ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ: ಆಲ್‌ ಈಸ್ ವೆಲ್ ಎಂದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜನವರಿ 8: ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, 'ಆಲ್‌ ಈಸ್ ವೆಲ್‌' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಇರಾನಿನ ಕ್ಷಿಪಣಿ ದಾಳಿ ಬಗ್ಗೆ ಶೀಘ್ರ ಹೇಳಿಕೆ ನೀಡುವುದಾಗಿ ತಿಳಿಸಿರುವ ಟ್ರಂಪ್ ಇದೇ ವೇಳೆ ಅವರು ದೇಶದ ಮಿಲಿಟರಿ ಪಡೆ ವಿಶ್ವದ ಅತ್ಯಂತ ಶಕ್ತಿಶಾಲಿ ಎಂದು ಶ್ಲಾಘಿಸಿದ್ದಾರೆ. ಇರಾಕಿನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ 12ಕ್ಕೂ ಅಧಿಕ ಖಂಡಾಂತರ ದಾಳಿ ನಡೆಸಲಾಗಿದೆ. ರಾಕೆಟ್ ದಾಳಿ ನಡೆದಿರುವುದನ್ನು ಪೆಂಟಗಾನ್ ಖಚಿತಪಡಿಸಿದೆ.

ಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ

ಅನಿ ಅಲ್ ಅಸದ್, ಇಬ್ರಿಲ್ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಸಾವು-ನೋವು ಆಗಿರುವ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇರಾನ್ ಸೇನಾ ಮುಖ್ಯಸ್ಥ ಸುಲೈಮಾನಿ ಹತ್ಯೆಯ ಬಳಿಕ ತೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಸಂಬಂಧ ಹಳಸಿದೆ.

Donald Trump Tweets All Is Well

'ಎಲ್ಲವೂ ಸರಿ ಇದೆ' ಎಂದು ಟ್ವೀಟ್ ಮಾಡಿರುವ ಅವರು ಇರಾನಿನಲ್ಲಿರುವ ಎರಡು ಮಿಲಿಟರಿ ನೆಲೆಗಳಿಂದ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಸಾವು-ನೋವುಗಳು ಮತ್ತು ಹಾನಿಯ ಬಗ್ಗೆ ಅಂದಾಜು ಮೌಲ್ಯಮಾಪನ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

English summary
America President Donald Trump says All is well after more than a dozen Iranian missiles were fired at two bases housing US troops in Iraq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X