ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊತ್ತಿದ್ದೂ ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ: ಗುಡುಗಿದ ಡೊನಾಲ್ಡ್ ಟ್ರಂಪ್!

|
Google Oneindia Kannada News

ವಿಶ್ವದಾದ್ಯಂತ 24 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಡೆಡ್ಲಿ ಕೊರೊನಾ ವೈರಸ್ ನಿಂದ ಒಂದುವರೆ ಲಕ್ಷಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಟಲಿ, ಫ್ರಾನ್ಸ್, ಸ್ಪೇನ್ ನಂತೆ ಕೋವಿಡ್-19 ನಿಂದಾಗಿ ವಿಶ್ವದ ದೊಡ್ಡಣ್ಣ ಅಮೇರಿಕಾ ಕೂಡ ಅಕ್ಷರಶಃ ನಲುಗಿ ಹೋಗಿದೆ.

ಹೀಗಿರುವಾಗಲೇ, ಚೀನಾ ವಿರುದ್ಧ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊತ ಕೊತ ಕುದಿಯುತ್ತಿದ್ದಾರೆ. ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ನಿಂದಲೇ ಕೊರೊನಾ ವೈರಸ್ ಲೀಕ್ ಆಗಿದೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಆ ಬಗ್ಗೆ ತನಿಖೆ ನಡೆಸಲು ಅಮೇರಿಕಾ ಮುಂದಾಗಿದೆ.

ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!ಕೊರೊನಾ ವೈರಸ್ ಜನ್ಮ ರಹಸ್ಯ: ಸ್ಫೋಟಕ ಮಾಹಿತಿ ಬಯಲು.!

ಈ ಮಧ್ಯೆ ಚೀನಾದ ವಿರುದ್ಧ ಪತ್ರೀಕಾರದ ಮಾತುಗಳನ್ನಾಡಿದ್ದಾರೆ ಡೊನಾಲ್ಡ್ ಟ್ರಂಪ್. ''ಗೊತ್ತಿದ್ದೂ, ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ'' ಎಂದು ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ ಗುಡುಗಿದ್ದಾರೆ.

ಚೀನಾ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ.!

ಚೀನಾ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ.!

ಕೊರೊನಾ ವೈರಸ್ ನಿಂದಾಗುವ ಅನಾಹುತ ಗೊತ್ತಿದ್ದರೂ, ಅದು ಇತರೆ ದೇಶಗಳಿಗೆ ಹಬ್ಬುವಲ್ಲಿ ಚೀನಾದ ಪಾತ್ರ ಇದೆ ಎಂದು ಸಾಬೀತಾದರೆ, ಚೀನಾ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ'' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಪಾರದರ್ಶಕತೆ ಹೊಂದಿಲ್ಲ

ಪಾರದರ್ಶಕತೆ ಹೊಂದಿಲ್ಲ

''ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಚೀನಾ ಸಮರ್ಪಕವಾಗಿ ನಡೆದುಕೊಂಡಿಲ್ಲ. ವೈರಸ್ ಕುರಿತಾದ ಮಾಹಿತಿ, ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣದಲ್ಲೂ ಚೀನಾ ಸರ್ಕಾರ ಪಾರದರ್ಶಕತೆ ಹೊಂದಿಲ್ಲ'' ಎಂದು ವೈಟ್ ಹೌಸ್ ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!

ಪತ್ರೀಕಾರ ನಿಶ್ಚಿತ

ಪತ್ರೀಕಾರ ನಿಶ್ಚಿತ

''ಚೀನಾ ಕಡೆಯಿಂದ ತಪ್ಪಾಗಿದೆ. ತಪ್ಪು ತಪ್ಪೇ. ಆದ್ರೆ, ಆ ತಪ್ಪು ಉದ್ದೇಶ ಪೂರ್ವಕವಾಗಿ ಆಗಿದ್ದರೆ, ಪ್ರತೀಕಾರ ನಿಶ್ಚಿತ'' ಎಂದು ಡೊನಾಲ್ಡ್ ಟ್ರಂಪ್ ಗುಟುರು ಹಾಕಿದ್ದಾರೆ.

ಆರ್ಥಿಕ ನೆರವು ಸ್ಥಗಿತ

ಆರ್ಥಿಕ ನೆರವು ಸ್ಥಗಿತ

ವುಹಾನ್ ಲ್ಯಾಬ್ ನಿಂದ ಕೊರೊನಾ ವೈರಸ್ ಸೋರಿಕೆ ಆಯ್ತಾ ಎಂಬುದರ ಬಗ್ಗೆ ಅಮೇರಿಕಾ ಸದ್ಯ ತನಿಖೆ ಆರಂಭಿಸಿದೆ. ಇತ್ತ ಚೀನಾ ಪರ ಮೃದು ಧೋರಣೆ ತೋರಿದ WHOಗೆ ಅಮೇರಿಕಾ ಆರ್ಥಿಕ ನೆರವು ನೀಡುವುದನ್ನು ನಿಲ್ಲಿಸಿದೆ. ಹಾಗೇ, ವುಹಾನ್ ಲ್ಯಾಬ್ ಗೂ ಆರ್ಥಿಕ ನೆರವನ್ನು ಸ್ಥಗಿತಗೊಳಿಸುವ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿಕೆ ಕೊಟ್ಟಿದ್ದಾರೆ.

English summary
Donald Trump warns consequences if China is knowingly responsible for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X