ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಟ್ರಂಪ್ ಬರ್ತಾ ಇಲ್ಲ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2019ರ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಬಂದಿದೆ.

ಭಾರತ ಸರ್ಕಾರ ನೀಡಿರುವ ಆಹ್ವಾನವನ್ನು ಟ್ರಂಪ್ ಸರ್ಕಾರ ನಿರಾಕರಿಸಿದ್ದಾರೆ. ಯುಎಸ್ಎ ಅಧಿಕಾರಿಗಳು, ಅಜಿತ್ ದೋವಲ್ ಗೆ ನೀಡಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. ಪತ್ರದಲ್ಲಿ ಟ್ರಂಪ್ ಪರ ಅಧಿಕಾರಿಗಳು ಕ್ಷಮೆ ಕೋರಿದ್ದಾರೆ.

ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್ ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್

"ಭಾರತದೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಅಮೆರಿಕ ಬದ್ಧವಾಗಿದೆ" ಎಂದು ಕಳೆದ ಫೆಬ್ರವರಿಯಲ್ಲಿ, ಡೊನಾಲ್ಡ್ ಟ್ರಂಪ್ ಸರ್ಕಾರ ಹೇಳಿತ್ತು.

Donald Trump Turns Down Indias Republic Day Invite

ಏನು ಕಾರಣ: ಜನವರಿ 26ರ ಸುಮಾರಿಗೆ ಸ್ಟೇಟ್ ಆಫ್ ದಿ ಯುನಿಯನ್ ಅಡ್ರೆಸ್ (ರಾಷ್ಟ್ರದ ಹೆಸರಿನಲ್ಲಿ ಭಾಷಣ) ಕಾರ್ಯಕ್ರಮವಿದೆ. ರಷ್ಯಾದ ಜತೆ ಒಪ್ಪಂದ, ಮಧ್ಯಪ್ರಾಚ್ಯದ ತೈಲ ಗೊಂದಲ ಇನ್ನು ಮುಗಿದಿಲ್ಲ ಹೀಗಾಗಿ, ಭಾರತ ಸರ್ಕಾರದ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ರಂಪ್ ಸರ್ಕಾರ ಹೇಳಿದೆ.

ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್ ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್

ಆದರೆ, ಈ ಹಿಂದೆ ಬರಾಕ್ ಒಮಾಬಾ ಅವರು 2015 ರಲ್ಲಿ ಭಾರತದ ಆಹ್ವಾನ ಸ್ವೀಕರಿಸಿ ಭಾರತಕ್ಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಟ್ರಂಪ್ ಅವರಿಗೆ ಫೆಬ್ರವರಿ ತಿಂಗಳಿನಲ್ಲಿ ಭಾರತ ಪ್ರವಾಸ ಕೈಗೊಳ್ಳುವಂತೆ ಕೋರಿ, ಭಾರತದ ಅಧಿಕಾರಿಗಳು ಮತ್ತೊಮ್ಮೆ ಆಹ್ವಾನ ಕಳಿಸಲು ಮುಂದಾಗಿದ್ದಾರೆ.

English summary
US President Donald Trump has turned down India's invitation to be the chief guest at next year's Republic Day parade, CNN-News18 has learnt. Sources said the US authorities conveyed Trump's decision in a letter to NSA Ajit Doval recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X