ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋತರೂ ಮುಗಿಯದ ಟ್ರಂಪ್ ಕಿರಿಕ್: ನನಗೆ ಮತ ಹುಡುಕಿಕೊಡಿ ಎಂದು ಅಧಿಕಾರಿಗೆ ಬೆದರಿಕೆ

|
Google Oneindia Kannada News

ವಾಷಿಂಗ್ಟನ್, ಜನವರಿ 4: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಅನುಭವಿಸಿ, ಅಧಿಕಾರ ತ್ಯಜಿಸುವ ದಿನಗಳು ಸಮೀಪಿಸುತ್ತಿದ್ದರೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನಗಳನ್ನು ಕೈಬಿಟ್ಟಿಲ್ಲ. ಜೋ ಬೈಡನ್ ಎದುರಿನ ಸೋಲನ್ನು ನಿರಾಕರಿಸಲು ತಮಗೆ ಸಾಕಷ್ಟು ಪ್ರಮಾಣದಲ್ಲಿ ಮತಗಳನ್ನು ಹುಡುಕುವಂತೆ ಜಾರ್ಜಿಯಾದ ಕಾರ್ಯದರ್ಶಿಗೆ ಡೊನಾಲ್ಡ್ ಟ್ರಂಪ್ ಒತ್ತಡ ಹೇರುವ ಆಡಿಯೋ ಟೇಪ್ ಅನ್ನು ಅಮೆರಿಕದ ಮಾಧ್ಯಮವೊಂದು ಬಿಡುಗಡೆ ಮಾಡಿದೆ.

ಜಾರ್ಜಿಯಾದಲ್ಲಿ ಸೆನೆಟ್‌ನ ನಿಯಂತ್ರಣವನ್ನು ನಿಯಂತ್ರಿಸುವ ಎರಡು ಚುನಾವಣೆಗಳು ನಡೆಯಲಿದ್ದು, ರಿಪಬ್ಲಿಕನ್ ಸಂಸದರು ಬೈಡನ್ ಆಯ್ಕೆಯನ್ನು ಪ್ರಶ್ನಿಸುವಂತಹ ಸವಾಲಿಗೆ ಸಿದ್ಧರಾಗಿದ್ದಾರೆ, ಜತೆಗೆ ವಾಷಿಂಗ್ಟನ್‌ನಲ್ಲಿ ಟ್ರಂಪ್ ಪರ ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ. ಇಂತಹ ಬಿರುಸಿನ ರಾಜಕೀಯ ಚಟುವಟಿಕೆಗಳ ನಿರೀಕ್ಷೆ ನಡುವೆ ಆಡಿಯೋ ಬಾಂಬ್ ಗದ್ದಲಕ್ಕೆ ಕಾರಣವಾಗಿದೆ.

ಡೊನಾಲ್ಡ್ ಟ್ರಂಪ್ 'ವೈಟ್ ಹೌಸ್’ ಬಿಟ್ಟು ಮನೆಗೆ ಹೋಗೋದು ಗ್ಯಾರಂಟಿ..!ಡೊನಾಲ್ಡ್ ಟ್ರಂಪ್ 'ವೈಟ್ ಹೌಸ್’ ಬಿಟ್ಟು ಮನೆಗೆ ಹೋಗೋದು ಗ್ಯಾರಂಟಿ..!

ಟ್ರಂಪ್ ಮತ್ತು ಅವರ ಸಹೋದ್ಯೋಗಿ ರಿಪಬ್ಲಿಕನ್ ಬ್ರಾಡ್ ರಫೆನ್ಸ್‌ಪೆರ್ಗರ್ ನಡುವೆ ನಡೆದ ಸಂಭಾಷಣೆಯ ಧ್ವನಿಮುದ್ರಣವನ್ನು ವಾಷಿಂಗ್ಟನ್ ಪೋಸ್ಟ್ ಬಿಡುಗಡೆ ಮಾಡಿದೆ. ಬೈಡನ್ ಅವರ ಗೆಲುವನ್ನು ನಿರಾಕರಿಸುವಲ್ಲಿ ವಿಫಲವಾದರೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಅವರು ರಫೆನ್ಸ್‌ಪೆರ್ಗರ್ ಮತ್ತು ಇನ್ನೊಬ್ಬ ಅಧಿಕಾರಿಗೆ ಬೆದರಿಕೆ ಹಾಕಿರುವುದು ದಾಖಲಾಗಿದೆ. ಮುಂದೆ ಓದಿ.

ಸಾವಿರಾರು ಮತ ಬಿಟ್ಟಿದ್ದೀರಿ

ಸಾವಿರಾರು ಮತ ಬಿಟ್ಟಿದ್ದೀರಿ

'ಈ ರೀತಿ ಹೇಳುವುದಲ್ಲಿ ಯಾವ ತಪ್ಪೂ ಇಲ್ಲ. ನೀವು ಮತಗಳನ್ನು ಮರು ಎಣಿಕೆ ಮಾಡಿದ್ದೀರಿ. ನೂರಾರು ಸಾವಿರ ಮತಗಳನ್ನು ಬಿಟ್ಟುಬಿಟ್ಟಿದ್ದೀರಿ' ಎಂದು ಟ್ರಂಪ್ ಹೇಳಿದ್ದಾರೆ. 'ಮಿ. ಪ್ರೆಸಿಡೆಂಟ್, ನೀವು ಹಾಕುತ್ತಿರುವ ಸವಾಲಿನಂತೆ,ನಿಮ್ಮ ಬಳಿ ಇರುವ ಲೆಕ್ಕಗಳು ತಪ್ಪಿವೆ' ಎಂದು ರಫೆನ್ಸ್‌ಪೆರ್ಗರ್ ಪ್ರತಿಕ್ರಿಯಿಸಿದ್ದಾರೆ.

ನನಗೆ 11,780 ಮತ ಬೇಕು

ನನಗೆ 11,780 ಮತ ಬೇಕು

ರಿಪಬ್ಲಿಕನ್ ಪ್ರಾಬಲ್ಯವಿದ್ದ ಜಾರ್ಜಿಯಾದಲ್ಲಿ ಬೈಡನ್ ಅವರು 12,000ಕ್ಕಿಂತ ಕಡಿಮೆ ಮತಗಳಿಂದ ಗೆದ್ದಿದ್ದಾರೆ. ಆದರೆ ಸತತ ಮರು ಮತ ಎಣಿಕೆ ಹಾಗೂ ಲೆಕ್ಕ ಪರಿಶೋಧನೆ ಬಳಿಕವೂ ಇದು ಬದಲಾಗಿಲ್ಲ. 'ಈಗಿರುವ ಅಂತರ ಕೇವಲ 11,779. ಅದನ್ನು ಒಪ್ಪುತ್ತೀರಾ ಬ್ರಾಡ್? ಸರಿ ತಾನೆ? ನೋಡಿ, ನನಗೆ ಇಷ್ಟೇ ಬೇಕಿರುವುದು. ನನಗೆ 11,780 ಮತಗಳು ಸಿಗಬೇಕಿವೆಯಷ್ಟೇ' ಎಂದು ಟ್ರಂಪ್ ಹೇಳಿದ್ದಾರೆ.

ಜಾರ್ಜಿಯಾ ಗೆದ್ದರೂ ಉಪಯೋಗವಿಲ್ಲ

ಜಾರ್ಜಿಯಾ ಗೆದ್ದರೂ ಉಪಯೋಗವಿಲ್ಲ

ಜಾರ್ಜಿಯಾದಲ್ಲಿನ ಗೆಲುವಿಗಾಗಿ ಟ್ರಂಪ್ ಹಂಬಲಿಸುತ್ತಿರುವುದು ಅಚ್ಚರಿಗೂ ಕಾರಣವಾಗಿದೆ. ಏಕೆಂದರೆ ಜಾರ್ಜಿಯಾದಲ್ಲಿ 16 ಎಲೆಕ್ಟೊರಲ್ ಮತಗಳಿವೆ. ಜಾರ್ಜಿಯಾದ ಫಲಿತಾಂಶ ಟ್ರಂಪ್‌ಗೆ ಒಲಿದರೂ ಒಟ್ಟಾರೆ ಫಲಿತಾಂಶದ ಚಿತ್ರದ ಬದಲಾಗುವುದಿಲ್ಲ. ಬೈಡನ್ 306 ಎಲೆಕ್ಟೊರಲ್ ಮತಗಳನ್ನು ಹೊಂದಿದ್ದರೆ, ಟ್ರಂಪ್ ಬಳಿ 232 ಮತಗಳಷ್ಟೇ ಇವೆ.

ಟ್ರಂಪ್-ರೆಫನ್ಸ್‌ಪೆರ್ಗರ್ ಟ್ವೀಟ್ ಯುದ್ಧ

ಟ್ರಂಪ್-ರೆಫನ್ಸ್‌ಪೆರ್ಗರ್ ಟ್ವೀಟ್ ಯುದ್ಧ

ಆಡಿಯೋ ಕರೆಯ ಬಿಡುಗಡೆಗೂ ಮುನ್ನ ಅದರ ಬಗ್ಗೆ ಟ್ವೀಟ್ ಮಾಡಿದ್ದ ಟ್ರಂಪ್, 'ಮೇಜಿನಡಿ ಮತಪತ್ರ ಹಗರಣ, ಮತಪತ್ರಗಳ ನಾಶ, ನಿಯಂತ್ರಣದಲ್ಲಿಲ್ಲದ ಮತದಾರರು, ಸತ್ತ ಮತದಾರರು ಹಾಗೂ ಮತ್ತಿತರ ವಿಚಾರಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ರಫೆನ್ಸ್‌ಪೆರ್ಗರ್ ಅವರಿಗೆ ಸಾಧ್ಯವಾಗುತ್ತಿಲ್ಲ ಅಥವಾ ಆಸಕ್ತಿಯಿಲ್ಲ' ಎಂದು ಹೇಳಿದ್ದರು.


ಅದಕ್ಕೆ ಪ್ರತಿಕ್ರಿಯಿಸಿದ್ದ ರೆಫನ್ಸ್‌ಪೆರ್ಗರ್, 'ನೀವು ಹೇಳುತ್ತಿರುವುದು ಸರಿಯಲ್ಲ. ಸತ್ಯ ಹೊರಬೀಳಲಿದೆ' ಎಂದು ಹೇಳಿದ್ದರು.

English summary
An audio tape released by US media of Donald Trump threatening Georgia officer Brad Raffensperger to find votes for him or face big risk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X