ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

WHOಗೆ ನೀಡುತ್ತಿದ್ದ ಅನುದಾನ ಶಾಶ್ವತವಾಗಿ ಕಡಿತ: ಟ್ರಂಪ್ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಮೇ 19: ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಕೈಗೊಂಬೆಯಾಗಿದೆ. ನೀಡುತ್ತಿದ್ದ ಅನುದಾನವನ್ನು ಶಾಶ್ವತವಾಗಿ ಕಡಿತಗೊಳಿಸುವ ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.

ಏಪ್ರಿಲ್ ಮಧ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಅಮೆರಿಕ ತಡೆಹಿಡಿದಿತ್ತು. ಅದಾದ ಬಳಿಕ ಚೀನಾ ನೀಡುವಷ್ಟೇ ಅನುದಾನ ನೀಡುವುದಾಗಿಯೂ ತಿಳಿಸಿತ್ತು.

WHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕWHOಗೆ ಚೀನಾದಷ್ಟೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದ ಅಮೆರಿಕ

ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಗೆ ವಾರ್ಷಿಕ 450 ಮಿಲಿಯನ್ ಡಾಲರ್ ಅನುದಾನ ನೀಡುತ್ತಿದೆ. ಇದು ವಿಶ್ವದ ಯಾವುದೇ ರಾಷ್ಟ್ರ ನೀಡುವುದಕ್ಕಿಂತ ಅಧಿಕವಾಗಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು ನಮಗೆ ಸ್ಪಂದಿಸುತ್ತಿಲ್ಲ. ಅದು ಚೀನಾದ ಕೈಗೊಂಬೆಯಾಗಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

 Donald Trump Threatens Permanent Freeze On WHO Funding In 30 Days

ವಿಶ್ವ ಆರೋಗ್ಯ ಸಂಸ್ಥೆಯು ನಮಗೆ ಸಾಕಷ್ಟು ಕೆಟ್ಟ ಉಪದೇಶಗಳನ್ನು ನೀಡಿದ್ದಾರೆ.ಅದರಿಂದ ನಮಗೆ ಇಂತಹ ಪರಿಸ್ಥಿತಿ ಬಂದಿದೆ. 30 ದಿನಗಳ ಕಾಲಾವಕಾಶವನ್ನು ನೀಡುತ್ತಿದ್ದೇನೆ. ಅಷ್ಟರೊಳಗೆ ಪರಿಸ್ಥಿತಿ ಹತೋಟಿಗೆ ತರದಿದ್ದರೆ ಶಾಶ್ವತವಾಗಿ ಅನುದಾನ ಕಡಿತಗೊಳಿಸುವುದಾಗಿ ತಿಳಿಸಿದರು.

ಚೀನಾ ವಾರ್ಷಿಕ 300 ಕೋಟಿ ನೀಡುತ್ತಿದೆ. ನಾವು ನೀಡುತ್ತಿರುವ ಅನುದಾನವನ್ನು 300 ಕೋಟಿಗೆ ಇಳಿಸುವ ಆಲೋಚನೆ ಇದೆ ಎಂದು ಹೇಳಿದ್ದಾರೆ.

English summary
President Donald Trump threatened to permanently freeze US funding to the World Health Organization unless "substantive improvements" were made within the next 30 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X