ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಕ್ಯಾಪಿಟಲ್‌ಗೆ ಮುತ್ತಿಗೆ ಹಾಕಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ, ಕೋಲಾಹಲ

|
Google Oneindia Kannada News

ವಾಷಿಂಗ್ಟನ್, ಜನವರಿ 7: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ತೀವ್ರ ಘರ್ಷಣೆಗೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಅಧಿಕಾರ ತ್ಯಜಿಸಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೂ ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಳ್ಳಲು ಸಿದ್ಧರಾಗಿಲ್ಲ. ಈ ನಡುವೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬುಧವಾರ ಪ್ರತಿಭಟನೆ ಆರಂಭಿಸಿದ್ದು, ಕೋಲಾಹಲ ಸೃಷ್ಟಿಯಾಗಿದೆ. ಟ್ರಂಪ್ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿ ಯುಎಸ್ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ಗದ್ದಲ ಸೃಷ್ಟಿಸುವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Recommended Video

ಅಮೆರಿಕದಲ್ಲಿ ಕೋಲಾಹಲ!! | DonaldTrump | US Capitol Violence | Oneindia Kannada

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಬಳಿಕ ಆಕೆ ನೆಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ವಿಡಿಯೋ ಹರಿದಾಡುತ್ತಿದೆ. ಗುಂಡೇಟಿನಿಂದ ಮೃತಪಟ್ಟ ಒಬ್ಬ ಸಂತ್ರಸ್ತೆಯನ್ನು ಕ್ಯಾಪಿಟಲ್‌ನಿಂದ ಸ್ಥಳಾಂತರಿಸಲಾಗಿದೆ. ಕೆಲವರು ಗಾಯಗೊಂಡಿದ್ದಾರೆ ಎಂದು ತುರ್ತು ಪರಿಸ್ಥಿತಿ ನಿರ್ವಹಣಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಭದ್ರತಾ ತಡೆಗಳನ್ನು ಭೇದಿಸಿ ಒಳನುಗ್ಗಿದ ಪ್ರತಿಭಟನಾಕಾರರು ಗದ್ದಲ ಸೃಷ್ಟಿಸಿದರು. ಚುನಾವಣೆಯಲ್ಲಿ ಟ್ರಂಪ್ ಅವರೇ ಗೆದ್ದಿದ್ದಾರೆ ಎಂದು ಕೂಗಿದರು. ಇದರಿಂದ ಕಾಂಗ್ರೆಸ್ ಸದಸ್ಯರು ಸದನದಿಂದ ಪರಾರಿಯಾದರೆ, ಸೆನೆಟ್ ಸದಸ್ಯರು ತಮ್ಮ ತಮ್ಮ ಕಚೇರಿ ಬಾಗಿಲುಗಳನ್ನು ಒಳಗಿನಿಂದ ಭದ್ರಪಡಿಸಿಕೊಂಡರು. ಮುಂದೆ ಓದಿ.

ಮತಗಳ ಕುರಿತು ಚರ್ಚೆ

ಮತಗಳ ಕುರಿತು ಚರ್ಚೆ

ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೆನೆಟ್ ಸದಸ್ಯರು ಅರಿಝೋನಾದಲ್ಲಿನ ಎಲೆಕ್ಟೊರಲ್ ಮತಗಳ ಕುರಿತು ಟ್ರಂಪ್ ಬೆಂಬಲಿಗರ ಆಕ್ಷೇಪಣೆ ವಿಚಾರವಾಗಿ ಚರ್ಚಿಸುತ್ತಿದ್ದರು. ಆ ಸಂದರ್ಭದಲ್ಲಿ ಟ್ರಂಪ್ ಬೆಂಬಲಿಗರು ಸೆನೆಟ್ ಚೇಂಬರ್‌ನ ಹಾಲ್‌ನಲ್ಲಿ ನುಗ್ಗಿ ಜೋರಾಗಿ ಗಲಾಟೆ ಮಾಡಿದ್ದರಿಂದ ಚರ್ಚೆ ಮೊಟಕುಗೊಂಡಿತು.

ಶಾಂತಿಗಾಗಿ ಟ್ರಂಪ್ ಕರೆ

ಶಾಂತಿಗಾಗಿ ಟ್ರಂಪ್ ಕರೆ

ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಬಳಿಕ 'ಯುಎಸ್ ಕ್ಯಾಪಿಟಲ್‌ನಲ್ಲಿನ ಪ್ರತಿಯೊಬ್ಬರೂ ಶಾಂತಯುತರಾಗಿರುವಂತೆ ಕೋರುತ್ತೇನೆ. ಹಿಂಸಾಚಾರ ಬೇಡ. ನೆನಪಿಡಿ ನಮ್ಮದು ಕಾನೂನು ಮತ್ತು ಸುವ್ಯವಸ್ಥೆಯ ಪಕ್ಷ. ಕಾನೂನು ಮತ್ತು ಸುವ್ಯವಸ್ಥೆಗೆ ಗೌರವ ನೀಡಿ' ಎಂದು ಹೇಳಿದ್ದಾರೆ.

ಟ್ರಂಪ್ ಟ್ವಿಟ್ಟರ್ ಖಾತೆ ಲಾಕ್

ಈ ನಡುವೆ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ 12 ಗಂಟೆಗಳ ಕಾಲ ಲಾಕ್ ಮಾಡಿದೆ. ಈ ಪ್ರತಿಭಟನೆ ಕುರಿತು ಟ್ರಂಪ್ ಅನೇಕ ಟ್ವೀಟ್‌ಗಳನ್ನು ಮಾಡಿದ್ದರು. ಅವುಗಳನ್ನು ಟ್ವಿಟ್ಟರ್ ಸಂಸ್ಥೆ ಅಳಿಸಿ ಹಾಕಿದೆ. ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುವಂತಹ ಟ್ವೀಟ್‌ಗಳನ್ನು ಪದೇ ಪದೇ ಮಾಡಿದ್ದಕ್ಕಾಗಿ ಟ್ರಂಪ್ ಅವರ ಖಾತೆಯನ್ನು 12 ಗಂಟೆ ಬಳಕೆ ಮಾಡಲಾಗದಂತೆ ತಡೆದಿದೆ.

ಪೊಲೀಸರಿಂದ ಫೈರಿಂಗ್

ಅಮೆರಿಕ ಚುನಾವಣೆಯ ಫಲಿತಾಂಶದ ದೃಢೀಕರಣದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಂಘರ್ಷ ತೀವ್ರಗೊಂಡ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಅನೇಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
Donald Trump supporters storms into US Capitol building in anger over his election defeat and created chaos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X