಿಂದಲೂ ಅಮೆರಿಕದಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ.

ಮಹತ್ವದ 3 ಹುದ್ದೆಗೆ ಭಾರತೀಯ ಮೂಲದವರ ಶಿಫಾರಸ್ಸು ಮಾಡಿದ ಟ್ರಂಪ್ ಮಹತ್ವದ 3 ಹುದ್ದೆಗೆ ಭಾರತೀಯ ಮೂಲದವರ ಶಿಫಾರಸ್ಸು ಮಾಡಿದ ಟ್ರಂಪ್

ಮೆಕ್ಸಿಕೋ ಗಡಿಭಾಗದಲ್ಲಿ ತಡೆ ಗೋಡೆ ನಿರ್ಮಿಸುವುದು ಟ್ರಂಪ್ ಉದ್ದೇಶ, ಇಲ್ಲಿಂದ ಮಾದಕ ವಸ್ತುಗಳು, ಅಕ್ರಮ ವಲಸಿಗರು ಅಮೆರಿಕೆಗೆ ಪ್ರವೇಶಿಸುತ್ತಾರೆ. ಇದು ಅಮೆರಿಕದ ಮೇಲೆ ಆರ್ಥಿಕ, ಸಾಮಾಜಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದು ಟ್ರಂಪ್ ವಾದ. ಆದರೆ ಇದಕ್ಕೆ ಅಮೆರಿಕದ ತೆರಿಗಾದರ ಹಣ ಬಳಸುವಾಗಿ ಟ್ರಂಪ್ ಹೇಳಿದ್ದಾರೆ.

Donald Trumph delared national emergency in America on friday

ಇದಕ್ಕೆ ಅಮೆರಿಕ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಟ್ರಂಪ್ ಈ ಮೊದಲು ತಡೆಗೋಡೆ ನಿರ್ಮಿಸಲು ಮೆಕ್ಸಿಕೊ ಹಣ ನೀಡುತ್ತದೆ ಎನ್ನುತ್ತಿದ್ದರು ಆದರೆ ಈಗ ತೆರಿಗೆದಾರರ ಹಣ ಬಳಸುವುದಾಗಿ ಹೇಳುತ್ತಿದ್ದಾರೆ, ಇದನ್ನು ಸಾಧ್ಯವಾಗಲು ನಾವು ಬಿಡುವುದಿಲ್ಲವೆಂದು ಪಣತೊಟ್ಟು ನಿಂತಿದ್ದಾರೆ.

2020ರಲ್ಲಿ ಟ್ರಂಪ್ ಅಧಿಕಾರಕ್ಕೆ ಬರಲಿ : ಶೇ 65ರಷ್ಟು ಮಂದಿ ಅಭಿಮತ!2020ರಲ್ಲಿ ಟ್ರಂಪ್ ಅಧಿಕಾರಕ್ಕೆ ಬರಲಿ : ಶೇ 65ರಷ್ಟು ಮಂದಿ ಅಭಿಮತ!

ತುರ್ತ ಪರಿಸ್ಥಿತಿ ಘೋಷಿಸಿರುವುದು ಅಧ್ಯಕ್ಷರ ಅಧಿಕಾರದ ದುರ್ಬಳಕೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಇದರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿವೆ.

English summary
US presidnet Donald Trumph declared national emergency of friday. He is trying to build wall in southern border of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X